ಈದ್ ಪಾರ್ಟಿಯಲ್ಲಿ ಬಿರಿಯಾನಿ ಜೊತೆ ಆಭರಣ ನುಂಗಿದ ವ್ಯಕ್ತಿ

By Anusha KbFirst Published May 6, 2022, 2:33 PM IST
Highlights
  • ಈದ್‌ ಪಾರ್ಟಿಗೆ ಸ್ನೇಹಿತೆ ಹಾಗೂ ಆಕೆಯ ಬಾಯ್‌ಫ್ರೆಂಡ್‌ನ ಕರೆಸಿದ ಮಹಿಳೆ
  • ಅಲ್ಲಿ ಬಿರಿಯಾನಿ ಜೊತೆ ಆಭರಣವನ್ನು ನುಂಗಿದ ಗೆಳತಿಯ ಸ್ನೇಹಿತ
  • ಆಭರಣ ನಾಪತ್ತೆ ಬಳಿಕ ಪ್ರಕರಣ ದಾಖಲಿಸಿದ ಮಹಿಳೆ
  • ಎನಿಮಾ ನೀಡಿ ಚಿನ್ನಾಭರಣ ಹೊರ ತೆಗೆದ ವ್ಯಕ್ತಿ
     

ಚೆನ್ನೈ: ತನ್ನ ಸ್ನೇಹಿತೆಯೊಂದಿಗೆ ಈದ್‌ ಪಾರ್ಟಿಗೆ ತೆರಳಿದ್ದ ವ್ಯಕ್ತಿಯೊಬ್ಬ ಅಲ್ಲಿ ಬಿರಿಯಾನಿ ಜೊತೆ ಆಭರಣವನ್ನು ಕೂಡ ನುಂಗಿದ ಘಟನೆ ನಡೆದಿದೆ. 32 ವರ್ಷದ ಸ್ನೇಹಿತರೊಬ್ಬರು ತನ್ನಗೆಳತಿ ಜೊತೆ ಈದ್ ಪಾರ್ಟಿಗೆ ಹೋಗಿದ್ದರು. ಅಲ್ಲಿ ಅವರು 1.45 ಲಕ್ಷ ಮೌಲ್ಯದ ಆಭರಣವನ್ನು ಬಿರಿಯಾನಿ ಜೊತೆ ನುಂಗಿದ್ದಾರೆ. ಆಭರಣ ಕಾಣೆಯಾದ ಬಳಿಕ ಈದ್‌ ಪಾರ್ಟಿ ಹೋಸ್ಟ್ ಮಾಡಿದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ನಂತರ ಈ ವ್ಯಕ್ತಿಯ ಹೊಟ್ಟೆಯನ್ನು ಸ್ಕ್ಯಾನ್ ಮಾಡಿದಾಗ ಒಳಗೆ ಜ್ಯುವೆಲ್ಲರಿ ಇರುವುದು ಪತ್ತೆಯಾಗಿದೆ.

ಮೇ. 3 ರಂದು ಮಂಗಳವಾರ ಆಯೋಜಿಸಿದ್ದ ಈದ್ ಪಾರ್ಟಿಯಲ್ಲಿ ಆತ ಆಭರಣ ನುಂಗಿದ್ದು, ನಂತರ ವೈದ್ಯರು ಈತನ ಹೊಟ್ಟೆಯಲ್ಲಿದ್ದ ಆಭರಣ ದೇಹದಿಂದ ಹೊರಗೆ ಬರಲು ಎನಿಮಾ ನೀಡಿದ್ದರು.  ಈ ಪಾರ್ಟಿ ಆಯೋಜಿಸಿದ್ದ ಮಹಿಳೆ ಜ್ಯುವೆಲ್ಲರಿ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಗೆಳತಿ ಹಾಗೂ ಆಕೆಯ ಬಾಯ್‌ಫ್ರೆಂಡ್‌ನ್ನು ಈ ಈದ್‌ ಪಾರ್ಟಿಗೆ ಆಹ್ವಾನಿಸಿದ್ದರು. ಆದರೆ ಗೆಳತಿಯ ಬಾಯ್‌ಫ್ರೆಂಡ್ ಬಿರಿಯಾನಿ ತಿನ್ನುವುದರ ಜೊತೆಗೆ  1.45 ಲಕ್ಷ ಮೌಲ್ಯದ ಜ್ಯುವೆಲ್ಲರಿಯನ್ನು ನುಂಗಿದ್ದಾನೆ. ಆತ ಈ ಕೃತ್ಯವನ್ನೆಸಗುವಾಗ ಪಾನಮತ್ತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ವಪ್ನಾ ಸುರೇಶ್‌ ಸ್ಮಗ್ಲಿಂಗ್ ಚಿನ್ನ ಭಯೋತ್ಪಾದನೆಗೆ ಬಳಕೆ?

ಆದರೆ ಸಮಾರಂಭ ಮುಗಿದ ನಂತರ ಅತಿಥಿಗಳೆಲ್ಲಾ ತೆರಳಿದ್ದು, ಕಾರ್ಯಕ್ರಮ ಆಯೋಜಿಸಿದ್ದವರಿಗೆ ಬಿರುವಿನಲ್ಲಿಟ್ಟಿದ್ದ ತಮ್ಮ ಡೈಮಂಡ್ ನೆಕ್ಲೇಸ್‌, ಚಿನ್ನದ ಸರ, ವಜ್ರದ ಪೆಂಡೆಂಟ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಎಲ್ಲೆಡೆ ತಪಾಸಣೆ ನಡೆಸಿದ ಅವರಿಗೆ ಗೆಳತಿಯ ಬಾಯ್‌ಫ್ರೆಂಡ್ ಮೇಲೆ ಸಂಶಯ ಬಂದಿದೆ. ನಂತರ ಅವರು ವಿರುಗಂಬಕ್ಕಮ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ನಂತರ ಪೊಲೀಸರು ಮೇ.4 ರಂದು ಬುಧವಾರ ಆತನನ್ನು ಕರೆದು ಪ್ರಶ್ನಿಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ನಂತರ ಆತನ ದೇಹವನ್ನು ಸ್ಕ್ಯಾನ್‌ ಮಾಡಿದಾಗ ಆಭರಣಗಳಿನ್ನು ಆತನ ಹೊಟ್ಟೆಯಲ್ಲೇ ಉಳಿದಿರುವುದು ಕಂಡು ಬಂದಿದೆ. ನಂತರ ವೈದ್ಯರು ಆತನಿಗೆ ಅದು ಆತನ ಹೊಟ್ಟೆಯಿಂದ ಹೊರಗೆ ಬರುವಂತಾಗಲು ಎನಿಮಾ ನೀಡಿದ್ದಾರೆ. ನಂತರ ಗುರುವಾರ 95,000 ಮೌಲ್ಯದ ನೆಕ್ಲೇಸ್‌ ಹಾಗೂ  25,000 ಮೌಲ್ಯದ ಚಿನ್ನದ ಆಭರಣ ಆತನ ದೇಹದಿಂದ ಹೊರ ಬಂದಿದೆ. 

ತಪ್ಪಿಸಿಕೊಳ್ಳೋ ಟೈಮಲ್ಲಿ ಫೋನ್ ಆನ್ ಮಾಡಿದ ಮಗಳು: ಸಿಕ್ಕಿಬಿದ್ದ ಸ್ವಪ್ನಾ ಸುರೇಶ್

ಆದಾಗ್ಯೂ ವಜ್ರದ ಪೆಂಡೆಂಟ್ ಆತನ ದೇಹದೊಳಗೆ ಉಳಿದಿದೆ. ನಂತರ ಅದನ್ನು ಹೊರ ಪಡೆಯಲು ವೈದ್ಯರು ಆತನಿಗೆ ಲಕ್ಸ್‌ಟಿವ್‌ ಅನ್ನು ನೀಡಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಇದಾದ ಬಳಿಕ ಈದ್‌ ಆಭರಣಗಳ ಮಾಲಕಿ ಪ್ರಕರಣವನ್ನು ದಾಖಲಿಸಲು ಬಯಸದ ಕಾರಣ ತಮ್ಮ ದೂರನ್ನು ಹಿಂಪಡೆದರು.

click me!