ಯಾರ ನೆರವು ಸಿಗಲಿಲ್ಲ, ತಾಯಿ ಶವ ಹೆಗಲ ಮೇಲೆ ಹೊತ್ತು ಸಾಗಿದ ಮಗ!

By Suvarna News  |  First Published May 15, 2021, 8:31 PM IST
  • ಕುಟುಂಬಸ್ಥರು ನೆರವಿಗೆ ಧಾವಿಸಲಿಲ್ಲ, ಜಿಲ್ಲಾಡಳಿತ ಸ್ಪಂದಿಸಲಿಲ್ಲ
  • ಸೋಂಕಿನಿಂದ ಮೃತಪಟ್ಟ ತಾಯಿ ಶವವನ್ನು ಹೆಗಲಮೇಲೆ ಹೊತ್ತ ಸಾಗಿದ ಮಗ
  • ಮನಕಲುಕುವ ಘಟನೆಗೆ ಮರುಗಿದ ಭಾರತ

ಹಿಮಾಚಲ ಪ್ರದೇಶ(ಮೇ.15): ಕೊರೋನಾ ಸೋಂಕು ತಗುಲಿದರೆ ಆಸ್ಪತ್ರೆ ಬೆಡ್, ಆಕ್ಸಿಜನ್, ಔಷಧಿ ಸಿಗುವುದು ಕಷ್ಟದ ಕೆಲಸ. ಇದರ ಜೊತೆಗೆ ನೆರವು ನೀಡಲು ಮುಂದೆ ಬರುವವರ ಸಂಖ್ಯೆ ತೀರಾ ವಿರಳ. ಇದೀಗ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ನಡೆದ ಘಟನೆ ಮನಕಲುಕುತ್ತಿದೆ. ಕುಟುಂಬಸ್ಥರು ನೆರವಿಗೆ ಬರಲಿಲ್ಲ, ಗ್ರಾಮಸ್ಥರು ಕೊರೋನಾಗೆ ಅಂಜಿ ಮನೆಯೊಳಗೆ ಬಂಧಿಯಾದರು, ಇತ್ತ ಜಿಲ್ಲಾಡಳಿತ ಕೈಕಟ್ಟಿ ಕುಳಿತಿತು. ಯಾರ ನೆರವು ಸಿಗದೆ ಕೊರೋನಾ ಸೋಂಕಿನಿಂದ ಮೃತಪಟ್ಟ ತಾಯಿ ಶವವನ್ನು ಹೆಗಲ ಮೇಲೆ ಹೊತ್ತು ಸಾಗಿದ ಘಟನೆ ನಡೆದಿದೆ.

ಹುಬ್ಬಳ್ಳೀಲಿ ಆರ್‌ಎಸ್‌ಎಸ್‌ನಿಂದ ಸೋಂಕಿತರ ಉಚಿತ ಶವಸಂಸ್ಕಾರ

Latest Videos

undefined

ಭಾರತದ ಯಾವ ಪರಿಸ್ಥಿತಿಗೆ ತಲುಪಿದೆ ಅನ್ನೋ ಸ್ಪಷ್ಟ ಚಿತ್ರಣ ಈ ಘಟನೆಯಲ್ಲಿದೆ.  ರಾಣಿತಾಲ್ ಗ್ರಾಮಾದ ವೀರ್ ಸಿಂಗ್ ಪರಿಸ್ಥಿತಿ ಯಾರಿಗೂ ಬರಬಾರದು. ವೀರ್ ಸಿಂಗ್ ಕೊರೋನಾ ಕಾರಣದಿಂದ ನಿಧನರಾಗಿದ್ದಾರೆ. ತಾಯಿಯ ಅಂತ್ಯಕ್ರಿಯೆ ನಡೆಸಲು ವೀರ್‌ಸಿಂಗ್‌ಗೆ ಯಾರೂ ನೆರವಾಗಲಿಲ್ಲ. ಕೊರೋನಾ ನಿಯಮದ ಪ್ರಕಾರ ಸ್ಥಳೀಯ ಜಿಲ್ಲಾಡಳಿತ ಎಲ್ಲಾ ನೆರವು ನೀಡಬೇಕು. ಆದರೆ ಜಿಲ್ಲಾಡಳಿತ ಏನೂ ಮಾಡದೇ ಕೈತೊಳೆದುಕೊಂಡಿತು. 

ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕೊರೋನಾಗೆ ಅಂಜಿ ನೆರವಿಗೆ ಬರಲಿಲ್ಲ. ಪರಿಣಾಣ ತಾಯಿಯ ಅಂತ್ಯಕ್ರಿಯೆಗೆ ಯಾರ ನೆರವು ಸಿಗಲಿಲ್ಲ. ಕೈಯಲ್ಲಿದ್ದ ಹಣವೆಲ್ಲಾ ತಾಯಿ ಚಿಕಿತ್ಸೆಗೆ ಖರ್ಚಾಗಿತ್ತು. ಆಂಬ್ಯುಲೆನ್ಸ್ ನೀಡಲೂ ಹಣವಿಲ್ಲ. ಕೊನೆಗೆ ಶವಸಂಸ್ಕಾರ ಮಾಡಲು ಬೇರೆ ದಾರಿ ಕಾಣದ ವೀರ್ ಸಿಂಗ್ ತಾಯಿ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಸಾಗಿದ್ದಾರೆ.

ಮನೆಯಲ್ಲಿ ನಿಧನರಾಗಿದ್ದ ತಾಯಿ ಶವವನ್ನು ಹೆಗಲ ಮೇಲೆ ಹೊತ್ತು ರುದ್ರಭೂಮಿಗೆ ತೆರಳಿದ ಮಗ ವೀರ್ ಸಿಂಗ್, ಯಾರ ನೆರವೂ ಸಿಗದೆ ಅಂತ್ಯಕ್ರಿಯೆ ಮಾಡಿದ್ದಾನೆ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಚಾರ ತಿಳಿದ ಸಿಎಂ ಜಯರಾಮ್ ಠಾಕೂರ್ ಡೆಪ್ಯೂಟಿ ಕಮಿಷನರ್ ಬಳಿ ಮಾಹಿತಿ ಪಡೆದಿದ್ದಾರೆ. ಇಷ್ಟೇ ಅಲ್ಲ, ಇದೇ ವೇಳೆ ಗೌರವಯುತ ಅಂತ್ಯಸಂಸ್ಕಾರ ಎಲ್ಲರ ಹಕ್ಕು, ಈ ಕುರಿತು ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ವಾರ್ನಿಂಗ್ ನೀಡಿದ್ದಾರೆ. 
 

click me!