21 ಆಮೆ, ಲ್ಯಾಬ್ರಡಾರ್ ವರದಕ್ಷಿಣೆ ಕೇಳಿದ ವರ..!

By Suvarna News  |  First Published Jul 22, 2021, 5:27 PM IST
  • ವಿಚಿತ್ರ ವರದಕ್ಷಿಣೆ ಕೇಳಿದ ವರ ಮಹಾಶಯ
  • 21 ಆಮೆ, ಲ್ಯಾಬ್ರಡಾರ್ ನಾಯಿ ಬೇಕೆಂದ ಯುವಕ

ಮುಂಬೈ(ಜು.22): ಭಾರತದಲ್ಲಿ ವಿವಾಹ ಎಂದಮೇಲೆ ವರದಕ್ಷಿಣೆ ಎಂಬ ವಿಚಾರ ಹೊಸದಲ್ಲ. ಎಷ್ಟೇ ಕಾನೂನು ಬಂದರೂ, ಎಷ್ಟೇ ವಿದ್ಯಾವಂತರಾದರೂ ಇಂದಿಗೂ ನಮ್ಮಲ್ಲಿ ವರದಕ್ಷಿಣೆ ಪದ್ಧತಿ ಇದೆ ಎಂಬುದು ವಾಸ್ತವ.

ಜಮೀನು, ವಾಹನ, ಚಿನ್ನ, ನಗದು ಹೀಗೆ ಬಗೆ ಬಗೆಯ ರೂಪದಲ್ಲಿ ವರದಕ್ಷಿಣೆ ಪಡೆಯುತ್ತಾರೆ. ಇಂದಿನ ವಿವಾಹಗಳಲ್ಲಿ ಉಡುಗೊರೆ ಹೆಸರಲ್ಲಿಯೂ ಲಕ್ಷ ಲಕ್ಷ ವ್ಯಯಿಸಲಾಗುತ್ತದೆ.

Tap to resize

Latest Videos

ವರದಕ್ಷಿಣೆ ಪಿಡುಗು ತೊಲಗಿಸಲು ಕೇರಳ ರಾಜ್ಯಪಾಲರ ಉಪವಾಸ ಸತ್ಯಾಗ್ರಹ; ಸರ್ಕಾರಕ್ಕೆ ಮುಜುಗರ!

ಮಹಾರಾಷ್ಟ್ರದಲ್ಲಿ ಒಬ್ಬ ವ್ಯಕ್ತಿ ಮತ್ತು ಅವರ ಕುಟುಂಬದ ವಿರುದ್ಧ 21 ಆಮೆ, ಕಪ್ಪು ಲ್ಯಾಬ್ರಡಾರ್ ಮತ್ತು ವರದಕ್ಷಿಣೆ ಎಂದು ₹ 10 ಲಕ್ಷ ಕೋರಿದ್ದಕ್ಕೆ ಎಫ್‌ಐಆರ್ ದಾಖಲಿಸಲಾಗಿದೆ.

ವಧುವಿನ ಕುಟುಂಬವು ಬೇಡಿಕೆಗಳನ್ನು ಪೂರೈಸಲು ಅಸಹಾಯಕತೆಯನ್ನು ವ್ಯಕ್ತಪಡಿಸಿದ ನಂತರ ಆರೋಪಿಗಳು ಮದುವೆಯನ್ನು ರದ್ದುಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗಳಿಗೆ ಅಪ್ಪನ ಭರ್ಜರಿ ಉಡುಗೊರೆ: 1,000 ಕೆಜಿ ಮೀನು, 10 ಕುರಿ, 250 ಕೆಜಿ ಸಿಹಿ!

ಫೆಬ್ರವರಿಯಲ್ಲಿ ನಿಶ್ಚಿತಾರ್ಥದ ಮೊದಲು ವಧುವಿನ ಕುಟುಂಬವು ₹ 2 ಲಕ್ಷ ನಗದು, 10 ಗ್ರಾಂ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ನೀಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಇಷ್ಟಕ್ಕೇ ತೃಪ್ತಿಗೊಳ್ಳದ ವರಮ ಕುಟುಂಬ ಇನ್ನಷ್ಟು ಡಿಮ್ಯಾಂಡ್ ಮುಂದಿಟ್ಟಿದೆ.

ಅಂತೂ ಕೈಮೀರಿ ಬೇಡಿಕೆ ಬಂದಾಗ ವಧುವಿನ ಮನೆಯವರು ಅದನ್ನು ಒದಗಿಸಲು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮದುವೆ ಮುರಿದುಬಿದ್ದಿದೆ.

click me!