ತೆರಿಗೆ ವಂಚನೆ ಆರೋಪ: ದೈನಿಕ್ ಭಾಸ್ಕರ್ ಸೇರಿ ಹಲವೆಡೆ ಐಟಿ ದಾಳಿ!

By Suvarna News  |  First Published Jul 22, 2021, 1:50 PM IST

* ದೇಶದ ಪ್ರಮುಖ ಮಾಧ್ಯಮ ಸಂಸ್ಥೆ ದೈನಿಕ ಭಾಸ್ಕರ ಗ್ರೂಪ್‌ ಮೇಲೆ ದಾಳಿ

* ಭಾಸ್ಕರ ಗ್ರೂಪ್‌ನ ಹಲವು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ

* ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ದಿಲ್ಲಿ ಮತ್ತು ಗುಜರಾತ್‌ಗಳ 35 ಸ್ಥಳಗಳಲ್ಲಿ ದಾಳಿ


ನವದೆಹಲಿ(ಜು.22): ದೇಶದ ಪ್ರಮುಖ ಮಾಧ್ಯಮ ಸಂಸ್ಥೆ ದೈನಿಕ ಭಾಸ್ಕರ ಗ್ರೂಪ್‌ನ ಹಲವು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಗುರುವಾರ ಬೆಳಗ್ಗೆ ದಾಳಿ ನಡೆಸಿದೆ.  ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ದಿಲ್ಲಿ ಮತ್ತು ಗುಜರಾತ್‌ಗಳ 35 ಸ್ಥಳಗಳಲ್ಲಿ ದಾಳಿ ನಡೆದಿದೆ.

ಮಧ್ಯ ಪ್ರದೇಶದ ಭೋಪಾಲ್ ಮತ್ತು ಇಂದೋರ್‌ನ ದೈನಿಕ ಭಾಸ್ಕರ್ ಗ್ರೂಪ್ ಮಾಲೀಕರು ಮತ್ತು ಪ್ರವರ್ತಕರ ಕಚೇರಿಗಳು ಮತ್ತು ನಿವಾಸಗಳ ಮೇಲೆ, ಮಹಾರಾಷ್ಟ್ರ, ಗುಜರಾತ್, ರಾಜಸ್ತಾನ, ದೆಹಲಿ-ಎನ್ ಸಿಆರ್ ಪ್ರದೇಶಗಳಲ್ಲಿ ಕೂಡ ದಾಳಿ ನಡೆದಿದೆ. ಜೈಪುರ, ಅಹಮದಾಬಾದ್, ಮುಂಬೈಗಳಲ್ಲಿ ಕೂಡ ಶೋಧ ಕಾರ್ಯ ಮುಂದುವರಿದಿದೆ.

Tap to resize

Latest Videos

ದೈನಿಕ ಭಾಸ್ಕರ ಮಾಧ್ಯಮ ಸಂಸ್ಥೆಯಿಂದ ತೆರಿಗೆ ಪಾವತಿಯಲ್ಲಿ ವಂಚನೆಯಾಗಿದೆ ಎಂದು ಮೂಲಗಳಿಂದ ಸಿಕ್ಕಿರುವ ನಿಖರ ಮಾಹಿತಿಯ ಆಧಾರದ ಮೇಲೆ ಇಂದಿನ ದಾಳಿ ಮತ್ತು ಶೋಧ ಕಾರ್ಯ ನಡೆಯುತ್ತಿದೆ. ದೇಶದ ಉದ್ದಗಲಕ್ಕೂ ಎಲ್ಲಾ ಭಾಗಗಳಲ್ಲಿ ದೈನಿಕ ಭಾಸ್ಕರ ಪತ್ರಿಕೆಯ ಸುಮಾರು 60 ಆವೃತ್ತಿಗಳನ್ನು ಹೊಂದಿದೆ, ಅಲ್ಲದೆ ಸಂಸ್ಥೆ ಇಂಧನ, ರಿಯಲ್ ಎಸ್ಟೇಟ್ ಮತ್ತು ಶಿಕ್ಷಣ ವಲಯದಲ್ಲಿ ಕೂಡ ಹೂಡಿಕೆ ಮಾಡಿದೆ.

ಇದಲ್ಲದೆ, ಉತ್ತರ ಪ್ರದೇಶದ ಲಕ್ನೋದಲ್ಲಿರುವ ಟೆಲಿವಿಷನ್ ಚಾನೆಲ್ ಭಾರತ್ ಸಮಾಚಾರ್ ಕಚೇರಿ ಹಾಗೂ ಅದರ ಮಾಲೀಕ, ಮುಖ್ಯ ಸಂಪಾದಕರ ಮನೆಯ ಮೇಲೆ ಕೂಡ ಐಟಿ ದಾಳಿ ನಡೆದಿದ್ದು, ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

click me!