
ದೆಹಲಿ(ಜು.22): ಬಿಸಿ ಬಿಸಿ ಜಿಲೇಬಿ ನೋಡಿದರೆ ತಿನ್ನದೆ ಇರಲು ಸಾಧ್ಯವಿಲ್ಲ. ಆದರೆ ಇದೀಗ ಐಪಿಎಎಸ್ ಅಧಿಕಾರಿ ತಮ್ಮ ಜಿಲೇಬಿ ತಿನ್ನುವ ಆಸೆಯನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಎಲ್ಲವೂ ಎದುರಿಗಿದ್ದರೂ ಜಿಲೇಬಿ ತಿನ್ನಲು ಮಾತ್ರ ಪತ್ನಿ ಬಿಡುತ್ತಿಲ್ಲ ಅನ್ನೋ ಟ್ವೀಟ್ ಇದೀಗ ವೈರಲ್ ಆಗಿದೆ.
ಕೇವಲ 10 ನಿಮಿಷಗಳಲ್ಲಿ ಮಾಡಬಹುದು ಟೇಸ್ಟಿ ಕ್ರಿಸ್ಪಿ ಆಲೂ ಜಿಲೇಬಿ!
ಐಪಿಎಸ್ ಅಧಿಕಾರಿ ಡಾ. ಸಂದೀಪ್ ಮಿತ್ತಲ್ ಟ್ವೀಟ್ ಕ್ಷಣಾರ್ಧಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ತಮ್ಮ ಬಾಲ್ಯದ ಜೀವನದಲ್ಲಿ ಜಿಲೇಬಿ ಪಾತ್ರ ಹಾಗೂ ಇಂದಿನ ಪರಿಸ್ಥಿತಿಯನ್ನು ಮಿತ್ತಲ್ ಸುಂದರವಾಗಿ ಟ್ವೀಟ್‌ನಲ್ಲಿ ಹೇಳಿದ್ದಾರೆ. ಈ ಕುರಿತು ಮಾಡಿದ ಟ್ವೀಟ್ ಇಲ್ಲಿದೆ.
ನನ್ನ ಬಾಲ್ಯದಲ್ಲಿ ದೊಡ್ಡ ಜಿಲೇಬಿಗೆ 25 ಪೈಸೆ ಇತ್ತು. ದೊಡ್ಡವನಾದ ಮೇಲೆ ಸಂಬಳ ಬಂದಾಗ ಪ್ರತಿ ದಿನ ಕನಿಷ್ಠ 3 ಜಿಲೇಬಿ ಖರೀದಿಸಿ ತಿನ್ನಬೇಕು ಎಂದು ಅಂದುಕೊಂಡಿದ್ದೆ. ಆದರೆ ಈಗ ಗಳಿಕೆ ಆರಂಭವಾಗಿದೆ. ಜಿಲೇಬಿ ಖರೀದಿಸಿ ತಿನ್ನೋ ಶಕ್ತಿ ಇದ್ದರೂ, ಪತ್ನಿ ಅದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಮಿತ್ತಲ್ ಟ್ವೀಟ್ ಮಾಡಿದ್ದಾರೆ.
ಮಿತ್ತಲ್ ಟ್ವೀಟ್‌ಗೆ ಪತ್ನಿ ಡಾ. ರಿಚಾ ಮಿತ್ತಲ್ ಪ್ರತಿಕ್ರಿಯೆ ಕೂಡ ವೈರಲ್ ಆಗಿದೆ. ಮಿತ್ತಲ್ ಟ್ವೀಟ್‌ಗೆ ರಿಪ್ಲೇ ಮಾಡಿರುವ ರಿಚಾ, ಇಂದು ಮನಗೆ ಬನ್ನಿ ಎಂದು ಟ್ವೀಟ್ ಮಾಡಿದ್ದಾರೆ.
ಇವರಿಬ್ಬರ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಇದರೊಂದಿಗೆ ಹಲವರು ತಮ್ಮ ಬಾಲ್ಯದ ಜಿಲೇಬಿ ಕತೆಯನ್ನೂ ತೆರೆದಿಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ