ಫಾರ್ಮುಲಾ ರೇಸರ್‌ಗೆ ಯಾವುದರಲ್ಲೂ ಕಡಿಮೆ ಇಲ್ಲ ಈ ಹಾಲು ಮಾರಾಟಗಾರ: video viral

Published : Apr 29, 2022, 02:13 PM IST
ಫಾರ್ಮುಲಾ ರೇಸರ್‌ಗೆ ಯಾವುದರಲ್ಲೂ ಕಡಿಮೆ ಇಲ್ಲ ಈ ಹಾಲು ಮಾರಾಟಗಾರ: video viral

ಸಾರಾಂಶ

ಹಾಲು ಮಾರಾಟಗಾರನ ಹೊಸ ಆವಿಷ್ಕಾರಕ್ಕೆ ನೆಟ್ಟಿಗರು ಫಿದಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಫಾರ್ಮುಲಾ ರೇಸ್‌ ಕಾರಿನಂತೆ ಹಾಲಿನ ವಾಹನದ ವಿನ್ಯಾಸ

ಕಸದಿಂದ ರಸ ತಯಾರಿಸುವ ವಿಷಯದಲ್ಲಿ ಭಾರತೀಯರು ಎತ್ತಿದ ಕೈ. ಹಾಗೆಯೇ ಈಗ ಹಾಲು ಮಾರಾಟಗಾರನೊಬ್ಬನ ಹೊಸ ಆವಿಷ್ಕಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹಾಲು ಮಾರಾಟಗಾರನೋರ್ವ ಹಾಲು ಮಾರಾಟದ ವಾಹನವನ್ನು (Milk Trader) ಫಾರ್ಮುಲಾ ವನ್‌ ರೇಸ್ (Formula 1 race) ಕಾರಿನಂತೆ ವಿನ್ಯಾಸಗೊಳಿಸಿದ್ದಾನೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (social Video) ವೈರಲ್ ಆಗಿದೆ. 

ಹೊಸದನ್ನು ಆವಿಷ್ಕರಿಸುವುದರಲ್ಲಿ ಭಾರತೀಯರು ಅತ್ಯಂತ ಪ್ರತಿಭಾವಂತರು ಎಂಬ ಸತ್ಯವನ್ನು ಅಲ್ಲಗಳೆಯುವಂತಿಲ್ಲ. ಇದಕ್ಕೆ ನೀವು ಹಲವು ಉದಾಹರಣೆಗಳನ್ನು ನೋಡಿರಬಹುದು. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಹಾಲು ಮಾರಾಟಗಾರನೋರ್ವ ಫಾರ್ಮುಲಾ ರೇಸ್‌ ಕಾರಿನಂತೆ ವಿನ್ಯಾಸಗೊಳಿಸಿದ ವಾಹನದಲ್ಲಿ ಹಾಲು ಮಾರಾಟ ಮಾಡಲು ಹೋಗುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದೆ. ಆ ವಾಹನದ ಹಿಂದೆ ಹೋಗುತ್ತಿರುವ ವಾಹನದಲ್ಲಿದ್ದ ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಈ ವಾಹನದ ತುಂಬ ಹಾಲಿನ ದೊಡ್ಡ ಡಬ್ಬಿಗಳಿವೆ. ಕಪ್ಪು ಜಾಕೆಟ್‌ ಜೀನ್ಸ್‌ ಪ್ಯಾಂಟ್‌ ತಲೆಗೆ ಹೆಲ್ಮೆಟ್‌ ಧರಿಸಿದ ವ್ಯಕ್ತಿ ಈ ಕಾರನ್ನು ಓಡಿಸುತ್ತಿದ್ದಾನೆ. ಇದು ಮೂರು ಚಕ್ರದ ವಾಹನವಾಗಿದೆ.

 

ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಸಖತ್ ಕಾಮೆಂಟ್ ಮಾಡಿದ್ದಾರೆ. ನೀವು ಎಫ್ 1 ಡ್ರೈವರ್ ಆಗಲು ಬಯಸಿದಾಗ, ಆದರೆ ಡೈರಿ ವ್ಯವಹಾರಕ್ಕೆ ಸಹಾಯ ಮಾಡಲು ನಿಮ್ಮ ಕುಟುಂಬವು ಒತ್ತಾಯಿಸಿದಾಗ ಎಂದು ಬರೆದು ಈ ವಿಡಿಯೋವನ್ನು ರೋಡ್ಸ್ ಆಫ್ ಮುಂಬೈ ಹೆಸರಿನ ಟ್ವಿಟರ್‌ ಖಾತೆಯಿಂದ ಪೋಸ್ಟ್ ಮಾಡಲಾಗಿದೆ.  ಈ ವೀಡಿಯೊ ವೈರಲ್ ಆಗಿದ್ದು, ಒಂದು ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ವಿಡಿಯೋ 690 ಕ್ಕೂ ಹೆಚ್ಚು ಬಾರಿ ರೀಟ್ವೀಟ್‌ಗಳನ್ನು ಆಗಿದೆ. ಈ ವಿಡಿಯೋ ಕೂಲ್ ಆಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಆತ ಹೆಲ್ಮೆಟ್ ಧರಿಸಿರುವುದಕ್ಕೆ ನನಗೆ ಖುಷಿಯಾಗಿದೆ ಎಂದಿದ್ದಾರೆ. ಮತ್ತೊಬ್ಬರು ಈತ ಎಂದೆಂದಿಗೂ ಅತೀ ವೇಗದ ಧೂದ್‌ವಾಲಾ ಎಂದು ಕಾಮೆಂಟ್ ಮಾಡಿದ್ದಾರೆ.

ವಿದ್ಯಾರ್ಥಿನಿಯರಿಂದ ಕಾಫಿ ಮಾತ್ರೆ ಆವಿಷ್ಕಾರ; ಸೆಕೆಂಡ್‌ಗಳಲ್ಲಿ ಫಿಲ್ಟರ್ ಕಾಫಿ ರೆಡಿ!

ಮಹೀಂದ್ರಾ ಗ್ರೂಪ್ ಅಧ್ಯಕ್ಷರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಇಂತಹ ನವೀನ ಆವಿಷ್ಕಾರಗಳ ವಿಡಿಯೋಗಳನ್ನು ಆಗಾಗ ಪೋಸ್ಟ್‌ ಮಾಡುತ್ತಿರುತ್ತಾರೆ. ಹೀಗಾಗಿ ಅನೇಕ ಟ್ವಿಟ್ಟರ್‌ ಬಳಕೆದಾರರು ಈ ವಿಡಿಯೋವನ್ನು ಉದ್ಯಮಿ ಆನಂದ್ ಮಹೀಂದ್ರಾ (Anand Mahindra) ಅವರಿಗೆ ಟ್ಯಾಗ್ ಮಾಡಿದ್ದಾರೆ. ನಂದ್ ಮಹೀಂದ್ರಾ ಈ ನವೀನ ಕಲ್ಪನೆಯನ್ನು ವೀಕ್ಷಿಸಬೇಕು ಎಂದು ಒಬ್ಬರು ಬರೆದಿದ್ದಾರೆ. 

World Record: ನಿಂಬೆ ಹಣ್ಣುಗಳನ್ನು ಬಳಸಿ ಬ್ಯಾಟರಿಯನ್ನೇ ತಯಾರಿಸಿದ್ರು.,!
 

ಇಂತಹ ವಿಭಿನ್ನ ಆವಿಷ್ಕಾರಕ್ಕೆ ನಮ್ಮ ದೇಶ ಹೆಸರುವಾಸಿಯಾಗಿದೆ. ಕೆಲ ದಿನಗಳ ಹಿಂದೆ ತೆಲಂಗಾಣದ ವ್ಯಕ್ತಿಯೊಬ್ಬರು ವಿದ್ಯುತ್ ಇಲ್ಲದೆ ಕೆಲಸ ಮಾಡುವ ಮರದ ಟ್ರೆಡ್ ಮಿಲ್ ಅನ್ನು ನಿರ್ಮಿಸಿದ್ದರು. ಕೊರೊನಾ ಆರಂಭವಾದ ಸಮಯದಲ್ಲಿ ಹಾಲು ಮಾರಾಟಗಾರರೊಬ್ಬರು ಹಾಲು ಮಾರಾಟ ಮಾಡಲು ಮಾಡಿದ ಪ್ಲಾನ್ ಸಖತ್ ವೈರಲ್ ಆಗಿತ್ತು. ಸಾಮಾಜಿಕ ಅಂತರ ಕಾಪಾಡುವ ಸಲುವಾಗಿ ಹಾಲು ಮಾರಾಟಗಾರ ಹಾಲಿನ ಕ್ಯಾನ್‌ಗೆ ಪೈಪ್ ಜೋಡಿಸಿದ ವಿಡಿಯೋ ಇದಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ
ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು