Covid Crisis: 46 ದಿನದ ಬಳಿಕ 3000 ಗಡಿ ದಾಟಿದ ಕೋವಿಡ್‌, ಮತ್ತೆ ಹೆಚ್ಚಿದ ಆತಂತ..!

By Girish GoudarFirst Published Apr 29, 2022, 4:30 AM IST
Highlights

*   3303 ಕೇಸು, 39 ಸಾವು
*   ಪಾಸಿಟಿವಿಟಿ ಶೇ.0.66ಕ್ಕೆ ಏರಿಕೆ
*  ಸಕ್ರಿಯ ಸೋಂಕು ಸಂಖ್ಯೆ 16980ಕ್ಕೆ ಹೆಚ್ಚಳ
 

ನವದೆಹಲಿ(ಏ.28):  ದೇಶದಲ್ಲಿ(India) ಕೋವಿಡ್‌(Covid-19) ಪ್ರಕರಣಗಳ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ ದಾಖಲಾಗಿದ್ದು, ಗುರುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ 3,303 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. 46 ದಿನಗಳ ನಂತರ ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ 3000 ಗಡಿಯನ್ನು ದಾಟಿದೆ. ಇದೇ ವೇಳೆಯಲ್ಲಿ 39 ಸೋಂಕಿತರು ಸಾವಿಗೀಡಾಗಿದ್ದಾರೆ(Death). ಸಕ್ರಿಯ ಸೋಂಕುಗಳ ಸಂಖ್ಯೆ 16,980ಕ್ಕೆ ಏರಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವು ಶೇ. 0.66ಕ್ಕೆ ಏರಿಕೆಯಾಗಿದ್ದು, ವಾರದ ಪಾಸಿಟಿವಿಟಿ ದರವು ಶೇ. 0.61ರಷ್ಟಿದೆ. ಕೋವಿಡ್‌ ಚೇತರಿಕೆ ದರವು ಶೇ. 98.74 ರಷ್ಟಿದೆ. ದೇಶದಲ್ಲಿ ಈವರೆಗೆ 188.40 ಕೋಟಿ ಡೋಸು ಕೋವಿಡ್‌ ಲಸಿಕೆಯನ್ನು ವಿತರಿಸಲಾಗಿದೆ.

ಮತ್ತೆ ಶತಕ ದಾಟಿದ ಕೇಸ್‌

ಬೆಂಗಳೂರು:  ನಗರದಲ್ಲಿ(Bengaluru)  ಗುರುವಾರ 142 ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದೆ. ರಾಜ್ಯದ ದೈನಂದಿನ ಪ್ರಕರಣಗಳಲ್ಲಿ ಶೇ. 90 ಕ್ಕಿಂತ ಬೆಂಗಳೂರಿನಲ್ಲೇ ದೃಢಪಟ್ಟಿದೆ. ಕೋವಿಡ್‌ನಿಂದ ಸಾವಿನ ವರದಿಯಾಗಿಲ್ಲ.109 ಮಂದಿ ಚೇತರಿಸಿಕೊಂಡಿದ್ದಾರೆ.

ಕೋವಿಡ್ 4ನೇ ಅಲೆ: DC ತುರ್ತು ಸಭೆ, ವಿಜಯಪುರದಲ್ಲಿ ಮುಂಜಾಗ್ರತೆ ಕ್ರಮ

1,681 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 6 ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೆಂಟಿಲೇಟರ್‌ ಸಹಿತ ತೀವ್ರ ನಿಗಾ ವಿಭಾಗದಲ್ಲಿ ಯಾರೂ ಇಲ್ಲ. ತೀವ್ರ ನಿಗಾ ವಿಭಾಗ ಮತ್ತು ಆಮ್ಲಜನಕಯುಕ್ತ ಹಾಸಿಗೆಯಲ್ಲಿ ತಲಾ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಮಾನ್ಯ ವಾರ್ಡ್‌ನಲ್ಲಿ ಬುಧವಾರ ಇಬ್ಬರು ದಾಖಲಾಗಿದ್ದರೆ, ಗುರುವಾರ ಈ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ನಗರದಲ್ಲಿ 3,933 ಮಂದಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದು, ಪಾಸಿಟಿವಿಟಿ ದರ ಶೇ.2.76 ದಾಖಲಾಗಿದೆ. ಗರಿಷ್ಠ ಪಾಸಿಟಿವಿಟಿ ದರ ದಾಸರಹಳ್ಳಿಯಲ್ಲಿ ಶೇ.5.92 ದಾಖಲಾಗಿದೆ. ಉಳಿದಂತೆ ಮಹದೇವಪುರದಲ್ಲಿ ಶೇ.5.02 ಪಾಸಿಟಿವಿಟಿ ಬಂದಿದೆ. ಬೆಂಗಳೂರು ದಕ್ಷಿಣದಲ್ಲಿ ಅತಿ ಹೆಚ್ಚು 940 ಪರೀಕ್ಷೆ ನಡೆದಿದ್ದು, ಕನಿಷ್ಠ ಪಾಸಿಟಿವಿಟಿ ದರ ಶೇ.1.38 ವರದಿಯಾಗಿದೆ.

ದಾಸರಹಳ್ಳಿ, ಆರ್‌.ಆರ್‌.ನಗರ ತಲಾ 3, ಮಹಾದೇವಪುರ 27, ಬೊಮ್ಮನಹಳ್ಳಿ 12, ಬೆಂಗಳೂರು ಪೂರ್ವ 16, ಯಲಹಂಕ 4, ಬೆಂಗಳೂರು ಪಶ್ಚಿಮ 7 ಮತ್ತು ಬೆಂಗಳೂರು ದಕ್ಷಿಣದಲ್ಲಿ 13 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಲಸಿಕೆ ಅಭಿಯಾನ

ಬಿಬಿಎಂಪಿ ವ್ಯಾಪ್ತಿಯಲ್ಲಿ 20,127 ಮಂದಿ ಲಸಿಕೆ ಪಡೆದಿದ್ದಾರೆ. 4,220 ಮಂದಿ ಮೊದಲ ಲಸಿಕೆ, 4,886 ಮಂದಿ ಎರಡನೇ ಲಸಿಕೆ ಮತ್ತು 11,021 ಮಂದಿ ಮುನ್ನೆಚ್ಚರಿಕೆ ಲಸಿಕೆ ಸ್ವೀಕರಿಸಿದ್ದಾರೆ.

ರಾಜ್ಯದಲ್ಲಿ 40 ದಿನ ಬಳಿಕ 150+ ಕೋವಿಡ್‌ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ(Karnataka) 40 ದಿನಗಳ ಬಳಿಕ ಮೊದಲ ಬಾರಿಗೆ ದೈನಂದಿನ ಸೋಂಕಿತರ ಸಂಖ್ಯೆ 150ರ ಗಡಿ ದಾಟಿದೆ. ಗುರುವಾರ 154 ಮಂದಿಯಲ್ಲಿ ಕೋವಿಡ್‌ -19 ದೃಢಪಟ್ಟಿದೆ. 116 ಮಂದಿ ಚೇತರಿಸಿಕೊಂಡಿದ್ದಾರೆ. ಸತತ 20 ದಿನದಿಂದ ಸೋಂಕಿನಿಂದ ಮೃತಪಟ್ಟಿದ್ದು ವರದಿಯಾಗಿಲ್ಲ. ಮಾರ್ಚ್‌ 19ರಂದು 173 ಪ್ರಕರಣ ವರದಿಯಾಗಿತ್ತು. ಅದಾದ ಬಳಿಕ ದೈನಂದಿನ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಾ ಬಂದಿತ್ತು. ಆದರೆ ಇದೀಗ ಮತ್ತೆ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಹತ್ತು ದಿನಗಳ ಹಿಂದೆ 1,400ರ ಅಸುಪಾಸಿಗೆ ಕುಸಿದಿದ್ದ ಸಕ್ರಿಯ ಸೋಂಕಿತರ ಸಂಖ್ಯೆ 1,751ಕ್ಕೆ ಜಿಗಿದಿದೆ. 10,319 ಮಂದಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದು ಪಾಸಿಟಿವಿಟಿ ದರ ಶೇ.1.49 ದಾಖಲಾಗಿದೆ. ಫೆ.18ಕ್ಕೆ ಶೇ.1.59 ಪಾಸಿಟಿವಿಟಿ ದರ ದಾಖಲಾದ ಬಳಿಕದ ಗರಿಷ್ಠ ಪಾಸಿಟಿವಿಟಿ ದರ ವರದಿಯಾಗಿದೆ.

ಕರ್ನಾಟಕದಲ್ಲೂ ಕೋವಿಡ್‌ ಆತಂಕ?: ಸಚಿವ ಸುಧಾಕರ್‌ ಪ್ರತಿಕ್ರಿಯೆ

ಬೆಂಗಳೂರು ನಗರದಲ್ಲಿ 142, ಕೋಲಾರ, ವಿಜಯಪುರ, ದಕ್ಷಿಣ ಕನ್ನಡ ತಲಾ 2, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಧಾರವಾಡ, ಮಂಡ್ಯ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ಒಬ್ಬರು ಸೋಂಕಿತರು ಪತ್ತೆಯಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ 39.47 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 39.05 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 40,057 ಮಂದಿ ಮರಣವನ್ನಪ್ಪಿದ್ದಾರೆ.

ಲಸಿಕೆ ಅಭಿಯಾನ:

ರಾಜ್ಯದಲ್ಲಿ ಒಟ್ಟು 67,860 ಮಂದಿ ಕೋವಿಡ್‌ ವಿರುದ್ಧ ಲಸಿಕೆ(Vaccine) ಪಡೆದಿದ್ದಾರೆ. 9,866 ಮಂದಿ ಮೊದಲ ಡೋಸ್‌, 38,949 ಮಂದಿ ಎರಡನೇ ಡೋಸ್‌ ಮತ್ತು 22,479 ಮಂದಿ ಮುನ್ನೆಚ್ಚರಿಕೆ ಡೋಸ್‌ ಲಸಿಕೆ ಪಡೆದಿದ್ದಾರೆ. ಈವರೆಗೆ ಒಟ್ಟು 10.60 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.
 

click me!