
ನವದೆಹಲಿ (ಜೂನ್ 19, 2023): ದೇಶದ ಬಹುತೇಕ ರಾಜ್ಯಗಳಲ್ಲಿ ಈಗ ವಂದೇ ಭಾರತ್ ರೈಲಿನದ್ದೇ ಸದ್ದು. ಒಂದೊಂದೇ ರೈಲುಗಳು ಉದ್ಘಾಟನೆಯಾಗುತ್ತಿದ್ದು, ಈ ಐಷಾರಾಮಿ ರೈಲಲ್ಲಿ ಒಂದು ಬಾರಿಯಾದರೂ ಪ್ರಯಾಣಿಸಬೇಕು ಅನ್ನೋದು ಅನೇಕರ ಕನಸು. ಅದೇ ರೀತಿ ಇಲ್ಲೊಬ್ಬರು ವ್ಯಕ್ತಿ, ವಂದೇ ಭಾರತ್ ರೈಲು ಬುಕ್ ಮಾಡಿದ್ದರೂ ತಾನು ಬೇರೆ ಕೆಟ್ಟ ಸೇವೆ ಹೊಂದಿರುವ ರೈಲಲ್ಲಿ ಪ್ರಯಾಣಿಸಬೇಕಾಯ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಹೌದು, ಕೆಳದರ್ಜೆಯ ಸೇವೆಗಳನ್ನು ಹೊಂದಿರುವ ಬೇರೆ ರೈಲು ಬಂದಾಗ ಐಷಾರಾಮಿ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುವ ತನ್ನ ಕನಸು ಭಗ್ನಗೊಂಡಿದೆ ಎಂದು ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ. ಸಿದ್ಧಾರ್ಥ್ ಪಾಂಡೆ ಎಂಬ ಪ್ರಯಾಣಿಕ ತನ್ನ ಅನುಭವವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಭಾರತೀಯ ರೈಲ್ವೆ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಈ ಸಂಬಂಧ ಟ್ಯಾಗ್ ಮಾಡಿದ್ದಾರೆ.
ಇದನ್ನು ಓದಿ: ಪ್ರಯಾಣಿಕರೇ ಹುಷಾರ್: ರೈಲಲ್ಲಾಗುವ ಕಳ್ಳತನಕ್ಕೆ ರೈಲ್ವೆ ಇಲಾಖೆ ಜವಾಬ್ದಾರಿಯಲ್ಲ ಎಂದ ಸುಪ್ರೀಂಕೋರ್ಟ್
ಸಿದ್ಧಾರ್ಥ್ ಪಾಂಡೆ ಅವರು ರೈಲಿನೊಳಗಿನ ಫೋಟೋಗಳು ಮತ್ತು ವಿಡಿಯೋಗಳನ್ನು ಸಹ ಶೇರ್ ಮಾಡಿದ್ದು, ಬ್ಲಾಕ್ ಆಗಿರುವ ಟಾಯ್ಲೆಟ್ ಮತ್ತು ವಂದೇ ಭಾರತ್ ರೈಲಿಗಿಂತ ವಿಭಿನ್ನವಾದ ವಾತಾವರಣವನ್ನು ತೋರಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಪೋಸ್ಟ್ ಮಾಡಿದ ಟ್ವೀಟ್ ಹೆಚ್ಚು ಜನರನ್ನು ರೀಚ್ ಆಗಿದ್ದು, ಇದಕ್ಕೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ರೈಲ್ವೆ ಸೇವಾ ಬಗ್ಗೆ ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದೆ.
ಬಳಕೆದಾರರು ತಮ್ಮ ಟ್ವೀಟ್‌ನಲ್ಲಿ, "ವಂದೇ ಭಾರತ್ ರೈಲಲ್ಲಿ 1 ಬಾರಿಯಾದ್ರೂ ಹತ್ತಲು ಉತ್ಸುಕನಾಗಿದ್ದೆ. ಆದರೆ ವಂದೇ ಭಾರತ್ ಹೆಸರಿನಲ್ಲಿ ಮತ್ತೊಂದು ರೈಲನ್ನು ನೋಡಿ ಆಘಾತವಾಯಿತು. ವಾಶ್‌ರೂಮ್‌ಗಳು ಕರುಣಾಜನಕವಾಗಿದೆ ಮತ್ತು ಸೇವೆಗಳು ಕೆಟ್ಟದಾಗಿವೆ. ಆದರೂ, ವಂದೇ ಭಾರತ್ ರೈಲಿನ ಶುಲ್ಕವನ್ನೇ ವಿಧಿಸಲಾಗಿದೆ" ಎಂದು ಬರೆದಿದ್ದಾರೆ. ಜೂನ್ 10 ರಂದು ಅವರು ರೈಲು ಸಂಖ್ಯೆ 22439 ರ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಹತ್ತಲು ನಿರ್ಧರಿಸಿದಾಗ ಈ ಘಟನೆ ಸಂಭವಿಸಿದೆ ಎಂದು ಅವರ ಟ್ವೀಟ್ ಹೇಳಿದೆ. ಈ ರೈಲು ನವದೆಹಲಿ ಮತ್ತು ಶ್ರೀ ಮಾತಾ ವೈಷ್ಣೋ ದೇವಿ ನಡುವೆ ಕಾರ್ಯನಿರ್ವಹಿಸುತ್ತಿತ್ತು.
ಇದನ್ನೂ ಓದಿ: ನಾಳೆ ಅಪ್ಪಳಿಸಲಿದೆ ಬಿಪೊರ್‌ಜೊಯ್ ಚಂಡಮಾರುತ: ಗುಜರಾತ್‌ಗೆ ಗಂಡಾಂತರ; 90 ರೈಲು ಸಂಚಾರ ರದ್ದು
ಆದರೆ, ವಂದೇ ಭಾರತ್ ರೈಲಿನ ಬದಲಿಗೆ, ತೇಜಸ್ ಎಕ್ಸ್‌ಪ್ರೆಸ್ ರೈಲು ಆಗಮಿಸಿದೆ ಮತ್ತು ಶೌಚಾಲಯಗಳು ಬಂದ್ ಆಗಿತ್ತು ಹಾಗೂ "ಕೆಟ್ಟ" ಸೇವೆಗಳನ್ನು ಹೊಂದಿತ್ತು ಎಂದು ಸಿದ್ಧಾರ್ಥ್ ಪಾಂಡೆ ಹೇಳಿದರು. ಅವರ ಟ್ವೀಟ್ ಹೆಚ್ಚಿನ ಗಮನವನ್ನು ಗಳಿಸಿದ್ದು ಮತ್ತು ಶೀಘ್ರದಲ್ಲೇ ಟ್ವಿಟ್ಟರ್‌ನಲ್ಲಿ ಸಂಭಾಷಣೆಯನ್ನು ಪ್ರಾರಂಭಿಸಿತು. ಇನ್ನು, ಕೆಲವು ಬಳಕೆದಾರರು ಸಹ ಈ ವೇಳೆ ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಕೆಲವು ಪ್ರಯಾಣಿಕರ ತಪ್ಪಿನಿಂದ ಟಾಯ್ಲೆಟ್ ಬ್ಲಾಕ್ ಆಗಿರುತ್ತದೆ ಎಂದು ಒಬ್ಬರು ಹೇಳಿದರೆ, "ಕೆಲವೊಮ್ಮೆ ತಾಂತ್ರಿಕ ದೋಷ ಅಥವಾ ಕೆಲವು ನಿರ್ವಹಣಾ ಸಮಸ್ಯೆಗಳಿಂದಾಗಿ, ವಂದೇ ಭಾರತ್ ರೈಲು ಓಡಿಸಲು ಸಾಧ್ಯವಾಗದೆ ತೇಜಸ್ ರೈಲು ಓಡಿಸಿರಬಹುದು’’ ಎಂದು ಇನ್ನೊಬ್ಬರು ರೈಲ್ವೆ ಇಲಾಖೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು, ಮೈಸೂರಿನಿಂದ ಹೊರಡುವ ಟ್ರೈನ್ ಸೇರಿದಂತೆ ಈ 15 ರೈಲುಗಳ ಸೇವೆ ತಾತ್ಕಾಲಿಕ ಸ್ಥಗಿತ
"ಇದು ರೈಲ್ವೇಯಲ್ಲಿ ಆಗಾಗ ನಡೆಯುತ್ತಿದೆ. ಅವರು ಹಮ್‌ಸಫರ್ ರೈಲಿನಲ್ಲೂ ಹೀಗೆ ಮಾಡುತ್ತಿದ್ದಾರೆ. ಇದು ಹಗರಣವಾಗಿದೆ ಮತ್ತು ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ’’ ಎಂದು ಮತ್ತೊಬ್ಬರು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ರೈಲ್ವೆ ಪ್ರಯಾಣಿಕರಿಗೆ ಸಹಾಯವನ್ನು ಒದಗಿಸಲು ಮೀಸಲಾಗಿರುವ ಅಧಿಕೃತ ಟ್ವಿಟರ್ ಹ್ಯಾಂಡಲ್ ಆದ ರೈಲ್ವೇ ಸೇವಾ, ಸಿದ್ಧಾರ್ಥ ಪಾಂಡೆ ಅವರಿಂದ ವಿವರಗಳನ್ನು ಕೇಳಿದ್ದು, ನಂತರ ಅವರು ಅಗತ್ಯ ಕ್ರಮಕ್ಕಾಗಿ "ಸಂಬಂಧಿತ ಅಧಿಕಾರಿ" ಗೆ ಸಮಸ್ಯೆಯನ್ನು ವರ್ಗಾಯಿಸಿರುವುದಾಗಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಒಡಿಶಾದಲ್ಲಿ ಮತ್ತೊಂದು ಅವಘಡ: ಇದ್ದಕ್ಕಿದ್ದಂತೆ ಎಕ್ಸ್‌ಪ್ರೆಸ್ ರೈಲಿಗೆ ಹೊತ್ತಿಕೊಂಡ ಬೆಂಕಿ; ಕಂಗಾಲಾದ ಪ್ರಯಾಣಿಕರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ