
ವಿಶಾಖಪಟ್ಟಣಂ(ಆ.15) ಮನೆಯೊಳಗೆ ಹಾವು, ಕಚೇರಿಯಲ್ಲಿ ಹಾವು, ಬೈಕ್, ಕಂಪ್ಯೂಟರ್ ಸಿಪಿಯು ಒಳಗೆ ಹಾವು ಸೇರಿದಂತೆ ಹಲವು ಘಟನೆಗಳು ವರದಿಯಾಗಿದೆ. ಹೀಗೆ ಇತ್ತೀಚೆಗೆ ಹಾವೊಂದು ಬ್ಯಾಂಕ್ ಆಫ್ ಬರೋಡಾ ಕಚೇರಿಗೆ ನುಗ್ಗಿದೆ. ನೌಕರರು, ಗ್ರಾಹಕರು ಹಾವು ನೋಡಿ ಭಯಗೊಂಡಿದ್ದರೆ. ಹೀಗಾಗಿ ಉರಗತಜ್ಞರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಉರಗತಜ್ಞ ಬರಿಗೈಯಲ್ಲಿ ಹಾವನ್ನು ಹಿಡಿದು ನಡೆದುಕೊಂಡು ಬಂದಿದ್ದಾರೆ. ಒಂದು ಕೈಯಲ್ಲಿ ಹಾವನ್ನು ಹಿಡಿದರೆ, ಮತ್ತೊಂದು ಕೈಯಲ್ಲಿ ಮೊಬೈಲ್ ನೋಡುತ್ತಾ ಸ್ಟೈಲ್ ಆಗಿ ಬಂದಿದ್ದಾರೆ. ಉರಗತಜ್ಞನ ಅವತಾರಕ್ಕೆ ಬ್ಯಾಂಕ್ ನೌಕರರು ಬೆಚ್ಚಿ ಬಿದ್ದ ಘಟನೆ ಆಂಧ್ರ ಪ್ರದೇಶ ವಿಶಾಖಪಟ್ಟಣದ ವದ್ಲಾಪುಡಿ ಶಾಖೆಯಲ್ಲಿ ನಡೆದಿದೆ. ಈ ವಿಡಿಯೋವನ್ನು ಬ್ಯಾಂಕ್ ನೌಕರರು ಸೆರೆ ಹಿಡಿದ್ದಾರೆ.
ಬರೋಡಾ ಬ್ಯಾಂಕ್ ಶಾಖಾ ಕಚೇರಿಯಲ್ಲಿ ಹಾವು ಕಾಣಿಸಿಕೊಂಡಿದೆ. ಹಾವನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ನೌಕರರು, ಗ್ರಾಹಕರು ಸೇರಿದಂತೆ ಹಲವರ ಶಬ್ಧಕ್ಕೆ ಹಾವು ಭಯಗೊಂಡು ಅವಿತುಕೊಳ್ಳುವ ಪ್ರಯತ್ನ ಮಾಡಿದೆ. ಬ್ಯಾಂಕ್‌ನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಭದ್ರತಾ ಸಿಬ್ಬಂದಿಗಳು ಗ್ರಾಹಕರನ್ನು ಹೊರಗೆ ಕಳುಹಿಸಿದ್ದಾರೆ. ಬಳಿಕ ಸಿಬ್ಬಂದಿಗಳನ್ನು ಒಂದೆಡೆ ನಿಲ್ಲಿಸಿದ್ದಾರೆ. ಇದಾದ ಬಳಿಕ ಉರಗತಜ್ಞರಿಗೆ ಕರೆ ಮಾಡಿದ್ದಾರೆ.
ಕಚೇರಿಯಲ್ಲಿ ಅಡಗಿದ್ದ ಹಾವನ್ನು ಬರಿಗೈಯಲ್ಲಿ ಹಿಡಿದ ಗಟ್ಟಿಗಿತ್ತಿ ಹೆಣ್ಣು, ಇಲ್ಲಿದೆ ವಿಡಿಯೋ!
ಕೆಲ ಹೊತ್ತಲ್ಲೇ ಉರಗತಜ್ಞ ಬ್ಯಾಂಕ್‌ಗೆ ಆಗಮಿಸಿದ್ದಾರೆ. ಈ ವೇಳೆ ಸಿಬ್ಬಂದಿಗಳು ಹಾವು ಇರುವ ಸ್ಥಳ ತೋರಿಸಿದ್ದಾರೆ. ಮೊಬೈಲ್ ಲೈಟ್ ಮೂಲಕ ಹಾವು ಅವಿತುಕೊಂಡಲ್ಲಿ ಪರಿಶೀಲಿಸಿದ್ದಾರೆ. ಬಳಿಕ ಅರೇ ಈ ಹಾವಾ ಎಂದು ಬರೀ ಕೈಯಲ್ಲಿ ಹಾವನ್ನು ಹಿಡಿದಿದ್ದಾರೆ. ಒಂದು ಕೈಯಲ್ಲಿ ಹಾವನ್ನು ಹಿಡಿದು ನಡೆದುಕೊಂಡು ಹೊರಬಂದಿದ್ದಾರೆ. ಉರಗತಜ್ಞರ ಕೈಯಲ್ಲಿ ಹಾವು ಚಡಪಡಿಸಲು ಆರಂಭಿಸಿದೆ. ಸುತ್ತಿಕೊಳ್ಳುವ ಪ್ರಯತ್ನ ಮಾಡಿದೆ.
ಬರೀಗೈಯಲ್ಲಿ ಹಿಡಿದು ಬಂದ ಉರಗತಜ್ಞ ಹಾಗೂ ಹಾವನ್ನು ನೋಡಿದ ನೌಕರರು ಬೆಚ್ಚಿ ಬಿದ್ದಿದ್ದಾರೆ. ಉರಗತಜ್ಞ ನಡೆದುಕೊಂಡು ಬರವಾಗ ಒಂದು ಕೈಯಲ್ಲಿ ಹಾವಿದ್ದರೆ, ಮತ್ತೊಂದು ಕೈಯಲ್ಲಿ ಮೊಬೈಲ್ ಹಿಡಿದು ಏನೋ ನೋಡುತ್ತಾ ಬಂದಿದ್ದಾರೆ. ಹಾವಿಗಿಂತ ಉರಗತಜ್ಞರ ನಿರ್ಭೀತ ನಡೆ ನೌಕರರಿಗೆ ಆಘಾತ ತಂದಿದೆ. ಹಾವನ್ನು ಹಿಡಿದ ಉರಗತಜ್ಞ, ಸಮೀಪದ ಕಾಡಿನಲ್ಲಿ ಬಿಟ್ಟಿದ್ದಾರೆ.
ಆಧುನಿಕ ಬದುಕಿಗೆ ಕಾಲಿಟ್ಟಿತಾ ಹಾವು? ವೈರಲ್ ವಿಡಿಯೋಗೆ ನೆಟ್ಟಿಗರು ಅದ್ಭುತ ಕಮೆಂಟ್!
ಇತ್ತೀಚೆಗೆ ಮಹಿಳೆಯೊಬ್ಬರು ಇದೇ ರೀತಿ ಬರಿಗೈಯಲ್ಲಿ ಹಾವು ಹಿಡಿದು ಭಾರಿ ವೈರಲ್ ಆಗಿದ್ದರು. ಕಂಪ್ಯೂಟರ್ ಒಳಗೆ ಸೇರಿದ್ದ ಹಾವನ್ನು ಬರಿಗೈಯಲ್ಲಿ ಹಿಡಿದು ರಕ್ಷಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ