ಕಾಶ್ಮೀರದ ಲಾಲ್‌ ಚೌಕದಲ್ಲಿ ವಂದೇ ಮಾತರಂ, ಧ್ವಜಾರೋಹಣ ಮಾಡಿ ಡಾನ್ಸ್‌ ಮಾಡಿದ ಮಮತಾ ಬ್ಯಾನರ್ಜಿ!

By Santosh Naik  |  First Published Aug 15, 2022, 3:52 PM IST

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದ 75 ವರ್ಷಗಳ ಸ್ವಾತಂತ್ರ್ಯ ಸಂಭ್ರಮವನ್ನು ಉತ್ಸಾಹದಿಂದ ಆಚರಣೆ ಮಾಎಲಾಗಿದೆ. ಕೆಂಪುಕೋಟೆಯ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಿದ ಬಳಿಕ, ದೇಶದ ಇತರ ಕಡೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ. ಕಾಶ್ಮೀರದ ಲಾಲ್‌ಚೌಕ್‌ನಲ್ಲಿ ಧ್ವಜ ಹಾರಿಸಿದ ಬಳಿಕ ಸ್ಥಳೀಯ ಯುವಕರು ವಂದೇ ಮಾತರಂ ಹಾಗೂ ಭಾರತ್‌ ಮಾತಾ ಕಿ ಜೈ ಎನ್ನುವ ಘೋಷಣೆಯನ್ನು ಕೂಗಿದ್ದಾರೆ.


ನವದೆಹಲಿ (ಆ.15): ದೇಶದಲ್ಲಿ ಸ್ವಾತಂತ್ರ್ಯ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗಿದೆ. ಕಾಶ್ಮೀರಿಂದ ಕನ್ಯಾಕುಮಾರಿಯವರೆಗೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದು, 75 ವರ್ಷಗಳ ಸ್ವಾತಂತ್ರ್ಯ ಸಂಭ್ರಮಕ್ಕೆ ಇನ್ನಷ್ಟು ಮೆರಗು ಸಿಕ್ಕಿದೆ. ಕೆಂಪುಕೋಟೆಯ ಆವರಣದಲ್ಲಿ ಪ್ರಧಾನಿ ರಾಷ್ಟ್ರಧ್ವಜ ಹಾರಿಸಿದ ಬಳಿಕ, ವಿವಿಧ ರಾಜ್ಯಗಳ ರಾಜಧಾನಿಗಳಲ್ಲಿ ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಧ್ವಜ ಹಾರಿಸಿದರು. ಈವರೆಗೂ ಗಲಾಟೆಯಿಂದಲೇ ಸುದ್ದಿಯಾಗುತ್ತಿದ್ದ ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿರುವ ಲಾಲ್‌ ಚೌಕದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಬಳಿಕ, ವಂದೇ ಮಾತರಂ ಹಾಗೂ ಭಾರತ್‌ ಮಾತಾ ಕಿ ಜೈ ಎಂದು ಘೋಷಣೆ ಕೂಗಲಾಗಿದೆ. ಭಾರತ ಮಾತ್ರವಲ್ಲದೆ, ಅಮೆರಿಕದ ಬೋಸ್ಟನ್‌ನಲ್ಲಿ ಹಾಗೂ ಯುರೋಪ್‌ ಸಮುದ್ರದಲ್ಲಿರುವ ಐಎನ್‌ಎಸ್‌ ತರಂಗಿಣಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ. ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಕೋಲ್ಕತ್ತಾದಲ್ಲಿ ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ ಜಾನಪದ ಕಲಾವಿದರೊಂದಿಗೆ ನೃತ್ಯ ಮಾಡಿದರು. ಸುದ್ದಿ ಸಂಸ್ಥೆ ಎಎನ್‌ಐ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಮುಖ್ಯಮಂತ್ರಿಗಳು ಜಾನಪದ ಕಲಾವಿದರೊಂದಿಗೆ ಸೇರಿಕೊಂಡು ಅವರೊಂದಿಗೆ ನೃತ್ಯ ಮಾಡುವುದನ್ನು ಕಾಣಬಹುದು.

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಜನರಿಗೆ ನಮನ ಸಲ್ಲಿಸಿದ ಮಮತಾ ಬ್ಯಾನರ್ಜಿ, ಭಾರತೀಯರು ದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದರು. ಭಾರತೀಯರು "ಸ್ವಾತಂತ್ರ್ಯವನ್ನು ಪಡೆದ ತಮ್ಮ ಪೂರ್ವಜರ ಪವಿತ್ರ ಪರಂಪರೆಯನ್ನು ಸಂರಕ್ಷಿಸಬೇಕು" ಎಂದು ಅವರು ಹೇಳಿದರು.

| West Bengal CM Mamata Banerjee joins the folk artists as they perform at the celebrations in Kolkata. pic.twitter.com/9bvyxFm4qz

— ANI (@ANI)

Latest Videos

ಲಾಲ್‌ ಚೌಕ್‌ನಲ್ಲಿ ಹಾರಿದ ತಿರಂಗಾ:  ಶ್ರೀನಗರದ ಲಾಲ್ ಚೌಕ್‌ನ ಘಂಟಾಘರ್‌ನಲ್ಲಿ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಸ್ವಾತಂತ್ರ್ಯ ದಿನದಂದು ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ. ಆದರೆ, ಈ ವರ್ಷ ಗಣರಾಜ್ಯೋತ್ಸವದಂದು ಅಲ್ಲಿ ಧ್ವಜಾರೋಹಣ ಮಾಡಲಾಗಿತ್ತು. ಗಡಿಯಾರ ಗೋಪುರವನ್ನು 1980 ರಲ್ಲಿ ನಿರ್ಮಾಣ ಮಾಡಲಾಗಿತ್ತ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಲಾಲ್‌ ಚೌಕ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿರಲಿಲ್ಲ.

What a beautiful scene!

Chants of '' by a group of men waving the at 's !

This is New India, to all of you! pic.twitter.com/FHu8rFSrYB

— Akshat Saraf (@AkshatSaraf)

ಲಡಾಖ್‌, ಸಿಯಾಚಿನ್‌ನಲ್ಲೂ ಹಾರಿದ ಧ್ವಜ: ಐಟಿಬಿಪಿ ಯೋಧರು ಲಡಾಖ್‌ನ ಪಾಂಗಾಂಗ್ ತ್ಸೋ ಸರೋವರದ ಬಳಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಇದು ಹಿಮಾಲಯದಲ್ಲಿ 14,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ನೆಲೆಗೊಂಡಿರುವ ಉದ್ದವಾದ ಕಿರಿದಾದ, ಆಳವಾದ, ಎಂಡಾರ್ಫಿಕ್ (ನೆಲವುಳ್ಳ) ಸರೋವರವಾಗಿದೆ. ದೇಶದ ಅತ್ಯಂತ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಭಾರತೀಯ ಸೇನೆಯ ಸಿಬ್ಬಂದಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಸಿಯಾಚಿನ್ ಎತ್ತರ ಸುಮಾರು 5,400 ಮೀಟರ್‌ನಲ್ಲಿ ತಿರಂಗಾವನ್ನು ಹಾರಿಸಲಾಗಿದೆ.

ಸಮುದ್ರದಲ್ಲಿ ಅರಳಿದ ತ್ರಿವರ್ಣ: ಭಾರತೀಯ ನೌಕಾಪಡೆಯ ಸಿಬ್ಬಂದಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬಳಿ ಸಮುದ್ರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. 30 ಡಿಸೆಂಬರ್ 1943 ರಂದು, ಸುಭಾಸ್ ಚಂದ್ರ ಬೋಸ್ ಈ ದ್ವೀಪದಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದರು.

Independence Day Photos: ಕೆಂಪುಕೋಟೆಯಲ್ಲಿ ಹಾರಿದ ತ್ರಿವರ್ಣ ಧ್ವಜ!

ಭಾರತದ ನಕ್ಷೆ ಮಾಡಿದ ಎನ್‌ಸಿಸಿ ವಿದ್ಯಾರ್ಥಿಗಳು: ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಸಿಸಿ ಕೆಡೆಟ್‌ಗಳನ್ನು ಭೇಟಿ ಮಾಡಿದರು. ಈ ವೇಳೆ ಯುವಕರೊಂದಿಗೆ ಸಂವಾದ ನಡೆಸಿದರು. ಭಾರತದ ನಕ್ಷೆಯನ್ನು ಎನ್‌ಸಿಸಿ ಕೆಡೆಟ್‌ಗಳು ಸಿದ್ಧಪಡಿಸಿದ್ದು, ಅದರಲ್ಲಿ ಯುವಕರು ಎಲ್ಲಾ ರಾಜ್ಯಗಳ ನಕ್ಷೆಯಲ್ಲಿ ವಿವಿಧ ಬಣ್ಣಗಳಲ್ಲಿ ಕುಳಿತುಕೊಂಡಿದ್ದರು. ಬಿಜೆಪಿಯ ಹಿರಿಯ ನಾಯಕ ಮತ್ತು ದೇಶದ ಮಾಜಿ ಉಪ ಪ್ರಧಾನಿ ಎಲ್‌ಕೆ ಅಡ್ವಾಣಿ ದೆಹಲಿಯ ತಮ್ಮ ನಿವಾಸದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು.

ತರಂಗಿಣಿಯಲ್ಲಿ ಹಾರಿದ ತಿರಂಗಾ: ಐಎನ್‌ಎಸ್ ತರಂಗಿಣಿ ಹಡಗಿನಲ್ಲಿ ಭಾರತೀಯ ನೌಕಾಪಡೆಯ ಸಿಬ್ಬಂದಿ ಯುರೋಪಿಯನ್ ಭೂಪ್ರದೇಶದ ಸಮುದ್ರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಐಎನ್‌ಎಸ್‌ ತರಂಗಿಣಿ ಭಾರತೀಯ ನೌಕಾಪಡೆಯ ಮೊದಲ ಸೈಲ್ ತರಬೇತಿ ಹಡಗು. ಇದನ್ನು 1997 ರಲ್ಲಿ ಸಂಯೋಜಿಸಲಾಯಿತು.

Independence Day: ಮೇಡ್‌ ಇನ್‌ ಇಂಡಿಯಾ ಹೊವಿಟ್ಜರ್ ಗನ್ಸ್ ಮೂಲಕ ಮೊಟ್ಟಮೊದಲ ಬಾರಿ ಸೆಲ್ಯೂಟ್‌!

ಅಮೆರಿಕದಲ್ಲಿ ಹಾರಿದ ಭಾರತದ ಧ್ವಜ: ಬೋಸ್ಟನ್‌ನಲ್ಲಿ ಅಮೆರಿಕದ ಧ್ವಜದೊಂದಿಗೆ ಆಕಾಶದಲ್ಲಿ ತ್ರಿವರ್ಣ ಧ್ವಜವೂ ಕಾಣಿಸಿಕೊಂಡಿತು. ಎರಡೂ ಧ್ವಜಗಳನ್ನು ನೆಲದಿಂದ 200 ಮೀಟರ್ ಎತ್ತರದಲ್ಲಿ ಹಾರಿಸಲಾಗಿತ್ತು.

click me!