ಬಾರ್ಡರ್ ಸಿನಿಮಾ ನೋಡಿ ಸೇನೆ ಸೇರಲು ತುದಿಗಾಲಲ್ಲಿ ನಿಂತಿದ್ದೆ: ಸಂತೋಷ್ ಶುಕ್ಲಾ

By Suvarna NewsFirst Published Aug 15, 2022, 1:06 PM IST
Highlights

ತಾವು ಹದಿ ಹರೆಯದಲ್ಲಿರುವಾಗ ತೆರೆಗೆ ಬಂದ ಬಾರ್ಡರ್‌ ಸಿನಿಮಾ ನೋಡಿದ ಸಂತೋಷ್ ಶುಕ್ಲಾಗೆ ಸೇನೆ ಸೇರಿ ಸೈನಿಕನಾಗಿ ದೇಶ ಸೇವೆ ಮಾಡುವ ಆಸೆ ಮೂಡಿತ್ತಂತೆ.

ಬಾರ್ಡರ್‌ 1997ರಲ್ಲಿ ತೆರೆಗೆ ಬಂದ ದೇಶ ಪ್ರೇಮವನ್ನು ಅನೇಕರಲ್ಲಿ ಬಡಿದೆಬ್ಬಿಸಿದ ಹಾಗೂ ಸೈನಿಕರ ಮೇಲಿನ ಗೌರವವನ್ನು ಇಮ್ಮಡಿಗೊಳಿಸಿದ, ಸೈನಿಕರ ಕಷ್ಟ ಸುಖಗಳನ್ನು ದೇಶಕ್ಕೆ ತಿಳಿಸಿದ ಸಿನಿಮಾ. ಜೆಪಿ ದತ್ ನಿರ್ದೇಶನದ ಈ ಸಿನಿಮಾವೂ ಅನೇಕರಲ್ಲಿ ದೇಶಪ್ರೇಮ ಕಿಚ್ಚನ್ನು ಹಚ್ಚಿತ್ತು. ಈ ಸಿನಿಮಾ ನೋಡಿದ ಖ್ಯಾತ ಸಿನಿಮಾ ಬರಹಗಾರ ಸಂತೋಷ್ ಶುಕ್ಲಾ ಕೂಡ ಸೇನೆ ಸೇರಲು ಉತ್ಸುಕರಾಗಿದ್ದರಂತೆ. ತಾವು ಹದಿ ಹರೆಯದಲ್ಲಿರುವಾಗ ತೆರೆಗೆ ಬಂದ ಬಾರ್ಡರ್‌ ಸಿನಿಮಾ ನೋಡಿದ ಸಂತೋಷ್ ಶುಕ್ಲಾಗೆ ಸೇನೆ ಸೇರಿ ಸೈನಿಕನಾಗಿ ದೇಶ ಸೇವೆ ಮಾಡುವ ಆಸೆ ಮೂಡಿತ್ತಂತೆ. ಭಾರತ 75ನೇ ಸ್ವಾತಂತ್ರ ದಿನಾಚರಣೆ ಸಂಭ್ರಮದಲ್ಲಿದ್ದು, ಇಡೀ ದೇಶಾದ್ಯಂತ ಸ್ವಾತಂತ್ರದ ಅಮೃತ ಮಹೋತ್ಸವವನ್ನು ಮನೆ ಮನೆಯಲ್ಲೂ ಧ್ವಜ ಹಾರಿಸುವ ಮೂಲಕ ದೇಶದ ನಾಗರಿಕರು ಬಹಳ ಹೆಮ್ಮೆ, ಖುಷಿಯಿಂದ ಆಚರಿಸುತ್ತಿದ್ದಾರೆ. ಹಲವರು ತಮ್ಮ ದೇಶಾಭಿಮಾನವನ್ನು ವಿವಿಧ ರೀತಿಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೇ ರೀತಿ ಸಿನಿಮಾದಲ್ಲಿ ಸ್ವಾತಂತ್ರ ಹಾಗೂ ದೇಶ ಪ್ರೇಮದ ಕಥಾ ಹಂದರಗಳಿಂದಲೇ ಖ್ಯಾತಿ ಗಳಿಸಿರುವ ಸಿನಿಮಾ ಬರಹಗಾರ ಸಂತೋಷ್ ಶುಕ್ಲಾ ಅವರು ಈ ಸಂದರ್ಭದಲ್ಲಿ ತಾವು ಲಕ್ನೋದಿಂದ ಸಿನಿಮಾದತ್ತ ನಡೆದು ಬಂದ ಹಾದಿಯನ್ನು ಹಂಚಿಕೊಂಡಿದ್ದಾರೆ. 

ಬಾರ್ಡರ್ ಸಿನಿಮಾ ನೋಡಿದ ನಾನು ದೇಶ ಪ್ರೇಮದ ಬಗ್ಗೆ ಅತೀ ಹೆಚ್ಚು ಆಸಕ್ತಿ ಹೊಂದಿದ್ದೆ. ಅದರೊಂದಿಗೆ ಸಿನಿಮಾದಲ್ಲಿ ಆಸ್ಕತಿ ಇತ್ತು, ಜನ ನನ್ನ ಸಿನಿಮಾದಲ್ಲಿ ಪರದೆ ಮೇಲೆ ನೋಡಬೇಕೆಂಬ ಆಸೆ ಇತ್ತು. ಹೀಗಾಗಿ ನಾನು ವೃತ್ತಿ ಜೀವನವನ್ನು ನಟನಾಗಿ ಆರಂಭಿಸಬೇಕು ಎಂದು ನಿರ್ಧರಿಸಿದೆ.  ಓರ್ವ ಕಲಾವಿದನಾಗಿ ನಾನು ಮನೋರಂಜನೆಯ ಮೂಲಕ ದೇಶಕ್ಕೆ ಸೇವೆ ಸಲ್ಲಿಸುತ್ತ ಬದುಕುತ್ತಿದ್ದೇನೆ. ಲಕ್ನೋ ಭೇಟಿ ವೇಳೆ  ಕಂಟೋನ್ಮೆಂಟ್ ಪ್ರದೇಶದ ಮೂಲಕ ಚಾಲನೆ ಮಾಡುವುದನ್ನು ನಾನು ಈಗಲೂ ಆನಂದಿಸುತ್ತೇನೆ. ಸೇನಾ ಸಮವಸ್ತ್ರ ಇಲ್ಲದಿದ್ದರೂ ನಮ್ಮ ದೇಶವನ್ನು ಸಾಧ್ಯವಿರುವ ರೀತಿಯಲ್ಲಿ ಬೆಂಬಲಿಸಲು ನಾವು ನಮ್ಮ ಕೈಲಾದಷ್ಟು ಮಾಡಬಹುದು ಎಂದು ನಾನು ನಂಬುತ್ತೇನೆ ಎಂದು ಹೇಳಿದರು. 

Latest Videos

India@75: ಹರ್ ಘರ್ ತಿರಂಗಾ ಅಭಿಯಾನಕ್ಕೆ ತಾರೆಯರ ಸಾಥ್

ಭಾರತ-ಚೀನಾ ಯುದ್ಧವನ್ನು ಆಧರಿಸಿದ ಖಟೂನ್ ಚಿತ್ರದಲ್ಲಿ ನಾನು ಗರ್ವಾಲ್ ರೆಜಿಮೆಂಟ್ ಸೈನಿಕ ದಿಲ್ಬಾಗ್ ಸಿಂಗ್ ಪಾತ್ರವನ್ನು ನಿರ್ವಹಿಸಿದ್ದೆ. ನಾವು 2017 ರಲ್ಲಿ ಹಿಮಾಚಲ ಪ್ರದೇಶದ ಒಳಭಾಗದಲ್ಲಿ 25 ದಿನಗಳ ಕಾಲ ಈ ಸಿನಿಮಾಕ್ಕಾಗಿ ಚಿತ್ರೀಕರಣ ಮಾಡಿದ್ದೇವೆ. ನಾನು ಮುಖ್ಯ ಪಾತ್ರವನ್ನು ನಿರ್ವಹಿಸಲು 16 ಕೆಜಿ ತೂಕವನ್ನು ಕಳೆದುಕೊಂಡಿದ್ದೆ. ಆದರೆ ದುರದೃಷ್ಟವಶಾತ್ ಚಿತ್ರ ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ. ನಂತರ ಬಚ್ಚನ್ ಪಾಂಡೆ ಅವರೊಂದಿಗೆ ಎಸಿಪಿ ಸೂರ್ಯಕಾಂತ್ ಮಿಶ್ರಾ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಸೇನಾ ಸಮವಸ್ತ್ರವನ್ನು ಧರಿಸುವುದು ನನಗೆ ನಿಜವಾಗಿಯೂ ವಿಶೇಷವಾಗಿದೆ ಎಂದು ಬಿಗ್ ಬಾಸ್ ಖ್ಯಾತಿ ಸಂತೋಷ್ ಶುಕ್ಲಾ ಹೇಳಿದರು. 

ಶುಕ್ಲಾ ಇತ್ತೀಚೆಗೆ ಲಕ್ನೋದಲ್ಲಿ ಕಿರುಚಿತ್ರ ಗುಲಾಬಿ ರೆವೆರಿಯ ಎರಡನೇ ಶೆಡ್ಯೂಲ್‌ಗೆ ಸಹ ನಟರಾದ ಲೇಖಾ ಪ್ರಜಾಪತಿ, ನಾಜಿಯಾ ಹುಸೇನ್ ಮತ್ತು ಆಕಾಂಕ್ಷಾ ಪಾಂಡೆ ಅವರೊಂದಿಗೆ ನಟಿಸಿದ್ದಾರೆ. ಈ ತಿಂಗಳ ಕೊನೆಯಲ್ಲಿ ಒಂದು ಹಾಡಿನ ಚಿತ್ರೀಕರಣ ನಡೆಸಲಿದ್ದೇವೆ. ಅಲ್ಲದೆ, ಸಾಜಿದ್ (ನಾಡಿಯಾಡ್ವಾಲಾ) ಭಾಯಿ ಅವರೊಂದಿಗಿನ ಮತ್ತೊಂದು ಚಲನಚಿತ್ರ ಮತ್ತು 60 ನಿಮಿಷಗಳ ವೆಬ್-ಫಿಲ್ಮ್ ಮಿಯಾನ್ ಮಜ್ಬೂರ್ ಹೈ ಗಾಗಿ ನಾವು ಈ ವರ್ಷಾಂತ್ಯದಲ್ಲಿ ಲಕ್ನೋದಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸುತ್ತೇವೆ ಎಂದು ಸಂತೋಷ್ ಹೇಳಿದರು.

Independence Day; ಯಶ್ ಮನೆ ಮೇಲೆ ಹಾರಿದ ರಾಷ್ಟ್ರಧ್ವಜ; ಸ್ವಾತಂತ್ರ್ಯ ದಿನಾಚರಣೆಗೆ ಶುಭ ಕೋರಿದ ರಾಕಿಂಗ್ ಕುಟುಂಬ

ಚಲನಚಿತ್ರಗಳಲ್ಲಿ ಪೊಲೀಸ್ ಮತ್ತು ಸೇನಾ ಸಿಬ್ಬಂದಿಯ ಪಾತ್ರವನ್ನು ಬರೆದಿರುವ ಲಕ್ನೋ-ನಟ ಸಂತೋಷ್ ಶುಕ್ಲಾ ಅವರು ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ತಮ್ಮ ಕನಸನ್ನು ಚಲನಚಿತ್ರಗಳ ಮೂಲಕ ನನಸು ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ನಮಗೆ ಯಾವುದೂ ರಾಷ್ಟ್ರಕ್ಕಿಂತ ಮೇಲಿರಬಾರದು ಎಂದು ನಾನು ಕಲಿತಿದ್ದೇನೆ. ನಮ್ಮ ದೇಶಕ್ಕಾಗಿ ಏನನ್ನಾದರೂ ಮಾಡಲು ಬಂದಾಗ, ಎಲ್ಲವನ್ನು ಲೆಕ್ಕಿಸದೆ ನಾವೆಲ್ಲರೂ ಒಂದಾಗುತ್ತೇವೆ ಎಂದು ನಾವು ಹಿಂದೆ ನೋಡಿದ್ದೇವೆ ಎಂದು ಜೈ ಹೋ ಮತ್ತು ದಬಾಂಗ್ 3 ನಟ ಶುಕ್ಲಾ ಹೇಳುತ್ತಾರೆ. 
 

click me!