ನಟ ತಪಸ್ ಪಾಲ್ ಸಾವಿಗೆ ಕೇಂದ್ರ ಕಾರಣ: ದೀದಿ ನಿಮಗೇನು ಹೇಳೊಣ?

Suvarna News   | Asianet News
Published : Feb 19, 2020, 02:50 PM IST
ನಟ ತಪಸ್ ಪಾಲ್ ಸಾವಿಗೆ ಕೇಂದ್ರ ಕಾರಣ: ದೀದಿ ನಿಮಗೇನು ಹೇಳೊಣ?

ಸಾರಾಂಶ

'ನಟ ತಪಸ್ ಪಾಲ್ ಸಾವಿಗೆ ಮೋದಿ ಸರ್ಕಾರ ಕಾರಣ'| ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೊಸ ವರಸೆ| ಹೃದಯಾಘಾತದಿಂದ ನಿಧನರಾಗಿದ್ದ ಟಿಎಂಸಿ ನಾಯಕ ತಪಸ್ ಪಾಲ್| ಶಾರದಾ ಚಿಟ್ ಫಂಡ್ ಹಗರಣದಲ್ಲಿ ತಪಸ್ ಪಾಲ್ ಹೆಸರು| ಕೇಂದ್ರ ತನಿಖಾ ಸಂಸ್ಥೆಗಳಿಂದ ತಪಸ್ ಪಾಲ್ ವಿಚಾರಣೆ| ಕೇಂದ್ರದ ಕಿರುಕುಳದಿಂದಾಗಿಯೇ ತಪಸ್ ಪಾಲ್ ನಿಧನರಾಗಿದ್ದಾರೆ ಎಂದ ಮಮತಾ|

ಕೋಲ್ಕತ್ತಾ(ಫೆ.19): ಜನಪ್ರಿಯ ಬಂಗಾಳಿ ನಟ ಹಾಗೂ ಟಿಎಂಸಿ ನಾಯಕ ತಪಸ್ ಪಾಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪಾಲ್, ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು.

ಆದರೆ ತಪಸ್ ಪಾಲ್ ನಿಧನಕ್ಕೆ ಕೇಂದ್ರ ಸರ್ಕಾರ ಕಾರಣ ಎಂದು ವಿಚಿತ್ರ ಆರೋಪ ಹೊರಿಸಿರುವ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಚಿಟ್ ಫಂಡ್ ಹಗರಣದ ತನಿಖೆಯ ಹೆಸರಲ್ಲಿ ತಪಸ್ ಪಾಲ್ ಅವರಿಗೆ ಕೇಂದ್ರ ಸರ್ಕಾರ ನಿರಂತರ ಕಿರುಕುಳ ಕೊಟ್ಟಿದೆ ಎಂದು ಆರೋಪಿಸಿದ್ದಾರೆ.

ಶಾರದಾ ಚಿಟ್ ಫಂಡ್ ಹಗರಣದಲ್ಲಿ ತಪಸ್ ಪಾಲ್ ಹೆಸರು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ತಪಸ್ ಪಾಲ್ ಅವರನ್ನು ಹಲವು ಬಾರಿ ವಿಚಾರಣೆ ನಡೆಸಿದ್ದವು.

ಇದು ಮಮತೆಯ ತಿರುವು: ಸಿಎಎ ವಿರೋಧಿಗಳಿಂದ ದೂರದ ಕುರುಹು!

ಕೇಂದ್ರ ಸರ್ಕಾರ ನೀಡಿದ ಕಿರುಕುಳದಿಂದಾಗಿಯೇ ತಪಸ್ ಪಾಲ್ ಸಾವನ್ನಪ್ಪಿದ್ದಾರೆ ಎಂದಿರುವ ಮಮತಾ, ರಾಜಕೀಯ ವಿರೋಧಿಗಳನ್ನು ಮುಗಿಸಲು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹರಿಹಾಯ್ದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!