ಮಾರ್ಚ್ 15ರೊಳಗೆ ಸೇನೆ ವಾಪಸ್ ಕರೆಯಿಸಿ, ಭಾರತಕ್ಕೆ ಡೆಡ್‌ಲೈನ್ ನೀಡಿದ ಮಾಲ್ಡೀವ್ಸ್!

By Suvarna NewsFirst Published Jan 14, 2024, 5:49 PM IST
Highlights

ಭಾರತ ಹಾಗೂ ಮಾಲ್ಡೀವ್ಸ್ ನಡುವಿನ ಸಂಘರ್ಷ ಹೆಚ್ಚಾಗುತ್ತಿದೆ. ಸೇನಾ ವಿಚಾರದಲ್ಲೇ ಆರಂಭಗೊಂಡ ಕಿತ್ತಾಟ, ಪ್ರವಾಸೋದ್ಯಮದ ಮಜಲು ಪಡೆದುಕೊಂಡಿತ್ತು. ಇದೀಗ ಮತ್ತೆ ಮಾಲ್ಡೀವ್ಸ್ ಭಾರತಕ್ಕೆ ಎಚ್ಚರಿಕೆ ನೀಡಿದೆ. ಮಾರ್ಚ್ 15ರೊಳಗೆ ಭಾರತೀಯ ಸೇನೆ ವಾಪಸ್ ಕರೆಸಿಕೊಳ್ಳಲು ಡೆಡ್‌ಲೈನ್ ನೀಡಿದೆ.

ಮಾಲ್ಡೀವ್ಸ್(ಜ.14) ಮಾಲ್ಡೀವ್ಸ್ ಅಧ್ಯಕ್ಷ ಮುಯಿಝಿ ಇದೀಗ ಭಾರತಕ್ಕೆ ಮತ್ತೊಂದು ಎಚ್ಚರಿಕೆ ನೀಡಿದ್ದಾರೆ. ಇಂಡಿಯಾ ಔಟ್ ಅಭಿಯಾನದ ಮೂಲಕ ಮಾಲ್ಡೀವ್ಸ್‌ನಿಂದ ಭಾರತೀಯ ಸೇನೆ ವಾಪಸ್ ಪಡೆಯಲು ಹೋರಾಟ ನಡೆಸಿದ ಮುಯಿಝಿ ಇದೀಗ ಮಾರ್ಚ್ 15ರ ಡೆಡ್‌ಲೈನ್ ನೀಡಿದ್ದಾರೆ. ಮಾರ್ಚ್ 15ರೊಳಗೆ ಭಾರತೀಯ ಸೇನೆಯನ್ನು ಮಾಲ್ಡೀವ್ಸ್‌ನಿಂದ ವಾಪಸ್ ಪಡೆಯುವಂತೆ ಖಡಕ್ ಸೂಚನೆ ನೀಡಿದ್ದಾರೆ. ಮಾಲ್ಡೀವ್ಸ್ ಅಧ್ಯಕ್ಷ ಚೀನಾ ಕೈಗೊಂಬೆಯಾಗಿದ್ದಾರೆ ಅನ್ನೋ ಆರೋಪದ ಬೆನ್ನಲ್ಲೇ ಮಾಲ್ಡೀವ್ಸ್‌ನ ಈ ನಡೆ ಇದೀಗ ಭಾರತಕ್ಕೆ ಮತ್ತಷ್ಟು ಸವಾಲಾಗಿದೆ. 

ಭಾರತ ಸೇನಾ ವಾಪಸ್ ಪಡೆಯುವ ಡೆಡ್‌ಲೈನ್ ಕುರಿತು ಪಬ್ಲಿಕ್ ಪಾಲಿಸಿ ಮುಖ್ಯ ಕಾರ್ಯದರ್ಶಿ ಅಬ್ದುಲ್ಲಾ ನಜೀಮ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಅಧ್ಯಕ್ಷ ಮುಯಿಝಿ ,ಮಾಲ್ಡೀವ್ಸ್ ಸರ್ಕಾರದ ಪ್ರಮುಖ ಅಧಿಕಾರಿಗಳು ಹಾಗೂ ಭಾರತ ಸರ್ಕಾರದ ಅಧಿಕಾರಿಗಳು, ವಿದೇಶಾಂಗ ಇಲಾಖೆ ಅಧಿಕಾರಿಗಳ ಜೊತೆಗೆ ನಡೆದ ಸಭೆಯಲ್ಲಿ ಈ ವಿಚಾರ ಚರ್ಚಿಸಲಾಗಿದೆ. ಮುಯಿಝಿ ಈಗಾಗಲೇ ಭಾರತದ ಸೇನೆ ವಾಪಸ್ ಕರೆಯಿಸಿಕೊಳ್ಳುವ ಕುರಿತು ನಿಲುವು ಸ್ಪಷ್ಟಪಡಿಸಿದ್ದಾರೆ. ಕೊನೆಯ ಸಭೆಯಲ್ಲಿ ಮಾರ್ಚ್ 15ರೊಳಗೆ ಸೇನೆ ವಾಪಸ್ ಕರೆಯಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಈ ಕುರಿತು ಅಧಿಕೃತವಾಗಿ ಭಾರತಕ್ಕೆ ನಿಲವು ನೀಡಲಾಗುತ್ತದೆ ಎಂದು ಅಬ್ದುಲ್ಲಾ ನಜೀಮ್ ಹೇಳಿದ್ದಾರೆ.

ನಮ್ಮನ್ನು ಬೆದರಿಸಲು ಯಾರಿಗೂ ಪರವಾನಗಿ ನೀಡಿಲ್ಲ, ಪರೋಕ್ಷವಾಗಿ ಭಾರತ ವಿರುದ್ಧ ಗುಡುಗಿದ ಮಾಲ್ಡೀವ್ಸ್!

ಭಾರತೀಯ ಸೇನೆಯನ್ನು ಮಾಲ್ಡೀವ್ಸ್‌ನಿಂದ ವಾಪಸ್ ಕಳುಹಿಸುವುದು ಮುಯಿಝಿ ಚುನಾವಣಾ ಭರವಸೆಯಾಗಿದೆ. ಅಧ್ಯಕ್ಷನಾಗಿ ಆಯ್ಕೆಯಾದರೆ ಭಾರತೀಯ ಸೇನೆಯನ್ನು ಮಾಲ್ಡೀವ್ಸ್‌ನಿಂದ ಹೊರಗೆ ಕಳುಹಿಸಲಾಗುವುದು ಎಂದು ಮುಯಿಝಿ ಚನಾವಣಾ ಭರವಸೆ ನೀಡಿದ್ದರು. ಇದಕ್ಕಾಗಿ ಇಂಡಿಯಾ ಔಟ್ ಅಭಿಯಾನ ಆರಂಭಿಸಿದ್ದರು. 

85 ರಿಂದ 90 ಭಾರತೀಯ ಸೇನಾ ತುಕಡಿಗಳು ಮಾಲ್ಡೀವ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿದೆ. ಮಾಲ್ಡೀವ್ಸ್‌ನಲ್ಲಿ ಶಾಂತಿ ಹಾಗೂ ಇತರ ಆಕ್ರಮಣಗಳಿಂದ ಸುರಕ್ಷಿತವಾಗಿಡಲು ಹಾಗೂ ಈ ದಾಳಿಯಿಂದ ಭಾರತಕ್ಕೆ ಎದುರಾಗುವ ಆತಂಕ ತಪ್ಪಿಸಲು ಸೇನಾ ತುಕಡಿಗಳನ್ನು ನಿಯೋಜಿಸಲಾಗಿದೆ. ಆದರೆ ಚೀನಾದ ಪರ ಒಲವು ಹೊಂದಿರುವ ಮುಯಿಝಿ ಇದೀಗ ಭಾರತ ವಿರೋಧಿ ನಿಲುವು ತಾಳಿದ್ದಾರೆ.

 

ಅಣ್ಣಾ ಫ್ಲೈಟ್ ಬುಕಿಂಗ್ ಪುನರ್ ಆರಂಭಿಸಿ, ಭಾರತೀಯ ಕಂಪನಿಗಳಿಗೆ ಮಾಲ್ಡೀವ್ಸ್ ಮನವಿ!

click me!