
ನವದೆಹಲಿ (ಜನವರಿ 14, 2024): ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಚಳಿ ಇದ್ದು, ತಾಪಮಾನ ಕುಸಿತ ಕಂಡಿದೆ. ಈ ಹಿನ್ನೆಲೆ ಚಲಿ ತಡೆಯಲಾರದೆ ಕಲ್ಲಿದ್ದಲು ಸುಟ್ಟಿದ್ದ ವಿಷಕಾರಿ ಹೊಗೆಯನ್ನು ಸೇವಿಸಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ 6 ಜನರು ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಇಂದು ಬೆಳಗ್ಗೆ ತಾಪಮಾನವು 3.5 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದರಿಂದ ರಾಷ್ಟ್ರ ರಾಜಧಾನಿಯು ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿ ತತ್ತರಿಸುತ್ತಿರುವುದರಿಂದ ಇದು ನಗರಕ್ಕೆ ಈ ಋತುವಿನ ಅತ್ಯಂತ ಕಡಿಮೆಯಾಗಿದೆ. ಇನ್ನು, ದೆಹಲಿಯ ಅಲಿಪುರ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟ ನಾಲ್ವರಲ್ಲಿ ಇಬ್ಬರು ಮಕ್ಕಳೂ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ನೀರಿನ ಟ್ಯಾಂಕರ್ ಚಾಲಕರಾಗಿದ್ದ ರಾಕೇಶ್ (40), ಅವರ ಪತ್ನಿ ಲಲಿತಾ (38), ಅವರ ಇಬ್ಬರು ಮಕ್ಕಳಾದ ಪಿಯೂಷ್ (8) ಮತ್ತು ಸನ್ನಿ (7) ಎಂದು ಗುರುತಿಸಲಾಗಿದೆ.
ವಿಶ್ವದ 2ನೇ ಅತ್ಯಂತ ಜನದಟ್ಟಣೆ ನಗರ ಬೆಂಗಳೂರಿಗೆ ಮತ್ತೊಂದು ಕುಖ್ಯಾತಿ, ದೆಹಲಿಯ ಮೀರಿಸಿದ ಉದ್ಯಾನನಗರಿ!
ಭಾನುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಅಲಿಪುರ್ ಪೊಲೀಸ್ ಠಾಣೆಗೆ ಪಿಸಿಆರ್ ಕರೆ ಬಂದಿದ್ದು, ದೆಹಲಿಯ ಖೇರಾ ಕಲನ್ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆ ವೇಳೆ, ಕೊಠಡಿಯ ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ಕಂಡು ಬಂದಿದೆ ಎಂದೂ ಹೇಳಿದ್ದಾರೆ.
ನಮ್ಮ ತಂಡ ಮೊದಲು ಗಾಜಿನ ಕಿಟಕಿ ಒಡೆದು ಬಾಗಿಲು ತೆರೆಯುವಲ್ಲಿ ಯಶಸ್ವಿಯಾದವು. ನಂತರ, ತಂಡವು ಕೊಠಡಿಯೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ನಾಲ್ಕು ಜನರನ್ನು ಕಂಡಿತು. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಅಧಿಕಾರಿ ಹೇಳಿದ್ದಾರೆ.
ಭಾರತಕ್ಕೆ ತಟ್ಟಿದ ಭೂಕಂಪ ಆತಂಕ, ದಹೆಲಿ-ರಾಷ್ಟ್ರರಾಜಧಾನಿ ವ್ಯಾಪ್ತಿಯಲ್ಲಿ ಕಂಪಿಸಿದ ಭೂಮಿ
ಫೋರೆನ್ಸಿಕ್ ತಂಡ ಮತ್ತು ಅಪರಾಧ ತಂಡವು ಕೋಣೆಯ ಒಳಗಿನಿಂದ ಕಲ್ಲಿದ್ದಲು ಬ್ರೇಜಿಯರ್ (ಅಂಗೀತಿ) ಅನ್ನು ಪತ್ತೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ಎಲ್ಲಾ ನಾಲ್ಕು ಜನರು ಉಸಿರುಗಟ್ಟುವಿಕೆಯಿಂದ ಮೃತಪಟ್ಟಿದ್ದಾರೆ ಎಂದು ತೋರುತ್ತದೆ. ಆದರೆ ಸಿಆರ್‌ಪಿಸಿಯ ಸೆಕ್ಷನ್ 174 ರ ಅಡಿಯಲ್ಲಿ ಈ ವಿಷಯದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡನೇ ಘಟನೆ
ಇದೇ ರೀತಿಯ ಘಟನೆಯಲ್ಲಿ, ಪಶ್ಚಿಮ ದೆಹಲಿಯ ಇಂದರ್‌ಪುರಿ ಪ್ರದೇಶದಲ್ಲಿ ಕಲ್ಲಿದ್ದಲು ಬ್ರೇಜಿಯರ್‌ನಿಂದ ವಿಷಕಾರಿ ಹೊಗೆಯನ್ನು ಉಸಿರಾಡಿದ ಇಬ್ಬರು ನೇಪಾಳ ಮೂಲದ ಪುರುಷರು ತಮ್ಮ ಕೋಣೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ರಾಮ್ ಬಹದ್ದೂರ್ (57) ಮತ್ತು ಅಭಿಷೇಕ್ (22) ಎಂದು ಗುರುತಿಸಲಾಗಿದೆ. ಬಹದ್ದೂರ್ ವೃತ್ತಿಯಲ್ಲಿ ಚಾಲಕನಾಗಿದ್ದು, ಅಭಿಷೇಕ್ ಮನೆಗೆಲಸಗಾರನಾಗಿ ಕೆಲಸ ಮಾಡುತ್ತಿದ್ದ ಎಂದೂ ಪೊಲೀಸರು ಹೇಳಿದ್ದಾರೆ.
ಕೋಣೆಯಲ್ಲಿ ಸುಟ್ಟ ಅಂಗೀತಿ ಕಂಡುಬಂದಿದೆ. ಒಂದು ಕಿಟಕಿಯು ಮುಚ್ಚಿಹೋಗಿರುವುದು ಕಂಡುಬಂದಿತು. ದೇಹದ ಮೇಲೆ ಯಾವುದೇ ಗಾಯಗಳು ಕಂಡುಬಂದಿಲ್ಲ ಎಂದು ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ