ಬಿಜೆಪಿ ನಾಯಕಿ ಶೈನಾಗೆ ‘ಇಂಪೋರ್ಟೆಡ್ ಮಾಲು’ ಎಂದ ಮಹಾರಾಷ್ಟ್ರ ಸಂಸದ!

By Kannadaprabha News  |  First Published Nov 2, 2024, 8:31 AM IST

ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿರುವ ಮಹಾರಾಷ್ಟ್ರದಲ್ಲಿ ಶಿವಸೇನೆ ಉದ್ಧವ್‌ ಬಣದ ಮುಖಂಡ ಹಾಗೂ ಸಂಸದ ಅರವಿಂದ ಸಾವಂತ್‌ ಅವರು, ಶಿಂಧೆ ಬಣದ ಶಿವಸೇನೆ ಅಭ್ಯರ್ಥಿ ಆಗಿ ಸ್ಪರ್ಧಿಸಿರುವ ಬಿಜೆಪಿ ನಾಯಕಿ ಶೈನಾ ಎನ್‌.ಸಿ. ಅವರನ್ನು ‘ಇಂಪೋರ್ಟೆಡ್‌ ಮಾಲು’ (ಆಮದಾದ ಸರಕು) ಎಂದು ಟೀಕಿಸಿ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.


ಮುಂಬೈ (ನ.2): ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿರುವ ಮಹಾರಾಷ್ಟ್ರದಲ್ಲಿ ಶಿವಸೇನೆ ಉದ್ಧವ್‌ ಬಣದ ಮುಖಂಡ ಹಾಗೂ ಸಂಸದ ಅರವಿಂದ ಸಾವಂತ್‌ ಅವರು, ಶಿಂಧೆ ಬಣದ ಶಿವಸೇನೆ ಅಭ್ಯರ್ಥಿ ಆಗಿ ಸ್ಪರ್ಧಿಸಿರುವ ಬಿಜೆಪಿ ನಾಯಕಿ ಶೈನಾ ಎನ್‌.ಸಿ. ಅವರನ್ನು ‘ಇಂಪೋರ್ಟೆಡ್‌ ಮಾಲು’ (ಆಮದಾದ ಸರಕು) ಎಂದು ಟೀಕಿಸಿ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.

ಮುಂಬಾ ದೇವಿ ಕ್ಷೇತ್ರದಲ್ಲಿಶೈನಾ ರೀತಿಯ ‘ಇಂಪೋರ್ಟೆಡ್‌ ಮಾಲು’ ನಮಗೆ ಬೇಕಾಗಿಲ್ಲ. ಕೇವಲ ಅಸಲಿ ಮಾತ್ರ ನಡೆಯುತ್ತದೆ. ನಮ್ಮ ಬಳಿ ಅಮೀನ್ ಪಟೇಲ್‌ (ಅಘಾಡಿ ಅಭ್ಯರ್ಥಿ) ಇದ್ದಾರೆ ಎಂದು ಅರವಿಂದ್‌ ಹೇಳಿದ್ದಾರೆ.

Tap to resize

Latest Videos

undefined

ಬೆಳಗಾವಿ: ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ವಿಫಲ, ನಾಡದ್ರೋಹಿ ಎಂಇಎಸ್‌ ಪುಂಡರಿಗೆ ಮುಖಭಂಗ!

ಇದಕ್ಕೆ ಪ್ರತಿಕ್ರಿಯೆ ನೀಡಿದ ಶೈನಾ, ನೀವು ಇಷ್ಟರ ಮಟ್ಟಿಗೆ ಕೆಳಗೆ ಇಳಿಯುತ್ತೀರಿ ಎಂದು ಅಂದುಕೊಂಡಿರಲಿಲ್ಲ. ನನಗೆ ಸಾವಂತ್‌ ಅವರು ಪ್ರಮಾಣ ಪತ್ರ ಕೊಡಬೇಕಾಗಿಲ್ಲ. ನಾನು ಮುಂಬೈ ಮಗಳು ಎಂದು ತಿರುಗೇಟು ನೀಡಿದ್ದಾರೆ ಹಾಗೂ ಸಂಸದನ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಉಲ್ಟಾ ಹೊಡೆದಿರುವ ಸಂಸದ ' ಶೈನಾ ಅವರ ಮಾತಿಗೆ, ನನ್ನ ಮಾತು ತಪ್ಪಾಗಿ ಅರ್ಥೈಸಲಾಗಿದೆ' ಎಂದು ಸಮಜಾಯಿಷಿ ನೀಡಿದ್ದಾರೆ

click me!