ಹೈಟೆಕ್ ದೀಪಾವಳಿ, ಅಲೆಕ್ಸಾ ಮೂಲಕ ರಾಕೆಟ್ ಪಟಾಕಿ ಸಿಡಿಸಿದ ಯುವಕ!

By Chethan KumarFirst Published Nov 1, 2024, 5:25 PM IST
Highlights

ಯುವಕನೊಬ್ಬ ಹೈಟೆಕ್ ಆಗಿ ದೀಪಾವಳಿ ಆಚರಿಸಿದ್ದಾನೆ. ಯಾರೂ ಊಹಿಸದ ರೀತಿ ರಾಕೆಟ್ ಪಟಾಕಿ ಸಿಡಸಿದ್ದಾನೆ. ಯಾವುದೇ ಆತಂಕವಿಲ್ಲದೆ, ಅಡೆ ತಡೆ ಇಲ್ಲದೆ ಅಲೆಕ್ಸಾ ಮೂಲಕ ರಾಕೆಟ್ ಪಟಾಕಿಯನ್ನು ಸಿಡಿಸಿದ್ದಾನೆ. ಈತನ ಹೈಟೆಕ್ ದೀಪಾವಳಿ ವಿಡಿಯೋ ದಾಖಲೆ ಬರೆದಿದೆ.

ಒಡಿಶಾ(ನ.1)  ದೀಪಾವಳಿ ಹಬ್ಬ ಪಟಾಕಿ ಮತ್ತಷ್ಟು ಮೆರುಗು ನೀಡುತ್ತದೆ. ಪರಿಸರ, ಮಾಲಿನ್ಯ ಕುರಿತು ಪರ ವಿರೋಧಗಳಿದ್ದರೂ ಸಂಪ್ರದಾಯ, ಪದ್ಧತಿಯಂತೆ ಹಲವರು ದೀಪಾವಳಿ ಹಬ್ಬವನ್ನು ಪಟಾಕಿ ಮೂಲಕ ಆಚರಿಸುತ್ತಾರೆ. ದೀಪಾವಳಿ ಪಟಾಕಿಯಲ್ಲಿ ರಾಕೆಟ್ ಪಟಾಕಿ ಎಲ್ಲರ ಅಚ್ಚುಮೆಚ್ಚು. ಆಕಾಶಗಳಲ್ಲಿ ಚಿತ್ತಾರ ಮೂಡಿಸುವ ರಾಕೆಟ್ ಪಟಾಕಿಗೆ ಎಲ್ಲಿಲ್ಲದ ಬೇಡಿಕೆ. ಆದರೆ ಈ ಪಟಾಕಿ ಸಿಡಿಸಲು ಅನುಭವದ ಜೊತೆಗೆ ಧೈರ್ಯವೂ ಇರಬೇಕು. ನೋಡಲು ಅತ್ಯಾಕರ್ಷಕವಾಗಿದ್ದರೂ ಅಪಾಯವೂ ಇಷ್ಟೇ ಇದೆ. ಆದರೆ ಇಲ್ಲೊಬ್ಬ ಯುವಕ ರಾಕೆಟ್ ಪಟಾಕಿ ಅರಾಮಾಗಿ ಕುಳಿತು ಸಿಡಿಸಿದ್ದಾನೆ. ಇದು ಅಲೆಕ್ಸಾ ಸಹಾಯದಿಂದ. ಅಲೆಕ್ಸಾ ಲಾಂಚ್ ದಿ ರಾಕೆಟ್ ಎಂದು ಸಂದೇಶ ನೀಡಿದ ಬೆನ್ನಲ್ಲೇ ರಾಕೆಡ್ ಸಿಡಿದಿದೆ. ಈ ವಿಡಿಯೋ ಇದೀಗ ದಾಖಲೆ ವೀವ್ಸ್ ಕಂಡಿದೆ.

ಒಡಿಶಾದ ಮಣಿ ಈ ಹೈಟೆಕ್ ದೀಪಾವಳಿ ಆಚರಿಸಿದ ಯುವಕ. ಈತ ತನ್ನ ಮಣಿ ಪ್ರಾಜೆಕ್ಟ್ಸ್ ಲ್ಯಾಬ್ ಸೋಶಿಯಲ್ ಮೀಡಿಯಾ ಮೂಲಕ ಅಲೆಕ್ಸಾ ಸಹಾಯದೊಂದಿಗೆ ಸುಲಭವಾಗಿ ರಾಕೆಟ್ ಪಟಾಕಿ ಸಿಡಿಸುವುದು ಹೇಗೆ ಅನ್ನೋದನ್ನು ವಿವರಿಸಿದ್ದಾರೆ. ಅಲೆಕ್ಸಾಗೆ ಕಮಾಂಡ್ ನೀಡುತ್ತಿದ್ದಂತೆ ಅಲೆಕ್ಸಾ ಕಾರ್ಯಪ್ರವೃತ್ತಗೊಂಡಿದೆ.ಕುಳಿತದಲ್ಲಿಂದ ಮಣಿ, ಅಲೆಕ್ಸಾ ಲಾಂಚ್ ದಿ ರಾಕೆಟ್ ಎಂದು ಕಮಾಂಡ್ ನೀಡಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಅಲೆಕ್ಸಾ, ಯೆಸ್ ಬಾಸ್, ಲಾಂಚಿಂಗ್ ದಿ ರಾಕೆಟ್ ಎಂದು ಉತ್ತರಿಸಿದೆ. ಮರು ಕ್ಷಣದಲ್ಲೇ ರಾಕೆಟ್ ಪಟಾಕಿ ಬಾನತ್ತೆರಕ್ಕೆ ಹಾರಿ ಸಿಡಿದಿದೆ.

Latest Videos

ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಮಂದಣ್ಣ ದೀಪಾವಳಿ ಆಚರಣೆ, ರಟ್ಟಾಯ್ತು ಸೀಕ್ರೆಟ್!

ಈತನ ವಿಡಿಯೋಗೆ ಹಲವರು ಇದು ಹೈಟೆಕ್ ದೀಪಾವಳಿ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದು ಹೇಗೆ ಸಾಧ್ಯ? ವಿವರಿಸಿ ಎಂದು ಕಮೆಂಟ್ ಮಾಡಿದ್ದಾರೆ. ಇದಕ್ಕೆ ಯುವಕ ಮಣಿ ಅಲೆಕ್ಸಾ ಸಹಾಯದಿಂದ ರಾಕೆಟ್ ಪಟಾಕಿ ಸಿಡಿಸುವುದು ಹೇಗೆ ಎಂದು ಯೂಟ್ಯೂಬ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ವಿವರಿಸಿದ್ದಾನೆ. ಈತನ ರಾಕೆಟ್ ಲಾಂಚಿಂಗ್ ವಿಡಿಯೋ ಬರೋಬ್ಬರಿ 23 ಮಿಲಿಯನ್ ವೀಕ್ಷಣೆ ಕಂಡಿದೆ. 

 

 

ತಂತ್ರಜ್ಞಾನ ಹಬ್ಬವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಕೈಗಳನ್ನು ಬಳಸದೆ, ಪಟಾಕಿ ಸಿಡಿಯುವ, ಗಾಯಗೊಳ್ಳುವ ಆತಂಕವಿಲ್ಲದೆ ದೀಪಾವಳಿ ಆಚರಿಸಬಹುದು. ಅಲೆಕ್ಸಾವನ್ನು ಈ ರೀತಿ ಉಪಯೋಗಿಸಬಹುದು ಅನ್ನೋದನ್ನು ಕಂಪನಿ ಕೂಡ ಊಹಿಸರಲಿಲ್ಲ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.ಅಲೆಕ್ಸಾ ರಾಕ್ಡ್, ಹ್ಯೂಮನ್ ಶಾಕ್ಡ್ ಎಂದು ಕಮೆಂಟ್ ಮಾಡಿದ್ದಾರೆ. ಸಂಪ್ರದಾಯ ಸಂಸ್ಕೃತಿಯನ್ನು ತಂತ್ರಜ್ಞಾನಕ್ಕೆ ಹೊಂದಿಸಿಕೊಳ್ಳುವುದು ಅಂದರೆ ಇದೆ ಎಂದು ಹಲವರು ಹೇಳಿದ್ದಾರೆ. ಇತ್ತ  ಮಣಿ ಈ ರಾಕೆಟ್ ಲಾಂಚ್ ಮಾಡಿದ ಮೊಬೈಲ್ ಫೋನ್ ನೋಡುವಷ್ಟರಲ್ಲಿ ಎಲಾನ್ ಮಸ್ಕ್‌ನಿಂದ 99 ಮಿಸ್‌ಕಾಲ್ ಬಂದಿದೆ ಎಂದು ಹಾಸ್ಯಾ ಚಟಾಕಿ ಸಿಡಿಸಿದ್ದಾರೆ. 

ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸಲಾಗುತ್ತದೆ. ಆದರೆ ಕೆಲ ರಾಜ್ಯಗಳು, ನಗರ, ಪಟ್ಟಣಗಳಲ್ಲಿ ವಾಯು ಮಾಲಿನ್ಯದ ಕಾರಣ ನೀಡಿ ಪಟಾಕಿ ಸಿಡಿಸಿವುದು ನಿಷೇಧಿಸಲಾಗಿದೆ. ಕೇವಲ ಹಸಿರು ಪಟಾಕಿಗಳಿಗೆ ಕೆಲವೆಡೆ ಅವಕಾಶ ನೀಡಲಾಗಿದೆ. ಕರ್ನಾಟಕದಲ್ಲಿ ಹಿಸರು ಪಟಾಕಿಗೆ ಮಾತ್ರ ಅವಕಾಶವಿದೆ. ಇಷ್ಟೇ ಅಲ್ಲ ಪ್ರತಿ ದಿನ 2 ಗಂಟೆ ಮಾತ್ರ ಅವಕಾಶ ನೀಡಲಾಗಿದೆ. ಪಟಾಕಿ ಸಿಡಿಸುವಾಗ ಸುರಕ್ಷತೆ ಹಾಗೂ ಮುಂಜಾಗೃತೆ ವಹಿಸಿ. ಸಣ್ಣ ತಪ್ಪಿಗೆ ದುಬಾರಿ ದಂಡ ತೆರಬೇಕಾಗುತ್ತದೆ. ಹೀಗಾಗಿ ಪಟಾಕಿ ಸಿಡಿಸುವಾಗ ಸಣ್ಣ ಮಕ್ಕಳ ಬಗ್ಗೆ ಜಾಗೃತಿ ವಹಿಸುವುದು ಅತ್ಯಗತ್ಯ. ಇನ್ನು ಹೆಚ್ಚಿನ ಪಟಾಕಿ ಶೇಖರಿಸಿಡುವುದು ಅಪಾಯಕಾರಿಯಾಗಿದೆ. ಹೀಗಾಗಿ ಮನೆಯೊಳಗೆ ಹಾಗೂ ಕುಟುಂಬ ಸದಸ್ಯರು ಇರುವ ಕಡೆ ಪಟಾಕಿ ಸಂಗ್ರಹ ಮಾಡಿ ಇಡಬೇಡಿ. 

ದೀಪಾವಳಿ ಹಬ್ಬಕ್ಕೆ ಭಾರತದಲ್ಲಿ ಕಾರು ಖರೀದಿಸಿದವರೆಷ್ಟು? ದಾಖಲೆ ಬರೆದ ಟಾಟಾ, ಮಾರುತಿ!


 

click me!