ಈಶ ಫೌಂಡೇಶನ್ ಆರಂಭಿಸಿರುವ ಮಣ್ಣು ಉಳಿಸಿ ಅಭಿಯಾನಕ್ಕೆ ಉತ್ತರ ಪ್ರದೇಶ, ಗುಜರಾತ್ ಸರ್ಕಾರ ಸೇರಿದಂತೆ ನಾಲ್ಕು ರಾಜ್ಯಗಳು ಕೈಜೋಡಿಸಿವೆ. ಇದೀಗ ಮಹಾರಾಷ್ಟ್ರ ಸರ್ಕಾರವೂ ಕೂಡ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಒಡಂಬಡಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಿದೆ.
ಬೆಂಗಳೂರು (ಜೂ.14): ಈಶ ಫೌಂಡೇಶನ್ ಆರಂಭಿಸಿರುವ ಮಣ್ಣು ಉಳಿಸಿ ಅಭಿಯಾನಕ್ಕೆ ಉತ್ತರ ಪ್ರದೇಶ, ಗುಜರಾತ್ ಸರ್ಕಾರ ಸೇರಿದಂತೆ ನಾಲ್ಕು ರಾಜ್ಯಗಳು ಕೈಜೋಡಿಸಿವೆ. ಇದೀಗ ಮಹಾರಾಷ್ಟ್ರ ಸರ್ಕಾರವೂ ಕೂಡ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಒಡಂಬಡಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಿದೆ. ಮುಂಬೈ ಮಹಾನಗರದ ಜಿಯೋ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಸಮಾವೇಶದಲ್ಲಿ ಮಹಾರಾಷ್ಟ್ರದ ಪರಿಸರ ಮಂತ್ರಿ ಆದಿತ್ಯ ಠಾಕ್ರೆ ಮತ್ತು ಸದ್ಗುರು ಪರಸ್ಪರ ಒಡಂಬಡಿಕೆ ಪತ್ರವನ್ನು ವಿನಿಮಯ ಮಾಡಿಕೊಂಡರು.
ನಂತರ ಮಾತನಾಡಿದ ಸದ್ಗುರು, ಮೂರು ತಿಂಗಳ ಹಿಂದೆ ಮಣ್ಣು ಜನಪ್ರಿಯ ವಿಷಯವಾಗಿರಲಿಲ್ಲ. ಆದರೆ ತಮ್ಮ ಪಯಣ ಶುರುವಾದ ಮೇಲೆ ಸುಮಾರು 2.8 ಬಿಲಿಯನ್ ಜನರು ಸ್ಪಂದಿಸಿದ್ದಾರೆ. ಭೂಮಿಗೆ ಮಾತೆಯ ಸ್ಥಾನ ನೀಡಿರುವ ಭಾರತ ಮಣ್ಣಿನ ಜೀಣೋದ್ಧಾರದ ಕಾರ್ಯದಲ್ಲಿ ಪಾಲ್ಗೊಂಡು ಇಡೀ ವಿಶ್ವಕ್ಕೆ ಮುಂದಾಳಾಗಬೇಕು. ಈಗಲಾದರೂ ಪ್ರತಿಯೊಬ್ಬರು ಮಣ್ಣಿನ ಮಹತ್ವವನ್ನು ಅರಿತು ಮಣ್ಣು ಉಳಿಸಿ ಅಭಿಯಾನದೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
Save Soil: ಮಾನವನ ಸಂತೋಷದಿಂದ ಮಣ್ಣಿನ ಅವನತಿ: ಸದ್ಗುರು
ಮಹಾರಾಷ್ಟ್ರ ಮುಖ್ಯಮಂತ್ರಿ ಆದಿತ್ಯ ಠಾಕ್ರೆ ಮಾತನಾಡಿ, ಮಣ್ಣಿನ ಉಳಿವಿನ ಬಗ್ಗೆ ಇಂದಿನ ಪೀಳಿಗೆ ಸರಿಯಾದ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ಪೀಳಿಗೆ ನಶಿಸಿ ಹೋಗುತ್ತದೆ. ನಾವೆಲ್ಲ ಮಣ್ಣಿನಿಂದಲೇ ಬಂದಿದ್ದೇವೆ. ಮರಳಿ ಮಣ್ಣನ್ನು ಸೇರುತ್ತೇವೆ. ನಾವೆಲ್ಲ ಮಣ್ಣು. ಮಣ್ಣು ಉಳಿಸಿ ಅಭಿಯಾನಕ್ಕೆ ಸದ್ಗುರುಗಳೊಂದಿಗೆ ನಮ್ಮ ಸರ್ಕಾರ ಕೈಜೋಡಿಸಿದ್ದು ಅಭಿಯಾನಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದರು.
ಬಾಲಿವುಡ್ ನಟಿ ಜೂಹಿ ಚಾವ್ಲಾ ಮಾತನಾಡಿ, ಕಾವೇರಿ ಕೂಗಿನ ಯೋಜನೆಗಳಡಿಯಲ್ಲಿ ಇರುವ ಕೃಷಿಕ್ಷೇತ್ರಗಳಿಗೆ ಭೇಟಿ ಕೊಟ್ಟಬಗ್ಗೆ ತಿಳಿಸಿದರು. ಅಲ್ಲಿ ಹೇಗೆ ಕೃಷಿ ಅರಣ್ಯಗಳು ಕೃಷಿಕರ ಅದೃಷ್ಟವನ್ನು ಬದಲಾಯಿಸುತ್ತಿವೆ. ಬಿಸಿಲು, ಮಳೆ, ಮರಳು ಬಿರುಗಾಳಿ, ಹಿಮ ಯಾವುದನ್ನು ಲೆಕ್ಕಿಸದೆ ಸದ್ಗುರು ಕೈಗೊಂಡ 100 ದಿನದ 3 ಸಾವಿರ ಕಿಲೋ ಮೀಟರುಗಳ ಪಯಣದ ಬಗ್ಗೆ ಅಭಿಮಾನ ಸೂಚಿಸಿದರು. ನಿಸ್ವಾರ್ಥವಾದ ಈ ಅಭಿಯಾನ ಯಶಸ್ವಿಯಾಗಲಿ ಎಂದರು.
ಮಣ್ಣು ಉಳಿಸಿ: ಸದ್ಗುರು ಜತೆ ಯೋಗಿ ಸರ್ಕಾರ ಒಪ್ಪಂದ
ಕಾರ್ಯಕ್ರಮದಲ್ಲಿ ಸಿನಿಮಾ ರಂಗದ ಮೌನಿರಾಯ್, ರಿತ್ವಿಕ್ ದಂಜಾನಿ, ದಿವ್ಯಾಂಕ ತ್ರಿಪಾಠಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಈ ಅಭಿಯಾನದಲ್ಲಿ ಭರತನಾಟ್ಯ ಕಲಾವಿದೆ ರಾಧೆ ಜಗ್ಗಿ ಈಶ ಸಂಸ್ಕೃತಿ ಕಲಾವಿದರೊಂದಿಗೆ ಶಾಸ್ತ್ರೀಯ ನೃತ್ಯ ಮತ್ತು ಕಲರಿಪಾಯಟ್ಟುವಿನ ಸಂಗಮದ ಮೂಲಕ ಮಾನವ ಹಾಗೂ ಮಣ್ಣಿನ ಸಂಬಂಧವನ್ನು ಪ್ರಸ್ತುತ ಪಡಿಸಿದರು.