ನಡುರಸ್ತೆಯಲ್ಲಿಯೇ ಸರ್ಕಾರಿ ಇಂಜಿನಿಯರ್‌ ಕಾಲರ್‌ ಹಿಡಿದು, ಕೆನ್ನೆಗೆ ಬಾರಿಸಿದ ಎಂಎಲ್‌ಎ ಗೀತಾ ಜೈನ್‌!

Published : Jun 21, 2023, 02:45 PM ISTUpdated : Jun 21, 2023, 04:10 PM IST
ನಡುರಸ್ತೆಯಲ್ಲಿಯೇ ಸರ್ಕಾರಿ ಇಂಜಿನಿಯರ್‌ ಕಾಲರ್‌ ಹಿಡಿದು, ಕೆನ್ನೆಗೆ ಬಾರಿಸಿದ ಎಂಎಲ್‌ಎ ಗೀತಾ ಜೈನ್‌!

ಸಾರಾಂಶ

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೀರಾ ಭಯಂದರ್‌ನ ಪಕ್ಷೇತರ ಶಾಸಕಿ ಆಗಿರುವ ಗೀತಾ ಜೈನ್‌, ಯಾವುದೇ ಸೂಚನೆ ನೀಡದೇ ಮನೆಯನ್ನು ನೆಲಸಮ ಮಾಡಿದ್ದಕ್ಕಾಗಿ ಸಾರ್ವಜನಿಕವಾಗಿ ಸರ್ಕಾರಿ ಇಂಜಿನಿಯರ್‌ನ ಕಾಲರ್‌ ಹಿಡಿದು ಕಪಾಳಮೋಕ್ಷ ಮಾಡಿದ್ದಾರೆ. ಈ ವಿಡಿಯೋ ವೈರಲ್‌ ಆಗಿದೆ.  

ಮುಂಬೈ (ಜೂ.21): ಮಹಾರಾಷ್ಟ್ರದ ಪಕ್ಷೇತರ ಶಾಸಕಿ ಗೀತಾ ಜೈನ್‌, ಜನರ ಎದುರೇ ಜೂನಿಯರ್‌ ಇಂಜಿನಿಯರ್‌ನ ಕಾಲರ್‌ ಹಿಡಿದು ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಜೂನಿಯರ್‌ ಇಂಜಿನಿಯರ್‌ನನ್ನು ನಾಲಾಯಕ್‌ (ಅಯೋಗ್ಯ) ಎಂದೂ ಕರೆದಿದ್ದಾರೆ. ಥಾಣೆ ಜಿಲ್ಲೆಯ ಮೀರಾ ಭಯಂದರ್‌ನ ಪಕ್ಷೇತರ ಶಾಸಕಿಯಾಗಿರುವ ಗೀತಾ ಜೈನ್‌, ಮೀರಾ ಭಯಂದರ್‌ ಪುರಸಭೆಯ ಜೂನಿಯರ್‌ ಇಂಜಿನಿಯರ್‌ಗೆ ನಡುರಸ್ತೆಯಲ್ಲಿಯೇ ಕೆನ್ನೆಗೆ ಬಾರಿಸಿದ ಘಟನೆ ನಡೆದಿದೆ. ಯಾವುದೇ ನೋಟಿಸ್‌ ನೀಡದೇ, ಮನೆಯಲ್ಲಿರುವ ಮಹಿಳೆಯರು, ಮಕ್ಕಳು ಹಾಗೂ ಹಿರಿಯರನ್ನು ಹೊರಹಾಕಿ ಮನೆಯ ಒಂದು ಭಾಗವನ್ನು ಜೂನಿಯರ್‌ ಇಂಜಿನಿಯರ್‌ ಉಪಸ್ಥಿತಿಯಲ್ಲಿ ಕೆಡವಲಾಗಿತ್ತು. ಈ ವೇಳೆ ಅಲ್ಲಿಗೆ ಆಗಮಿಸಿದ ಗೀತಾ ಜೈನ್‌ ಸಿಟ್ಟಿಗೆದ್ದು ಜೂನಿಯರ್‌ ಇಂಜಿನಿಯರ್‌ ಮೇಳೆ ಹಲ್ಲೆ ಮಾಡಿದ್ದಾರೆ. ವೀಡಿಯೊದಲ್ಲಿ, ಗೀತಾ ಜೈನ್ ಅವರು ಸೂಚನೆ ನೀಡದೇ ಮನೆಯನ್ನು ಕೆಡವಿದ ಬಗ್ಗೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ನಂತರ ಸರ್ಕಾರಿ ಇಂಜಿನಿಯರ್‌ನ ಕಾಲರ್ ಹಿಡಿದು ಕಪಾಳಮೋಕ್ಷ ಮಾಡಿದ್ದಾರೆ.

ಈ ಕುರಿತಂತೆ ಸ್ಥಳೀಯ ಸುದ್ದಿವಾಹಿನಿಗೆ ಮಾತನಾಡಿರುವ ಗೀತಾಜೈನ್‌, ತನ್ನ ಮನೆಯನ್ನು ಕಳೆದುಕೊಂಡು ಆರು ತಿಂಗಳ ಮಗುವವನ್ನು ಹಿಡಿದುಕೊಂಡು ರಸ್ತೆಯಲ್ಲಿ ನಿಂತಿದ್ದ ಮಹಿಳೆಯ ಬಗ್ಗೆ ಜೂನಿಯರ್‌ ಇಂಜಿನಿಯರ್ ಕೆಟ್ಟದಾಗಿ ಮಾತನಾಡಿದ್ದ. ಇದರಿಂದ ನಾನು ಸಿಟ್ಟಾಗಿದ್ದೆ. ಆತನಿಗೆ ನಾನು ಕೆನ್ನೆಗೆ ಬಾರಿಸಿದ್ದು, ಸಾಮಾನ್ಯ ಪ್ರತಿಕ್ರಿಯೆ ಆಗಿತ್ತಷ್ಟೇ ಎಂದಿದ್ದಾರೆ. ಘಟನೆಯ ಕುರಿತು ಮಾತನಾಡಿದ ಗೀತಾ ಜೈನ್, ಜೂನಿಯರ್ ಸಿವಿಕ್ ಎಂಜಿನಿಯರ್‌ಗಳು ನೆಲಸಮ ಮಾಡಿದ ಮನೆಯ ಒಂದು ಭಾಗ ಮಾತ್ರ ಅಕ್ರಮವಾಗಿದೆ ಮತ್ತು ಅದರ ನಿವಾಸಿಗಳು ಅಕ್ರಮ ಭಾಗವನ್ನು ತೆಗೆದುಹಾಕುವುದಾಗಿ ಭರವಸೆ ನೀಡಿದ್ದರು ಎಂದಿದ್ದಾರೆ.

"ಅಕ್ರಮ ನಿರ್ಮಾಣವು ಬಿಲ್ಡರ್‌ಗೆ ಅಡ್ಡಿಯಾಗಿದೆ ಮತ್ತು ಯಾವುದೇ ಸರ್ಕಾರಿ ಸೌಕರ್ಯ ಅಥವಾ ರಸ್ತೆಗೆ ಇದು ಅಡ್ಡಿಯಾಗಿರಲಿಲ್ಲ ಎಂದು ಸಾಬೀತಾಗಿದೆ. ಆದರೂ, ಈ ನಾಗರಿಕ ಅಧಿಕಾರಿಗಳು ಅಲ್ಲಿಗೆ ಹೋಗಿ ಅಕ್ರಮ ಭಾಗವನ್ನು ಕೆಡವುವ ಬದಲು ಇಡೀ ಮನೆಯನ್ನು ನೆಲಸಮ ಮಾಡಿದ್ದಾರೆ" ಎಂದು ಅವರು ಹೇಳಿದರು. ತಮ್ಮ ಮನೆ ಕೆಡವುವುದನ್ನು ವಿರೋಧಿಸಿದ ಮಹಿಳೆಯರ ಜುಟ್ಟು ಎಳೆದಾಡಿದ್ದಾರೆ ಎಂದು ಶಾಸಕರು ಆರೋಪಿಸಿದ್ದಾರೆ.

ಇಬ್ಬರು ಇಂಜಿನಿಯರ್‌ಗಳು ಬಿಲ್ಡರ್‌ಗಳ ಸಹಕಾರದೊಂದಿಗೆ ಖಾಸಗಿ ಜಮೀನಿನಲ್ಲಿ ನೆಲಸಮ ಕಾರ್ಯವನ್ನು ನಡೆಸುತ್ತಿದ್ದಾರೆ ಎಂದು ಗೀತಾ ಜೈನ್ ಹೇಳಿದ್ದಾರೆ. ತನ್ನ ಕೃತ್ಯಕ್ಕೆ ವಿಷಾದಿಸುವುದಿಲ್ಲ ಮತ್ತು ಯಾವುದೇ ಶಿಕ್ಷೆಯನ್ನು ಎದುರಿಸಲು ಸಿದ್ಧ ಎಂದಿದ್ದಾರೆ.

ನಾನು ಈ ವಿಚಾರವನ್ನು ಸದನದಲ್ಲಿಯೂ ಪ್ರಸ್ತಾಪ ಮಾಡುತ್ತೇನೆ. ಇಂಜಿನಿಯರ್ ಬೇಕಾದರೆ ನನ್ನ ಮೇಲೆ ಕೇಸ್‌ ಕೂಡ ಮಾಡಲಿ. ಅದನ್ನು ಎದುರಿಸಲು ನಾನು ಸಿದ್ಧ. ಖಾಸಗಿ ಜಮೀನಿನಲ್ಲಿ ನಿರ್ಮಿಸಿರುವ ಕಟ್ಟಡಗಳನ್ನು ಅಧಿಕಾರಿಗಳು ಕೆಡವುವುದನ್ನು ಸಹಿಸಿಕೊಳ್ಳುವುದು ಹೇಗೆ ಎಂದು ಶಾಸಕಿ ಪ್ರಶ್ನೆ ಮಾಡಿದ್ದಾರೆ.

17,500 ರೂ. ಕೊಟ್ಟು ಮುಖಕ್ಕೆ ಫೇಶಿಯಲ್‌ ಮಾಡಿಸಿಕೊಂಡ ಮಹಿಳೆಯ ಮುಖವೇ ಸುಟ್ಟೋಯ್ತು! 

ಗೀತಾ ಜೈನ್ 2019 ರ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷೇತರವಾಗಿ ಗೆಲುವು ಕಂಡಿದ್ದರು. ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾದ ನಂತರ ಶಿವಸೇನೆಗೆ ಬೆಂಬಲ ನೀಡಿದರು. ಆದರೆ, ಕಳೆದ ವರ್ಷ ಜೂನ್‌ನಲ್ಲಿ ಏಕನಾಥ್ ಶಿಂಧೆ ಬಂಡಾಯದ ನಂತರ ಗೀತಾ ಜೈನ್ ಈಗ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪಾಳೆಯದಲ್ಲಿದ್ದಾರೆ.

ಸಿನಿಮಾ ಶೂಟಿಂಗ್‌ ಪೂರ್ಣ ಮಾಡೋ ಸಲುವಾಗಿ ಸರಗಳ್ಳತನಕ್ಕೆ ಇಳಿದಿದ್ದ ಗ್ಯಾಂಗ್‌ ಅರೆಸ್ಟ್‌!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು