ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ ವಿರೋಧಿಸಿ ಮಹಾರಾಷ್ಟ್ರ ಕ್ಯಾತೆ: ಸುಪ್ರೀಂಗೆ ಅರ್ಜಿ

Published : Mar 12, 2025, 04:51 AM ISTUpdated : Mar 12, 2025, 07:50 AM IST
ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ ವಿರೋಧಿಸಿ ಮಹಾರಾಷ್ಟ್ರ ಕ್ಯಾತೆ: ಸುಪ್ರೀಂಗೆ ಅರ್ಜಿ

ಸಾರಾಂಶ

ಆಲಮಟ್ಟಿ ಜಲಾಶಯವನ್ನು ಎತ್ತರಿಸುವ ಕರ್ನಾಟಕದ ಯೋಜನೆಯ ವಿರುದ್ಧ ಸುಪ್ರೀಂ ಕೋರ್ಟ್‌ನ ಮಧ್ಯಪ್ರವೇಶಕ್ಕೆ ಆಗ್ರಹಿಸಿ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಲಿದೆ ಎಂದು ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್‌ ಹೇಳಿದ್ದಾರೆ. 

ಮುಂಬೈ (ಮಾ.12): ಆಲಮಟ್ಟಿ ಜಲಾಶಯವನ್ನು ಎತ್ತರಿಸುವ ಕರ್ನಾಟಕದ ಯೋಜನೆಯ ವಿರುದ್ಧ ಸುಪ್ರೀಂ ಕೋರ್ಟ್‌ನ ಮಧ್ಯಪ್ರವೇಶಕ್ಕೆ ಆಗ್ರಹಿಸಿ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಲಿದೆ ಎಂದು ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್‌ ಹೇಳಿದ್ದಾರೆ. ಈ ಮೂಲಕ ಗಡಿ ತಂಟೆ ಬಳಿಕ, ಈ ಹಿಂದಿನ ಅಣೆಕಟ್ಟೆ ಎತ್ತರ ಹೆಚ್ಚಳದ ವಿರುದ್ಧ ಕ್ಯಾತೆಯನ್ನು ಮತ್ತೆ ಮಹಾರಾಷ್ಟ್ರ ಆರಂಭಿಸಿದೆ.

ಮಂಗಳವಾರ ವಿಧಾನಪರಿಷತ್ತಿನಲ್ಲಿ, ‘ಜಲಾಶಯವನ್ನು ಎತ್ತರಿಸುವ ಕರ್ನಾಟಕದ ಯೋಜನೆಗೆ ಮಹಾರಾಷ್ಟ್ರ ವಿರೋಧ ವ್ಯಕ್ತಪಡಿಸಿದೆಯೇ’ ಎಂಬ ಎನ್‌ಸಿಪಿ (ಶರದ್‌ ಬಣ) ನಾಯಕ ಅರುಣ್‌ ಲಾಡ್‌ ಅವರು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಪಾಟೀಲ್‌, ‘ಕರ್ನಾಟಕದ ಯೋಜನೆಯನ್ನು ರಾಜ್ಯ ಸರ್ಕಾರ ನಿರಂತರವಾಗಿ ವಿರೋಧಿಸುತ್ತಿದೆ. ಡ್ಯಾಂ ಎತ್ತರಿಸುವಿಕೆಗೆ ಅನುಮತಿಸುವ ಮೊದಲು ಮಹಾರಾಷ್ಟ್ರದ ಕಳವಳವನ್ನು ಪರಿಗಣಿಸುವ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಶೀಘ್ರವೇ ಮಧ್ಯಂತರ ಅರ್ಜಿ ಸಲ್ಲಿಸುತ್ತೇವೆ’ ಎಂದರು.

ಮಹಾರಾಷ್ಟ್ರಕ್ಕೆ ಸಮಸ್ಯೆ ಏಕೆ?: ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಡ್ಯಾಂ ಎಂದು ಅಧಿಕೃತವಾಗಿ ಕರೆಯಲ್ಪಡುವ ಈ ಜಲಾಶಯವು, ಉತ್ತರ ಕರ್ನಾಟಕದಲ್ಲಿ ಹರಿಯುವ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಜಲವಿದ್ಯುತ್‌ ಯೋಜನೆಯಾಗಿದೆ. 2008ರಲ್ಲಿ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ ಹೊರಡಿಸಿದ ತೀರ್ಪಿನಲ್ಲಿ, ಜಲಾಶಯದ ಎತ್ತರವನ್ನು 524.26 ಮೀ. ಎತ್ತರಿಸಲು ಅನುಮತಿಸಲಾಗಿತ್ತು. 

ನಿಮ್ಮದು ನಾಲಿಗೆನೋ ಎಕ್ಕಡನೋ: ಶಾಸಕ ಯತ್ನಾಳ್‌ಗೆ ರೇಣುಕಾಚಾರ್ಯ ಪ್ರಶ್ನೆ

ಆದರೆ ಇದರ ಎತ್ತರ ಹೆಚ್ಚಿಸಿದರೆ ಕರ್ನಾಟಕ ಹೆಚ್ಚು ನೀರು ಸಂಗ್ರಹ ಮಾಡುತ್ತದೆ. ಇದರಿಂದ ತನ್ನ ಕೊಲ್ಹಾಪುರ ಹಾಗೂ ಸಾಂಗ್ಲಿಯಲ್ಲಿ ಪ್ರವಾಹ ಸೃಷ್ಟಿ ಆಗಬಹುದು ಎಂಬುದು ಮಹಾರಾಷ್ಟ್ರದ ಆತಂಕ. ಆದ್ದರಿಂದಲೇ ಎರಡೂ ರಾಜ್ಯಗಳ ನಡುವೆ ಹಲವು ವರ್ಷಗಳಿಂದ ಸಂಘರ್ಷದ ವಿಷಯವಾಗಿ ಉಳಿದಿದೆ. ಹೀಗಾಗಿ ಎತ್ತರ ಹೆಚ್ಚಳಕ್ಕೆ ತಡೆ ಕೋರಿ, ಮಹಾರಾಷ್ಟ್ರ ಸುಪ್ರೀಂ ಮೊರೆ ಹೋಗಲು ನಿರ್ಧರಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಾಲತಾಣಗಳಲ್ಲಿ ಮಕ್ಕಳ ಬಳಕೆ ನಿರ್ಬಂಧಿಸಿ: ಸುಧಾ ಮೂರ್ತಿ
ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!