
ನವದೆಹಲಿ(ಮಾ.02): ರಾಜ್ಯಗಳು ಕಡ್ಡಾಯ ಮಾಸ್ಕ್ ಧಾರಣೆ ನಿರ್ಬಂಧವನ್ನು ರದ್ದುಗೊಳಿಸಿದ್ದು ಆತುರದ ನಿರ್ಣಯವಾಗಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ದಾಖಲಾದ ಹಿನ್ನೆಲೆಯಲ್ಲಿ ಗುರುವಾರ ಮಹಾರಾಷ್ಟ್ರ ಸರ್ಕಾರ ರಾಜ್ಯದಲ್ಲಿ ಮಾಸ್‌್ಕ ಏ.2 ರಿಂದ ಕಡ್ಡಾಯವಲ್ಲ ಎಂದು ಘೋಷಿಸಿತ್ತು. ಅದೇ ರೀತಿ ದೆಹಲಿ ಸರ್ಕಾರ ಮಾಸ್ಕ್ ಧರಿಸದೇ ಇರುವವರ ಮೇಲಿನ ದಂಡವನ್ನು ತೆಗೆದುಹಾಕಿತ್ತು.
ಈ ಹಿನ್ನೆಲೆಯಲ್ಲಿ ಫೋರ್ಟೀಸ್ ಅಸ್ಪತ್ರೆಯ ಜಂಟಿ ನಿರ್ದೇಶಕರಾದ ಡಾ. ರವಿ ಶೇಖರ್ ಝಾ ‘ಮಾಸ್‌್ಕ ಧಾರಣೆ ಕಡ್ಡಾಯವೆಂಬ ನಿರ್ಬಂಧ ತೆಗೆದುಹಾಕುವುದು ಆತುರದ ನಿರ್ಧಾರವಾಗಿದೆ. ದೇಶ ಇನ್ನೂ ಸಂಪೂರ್ಣವಾಗಿ ಕೋವಿಡ್ ಮುಕ್ತವಾಗಿಲ್ಲ. ಎಲ್ಲ ನಾಗರಿಕರಿಗೂ ಇನ್ನೂ ಕೋವಿಡ್ ಲಸಿಕೆಯ ಎರಡೂ ಡೋಸುಗಳು ಲಭ್ಯವಾಗಿಲ್ಲ. ಲಸಿಕೆ ನೀಡಿದರೂ ಅದು ಕೋವಿಡ್ ತಗುಲದಂತೇ ಜನರನ್ನು ರಕ್ಷಿಸುವುದಿಲ್ಲ. ಬದಲಾಗಿ ಮಾರಣಾಂತಿಕ ಮಟ್ಟಕ್ಕೆ ತಲುಪದಂತೇ ತಡೆಯುತ್ತದೆ. ಹೀಗಾಗಿ ಕೋವಿಡ್ ಹರಡುವಿಕೆ ತಡೆಗಟ್ಟಲು ಮಾಸ್‌್ಕ ಅತ್ಯುತ್ತಮ ವಿಧಾನವಾಗಿದೆ. ಮಾಸ್‌್ಕನಿಂದಾಗಿ ಕೋವಿಡ್ ಮಾತ್ರವಲ್ಲ, ಕೋವಿಡ್‌ಗಿಂತಲೂ ಹೆಚ್ಚು ಮಾರಣಾಂತಿಕವಾದ ಹಂದಿ ಜ್ವರ, ಫä್ಲ ಹಾಗೂ ಕೊರೋನಾ ಸಂಯೋಜನೆಯ ಫä್ಲರೋನಾದಿಂದಲೂ ರಕ್ಷಣೆ ಸಿಗುತ್ತದೆ’ ಎಂದಿದ್ದಾರೆ.
ಮಾಸ್ಕ್ ಧಾರಣೆಯಿಂದಾಗಿ ಶ್ವಾಸಕೋಶ ಸಂಬಂಧಿ ಹಲವಾರು ರೋಗಗಳು ಹರಡುವುದನ್ನು ತಡೆಯಬಹುದಾಗಿದೆ. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಜನರು ಸ್ವಯಂಪ್ರೇರಣೆಯಿಂದ ಮಾಸ್ಕ್ ಧರಿಸಬೇಕು ಎಂದು ವೈರಣು ತಜ್ಞರು ಟಿ. ಜಾಕಬ್ ಜಾನ್ ಕೂಡಾ ಸಲಹೆ ನೀಡಿದ್ದಾರೆ.
ಆದರೆ ಹಿರಿಯ ವೈದ್ಯ ಡಾ. ಅಕ್ಷಯ ಬುಧ್ರಾಜಾ‘ನಾವು ಸಾಮಾನ್ಯ ನೆಗಡಿ ವೈರಸ್‌ನಂತೆ ಕೊರೋನಾ ವೈರಸ್‌ನೊಂದಿಗೂ ಬದುಕಲು ಕಲಿಯಬೇಕು. ಹೀಗಾಗಿ ಸಾಮಾನ್ಯ ಜನರಿಗೆ ಮಾಸ್‌್ಕ ಕಡ್ಡಾಯಗೊಳಿಸುವ ಅಗತ್ಯವಿಲ್ಲ. ಆದರೆ ರೋಗಿಗಳು, ಕಡಿಮೆ ರೋಗ ನಿರೋಧಕ ಶಕ್ತಿಯುಳ್ಳವರು, ಅತೀ ಜನಜಂಗುಳಿ ಪ್ರದೇಶದಲ್ಲಿ ಓಡಾಡುವವರು ಮಾಸ್‌್ಕ ಧರಿಸಿದರೆ ಸಾಕು’ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ