* ಮಳೆಗಾಲಕ್ಕೂ ಮುನ್ನ ಮಕ್ಕಳಿಗೆ ಶೀತಜ್ವರದ ಲಸಿಕೆ ನೀಡುವಂತೆ ಮಹಾರಾಷ್ಟ್ರ ಕಾರ್ಯಪಡೆ ಸಲಹೆ
* ಲಸಿಕೆಯ ಒಂದು ಡೋಸ್‌ಗೆ 1500 ರು.ನಿಂದ 2000 ರು.
* ಮಕ್ಕಳು ಜ್ವರದಿಂದ ಬಳಲುವುದನ್ನು ಲಸಿಕೆ ತಡೆಯಲಿದೆ
ಮುಂಬೈ(ಮೇ.25): ಕೊರೋನಾ 3ನೇ ಅಲೆ ಮಕ್ಕಳನ್ನು ಹೆಚ್ಚಾಗಿ ಬಾಧಿಸಲಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಮುಂಗಾರು ಋುತುವಿನ ಒಳಗಾಗಿ ಎಲ್ಲಾ ಮಕ್ಕಳಿಗೂ ಶೀತಜ್ವರಕ್ಕೆ ನೀಡುವ ಲಸಿಕೆಯನ್ನು ನೀಡಬೇಕು ಎಂದು ಮಕ್ಕಳ ವೈದ್ಯರ ಕಾರ್ಯಪಡೆ ಮಹಾರಾಷ್ಟ್ರ ಸರ್ಕಾರಕ್ಕೆ ಸಲಹೆ ನೀಡಿದೆ.
ಸ್ಫುಟ್ನಿಕ್ ಲಸಿಕೆ ಪ್ರವಾಸ, ರಷ್ಯಾಗೆ ಹೋಗಿ ವ್ಯಾಕ್ಸಿನ್ ಹಾಕಿಸಿಕೊಂಡು ಬನ್ನಿ!
undefined
ಭಾನುವಾರ ನಡೆದ ಸಭೆಯ ವೇಳೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ತಜ್ಞ ವೈದ್ಯರ ತಂಡ ಈ ಸಲಹೆ ನೀಡಿದೆ. ಮಕ್ಕಳಿಗೆ ಜ್ವರದ ಲಸಿಕೆ ಹಾಕಿಸುವುದರಿಂದ ಮಳೆಗಾಲದ ವೇಳೆ ಮಕ್ಕಳು ಜ್ವರದಿಂದ ಬಳಲುವುದನ್ನು ತಪ್ಪಿಸಬಹುದು. ಇದರಿಂದ ಅನಾವಶ್ಯಕವಾಗಿ ಕೊರೋನಾ ಟೆಸ್ಟ್ಗಾಗಿ ಆಸ್ಪತ್ರೆಗೆ ಬರುವುದು ತಪ್ಪಲಿದೆ.
ಇನ್ಫು ಟೈಪ್ ಎ ಹಾಗೂ ಬಿ ಲಸಿಕೆಗಳು ಮಾರುಕಟ್ಟೆಯಲ್ಲಿ ಹೇರಳವಾಗಿ ಲಭ್ಯವಿದೆ. ಆದರೆ, ರಾಷ್ಟ್ರೀಯ ಲಸಿಕೆ ನೀಡಿಕೆ ಯೋಜನೆಯ ಅಡಿಯಲ್ಲಿ ಶೀತಜ್ವರದ ಲಸಿಕೆಯನ್ನು ಸೇರಿಸಿಲ್ಲ. ಲಸಿಕೆಯ ಒಂದು ಡೋಸ್‌ಗೆ 1500 ರು.ನಿಂದ 2000 ರು. ವೆಚ್ಚವಾಗಲಿದೆ. ಈ ಲಸಿಕೆ ಸುರಕ್ಷಿತ ಎಂಬುದು ಸಾಬೀತಾಗಿದ್ದು, 5 ವರ್ಷದ ಒಳಗಿನ ಮಕ್ಕಳಿಗೆ ನೀಡಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ವಿಮಾನ ಬಾಡಿಗೆ ಪಡೆದು ಆಗಸದಲ್ಲಿ ಮದುವೆ; ಬೆಂಗಳೂರಲ್ಲಿ ಲ್ಯಾಂಡ್ ಆದಾಗ ಶಾಕ್!
ಭಾರತದಲ್ಲಿ ದಾಖಲಾದ ಕೊರೋನಾ ಪ್ರಕರಣಗಳ ಸಂಖ್ಯೆ:
India reports 1,96,427 new #COVID19 cases, 3,26,850 discharges & 3,511 deaths in last 24 hrs, as per Health Ministry Total cases: 2,69,48,874 Total discharges: 2,40,54,861 Death toll: 3,07,231 Active cases: 25,86,782 Total vaccination: 19,85,38,999.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona