ದಯವಿಟ್ಟು ಇದೊಂದು ಸಹಾಯ ಮಾಡಿ, ಕೇಂದ್ರಕ್ಕೆ ಮಹಾ ಮೊರೆ

By Suvarna News  |  First Published Apr 14, 2021, 10:22 PM IST

ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿಕೊಂಡ  ಮಹಾ ಸಿಎಂ/ ಕೊರೋನಾ ನಿಯಂತ್ರಣಕ್ಕೆ ವಾಯು ಸೇನೆಯ ಸಹಕಾರ ಬೇಕಿದೆ/ ವಾಯು ಸೇನೆ ವಿಮಾನ ಕಳಿಸಿಕೊಡಿ/ ಅಕ್ಸಿಜನ್ ಸಮಸ್ಯೆ ಬಗೆಹರಿಲೇಬೇಕಿದೆ


ಮುಂಬೈ (ಏ. 14) ಮಹಾರಾಷ್ಟ್ರದಲ್ಲಿ ಕೊರೋನಾ ರುದ್ರತಾಂಡವವಾಡುತ್ತಿದೆ. ಪುಣೆ ಮತ್ತು ಮುಂಬೈ ಪರಿಸ್ಥಿತಿ ಚಿಂತಾಜನಕವಾಗಿದೆ. ಅಘೋಷಿತ  ಲಾಕ್ ಡೌನ್ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಸರ್ಕಾರ ಯಾವುದೇ ರೀತಿಯ ಕ್ರಮ ತೆಗೆದುಕೊಂಡರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಇದೆಲ್ಲದರ ನಡುವೆ ಸಿಎಂ ಉದ್ಧವ್ ಠಾಕ್ರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

Latest Videos

undefined

ವೆಲ್ ಡನ್ ಮೋದಿಜಿ ಎಂದ ಕಾಂಗ್ರೆಸ್

ಕೊರೋನಾ ಪರಿಸ್ಥಿತಿ ನಿಯಂತ್ರಿಸಲು ಆಕ್ಸಿಜನ್ ಅಗತ್ಯವಿದ್ದು ಭಾರತೀಯ ವಾಯುಸೇನೆಗ ಸಹಕಾರ ಬೇಕಿದೆ.    ಸಂಕಷ್ಟದ ಸಂದರ್ಭದಲ್ಲಿ ವಾಯುಸೇನೆ ನೆರವು ಬೇಕಿದೆ ಎಂದು ಠಾಕ್ರೆ ಕೇಳಿಕೊಂಡಿದ್ದಾರೆ. 

ವಾಯುಸೇನೆಯ ವಿಮಾನಗಳ ಮೂಲಕ ಅಗತ್ಯವಿದ್ದಕಡೆ ಆಕ್ಸಿಜನ್ ಕಳಿಸಿಕೊಡಬಹುದು. ದಯವಿಟ್ಟು ಈ ಬಗ್ಗೆ ಗಮನ ನೀಡಬೇಕು ಎಂದು  ಮೋದಿ ಬಳಿ  ಕೇಳಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಮಂಗಳವಾರ 60,212 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದ್ದರೆ, ಮುಂಬೈನಲ್ಲಿ 7,898 ಹೊಸ ಪ್ರಕರಣಗಳು ಮತ್ತು 26 ಸಾವುಗಳು ದಾಖಲಾಗಿವೆ.

 

click me!