ಮೆಡಿಕಲ್ ಸ್ಟುಡೆಂಟ್ಸ್ ಡ್ಯಾನ್ಸ್‌ಗೆ ಕೋಮು ಬಣ್ಣ ಕೊಟ್ಟವರಿಗೆ ಸಿಕ್ಕ ರಿಯಾಕ್ಷನ್ ಸಖತ್ತಾಗಿದೆ!

Published : Apr 14, 2021, 07:56 PM ISTUpdated : Apr 14, 2021, 07:58 PM IST
ಮೆಡಿಕಲ್ ಸ್ಟುಡೆಂಟ್ಸ್ ಡ್ಯಾನ್ಸ್‌ಗೆ ಕೋಮು ಬಣ್ಣ  ಕೊಟ್ಟವರಿಗೆ ಸಿಕ್ಕ ರಿಯಾಕ್ಷನ್ ಸಖತ್ತಾಗಿದೆ!

ಸಾರಾಂಶ

ಮೆಡಿಕಲ್ ವಿದ್ಯಾರ್ಥಿಗಳ ನೃತ್ಯಕ್ಕೆ ಕೋಮು ಬಣ್ಣ/ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ಯುವಜನತೆ/ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್/ ನೃತ್ಯದ ವಿಡಿಯೋ ಮಾಡಿ ಸಪೋರ್ಟ್

ತಿರುವನಂತಪುರ (ಏ. 14)  ಕೇರಳದ  ಮೆಡಿಕಲ್ ವಿದ್ಯಾರ್ಥಿಗಳಿಬ್ಬರು ಡ್ಯಾನ್ಸ್ ಮಾಡಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.  ಇದಾದ ಮೇಲೆ ಕಮೆಂಟ್ ಗಳ ಮೂಲಕ ಇದು ಕೋಮು ತಿರುವನ್ನು ಪಡೆದುಕೊಂಡಿತ್ತು.

ನೃತ್ಯ ಮಾಡಿದ್ದ ಯುವಕಮನ ಹೆಸರು ನವೀನ್ ರಜಾಕ್ ಎನ್ನುವುದು ಬಗೆಬಗೆಯ ಕಮೆಂಟ್ ಗಳಿಗೆ ಕಾರಣವಾಗಿತ್ತು. ಆದರೆ ದೇಶದ ಯುವಕರು ಈ ಪ್ರಕರಣವನ್ನು ಚಾಲೆಂಜಾಗಿ ಸ್ವೀಕರಿಸಿ ಅದ್ಭುತ ಪ್ರತಿಕ್ರಿಯೆ ನೀಡಿದ್ದಾರೆ. #ResistHate ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.

ತರಗತಿಯ ಬಳಿಕ ಮೆಡಿಕಲ್ ವಿದ್ಯಾರ್ಥಿಗಳ ಸಖತ್ ಸ್ಟೆಪ್ಸ್

ವೈರಲ್ ಆದ ವಿಡಿಯೋದಲ್ಲಿದ್ದ ಯುವತಿ ತಿಶ್ಯೂರ್ ಮೆಡಿಕಲ್ ಕಾಲೇಜಿನ  ಜಾನಕಿ ಓಂಕುಮಾರ್, ನಾವು ಕಮೆಂಟ್ ಗಳಿಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

ಮಿಲಿಯನ್ ಗಟ್ಟಲೇ ಜನ ವಿಡಿಯೋ ವೀಕ್ಷಿಸಿ ಬೆಂಬಲ ನೀಡಿದ್ದಾರೆ.  ಕೆಲವರು ನೃತ್ಯ ಮಾಡಿದ್ದು ಆ ವಿಡಿಯೋ ಅಪ್ ಲೋಡ್ ಮಾಡಿ ಬೆಂಬಲ ಕೊಟ್ಟಿದ್ದಾರೆ.  ಕೆಲವು ಕಡೆ ಡ್ಯಾನ್ಸ್ ಕಾಂಪಿಟೇಶನ್ ಸಹ ಆಯೋಜನೆ ಮಾಡಲಾಗಿತ್ತು ಸೋಶಿಯಲ್ ಮೀಡಿಯಾದಲ್ಲಿ ನೃತ್ಯದ ವಿಡಿಯೋಗಳ ಸರಮಾಲೆಯೇ  ಹರಿದು ಬಂದಿದೆ. ನೀವು ಒಮ್ಮೆ ನೋಡಿಕೊಂಡು ಬನ್ನಿ ...

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !
ಇನ್ನೂ 3 ದಿನ ತಗ್ಗುವುದಿಲ್ಲ ಇಂಡಿಗೋಳು! - ನಿನ್ನೆ ಮತ್ತೆ 650 ವಿಮಾನ ರದ್ದು