'ವೆಲ್ ಡನ್ ಮೋದಿಜಿ, ಕೊನೆಗೂ ರಾಹುಲ್ ಮಾತು ಕೇಳಿದ್ರಿ'

By Suvarna NewsFirst Published Apr 14, 2021, 8:56 PM IST
Highlights

ಪ್ರಧಾನಿ ಮೋದಿಗೆ ವೆಲ್ ಡನ್ ಎಂದ ಕಾಂಗ್ರೆಸ್/ ಕೊನೆಗೂ ರಾಹುಲ್ ಗಾಂಧಿ  ಮಾತು ಕೇಳಿದಿರಿ/ ಪರೀಕ್ಷೆ ಮುಂದಕ್ಕೆ ಹಾಕಿದ್ದು ಒಳ್ಳೆಯ ನಿರ್ಧಾರ/ ಕೊರೋನಾ ಸಮಯದಲ್ಲಿ ಪರೀಕ್ಷೆ ಬೇಡ

ನವದೆಹಲಿ (ಏ. 14)  ಪ್ರಧಾನಿ ನರೇಂದ್ರ  ಮೋದಿಗೆ ಕಾಂಗ್ರೆಸ್ ಅಭಿನಂದನೆ ತಿಳಿಸಿದೆ. ಇದಕ್ಕೆ ಕಾರಣ ಇದೆ.  ಸಿಬಿಎಸ್‌ಇ ಪರೀಕ್ಷೆಗಳನ್ನು ಮುಂದೆ ಹಾಕಿದ್ದಕ್ಕೆ ವೆಲ್ ಡನ್ ಮೋದಿ ಜಿ ಎಂದಿದೆ.

ಕೊರೋನಾ ವೈರಸ್ ಅಬ್ಬರ ಇಡೀ ದೇಶವನ್ನು ಆವರಿಸಿದ ಕಾರಣ ಕಾಂಗ್ರೆಸ್ ಆದಿಯಾಗಿ ಅನೇಕರು ಪರೀಕ್ಷೆ ಮುಂದೆ ಹಾಕಬೇಕು ಎಂದು ಕೇಳಿಕೊಂಡಿದ್ದರು. 

ಕರ್ನಾಟಕದ ಉಳಿದ ಪರೀಕ್ಷೆಗಳ ಬಗ್ಗೆ ಸುರೇಶ್  ಕುಮಾರ್ ಸ್ಪಷ್ಟನೆ

ನರೆಂದ್ರ ಮೋದಿ ಅವರೇ ಉತ್ತಮ ಕೆಲಸ ಮಾಡಿದ್ದೀರಿ. ರಾಹುಲ್ ಗಾಂಧಿ ಅವರ ಮಾತು ಕೇಳಿ ಪರೀಕ್ಷೆ ನಡೆಸದಿರುವ ತೀರ್ಮಾನ ಮಾಡಿದ್ದೀರಿ ಎಂದು ಸೋಶಿಯಲ್ ಮೀಡಿಯಾ ಮುಖೇನ ಹೇಳಿದೆ. 

ಪ್ರಿಯಾಂಕಾ ವಾದ್ರಾ ಸಹ ಟ್ವೀಟ್ ಮಾಡಿ  ಸರ್ಕಾರ ಕೊನೆಗೂ ತೀರ್ಮಾನ ಮಾಡಿದೆ ಎಂಬುದನ್ನು ಉಲ್ಲೇಖ ಮಾಡಿದ್ದಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಹ ಪರೀಕ್ಷೆ ಮುಂದಕ್ಕೆ ಹಾಕಬೇಕು ಎಂದು ಕೇಳಿಕೊಂಡಿದ್ದರು. ಎರಡನೇ ಅಲೆ ದೇಶದ ಅನೇಕ ರಾಜ್ಯಗಳನ್ನು ವ್ಯಾಪಿಸುತ್ತಿದ್ದು ಎಷ್ಟು ಎಚ್ಚರಿಕೆ ತೆಗೆದುಕೊಂಡರೂ ಸಾಲದು ಎಂಬ ಸ್ಥಿತಿ ನಿರ್ಮಾಣವಾಗಿದೆ. 

Glad the government has finally cancelled the 10th standard exams however a final decision MUST be taken for the 12th grade too. Keeping students under undue pressure until June makes no sense.

It’s unfair. I urge the government to decide now.

— Priyanka Gandhi Vadra (@priyankagandhi)
click me!