ಇಂದಿನಿಂದ 45 ದಿನ ಕಾಲ ಮಹಾಕುಂಭಮೇಳ ವೈಭವ, ಪ್ರಯಾಗರಾಜ್‌ನಲ್ಲಿ ಮೊದಲ ಸ್ನಾನ ಆರಂಭ!

By Kannadaprabha News  |  First Published Jan 13, 2025, 5:46 AM IST

12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳಕ್ಕೆ ಪ್ರಯಾಗ್‌ರಾಜ್‌ನಲ್ಲಿ ಸೋಮವಾರ ಚಾಲನೆ. 40 ಕೋಟಿ ಭಕ್ತರ ಆಗಮನ ನಿರೀಕ್ಷೆಯಿದ್ದು, ಫೆ.26ರಂದು ಸಮಾರೋಪ.


ಪಿಟಿಐ ಪ್ರಯಾಗರಾಜ್‌:  12 ವರ್ಷಗಳಿಗೊಮ್ಮೆ ನಡೆಯುವ ವಿಶ್ವದ ಬೃಹತ್‌ ಧಾರ್ಮಿಕ ಸಮಾಗಮವಾದ ‘ಮಹಾ ಕುಂಭಮೇಳ’ಕ್ಕೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪುಷ್ಯ ಹುಣ್ಣಿಮೆಯ ಪವಿತ್ರ ದಿನವಾದ ಸೋಮವಾರ ಚಾಲನೆ ಸಿಗಲಿದೆ. ಪುಣ್ಯಸ್ನಾನದೊಂದಿಗೆ ಆರಂಭವಾಗಲಿರುವ ಕಾರ್ಯಕ್ರಮ ಫೆ.26ರ ಶಿವರಾತ್ರಿಯಂದು 45 ದಿನಗಳ ಬಳಿಕ ಸಂಪನ್ನಗೊಳ್ಳಲಿದೆ.

ಈ ಬಾರಿಯ ಕುಂಭಮೇಳಕ್ಕೆ ದಾಖಲೆ 35- 40 ಕೋಟಿ ಜನರ ಆಗಮನದ ನಿರೀಕ್ಷೆಯಿದ್ದು, ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸರ್ಕಾರ ಅಭೂತಪೂರ್ವ ಸಿದ್ಧತೆಗಳನ್ನು ನಡೆಸಿದೆ. ದೇಶ ವಿದೇಶಗಳಿಂದ ಆಗಮಿಸುವ ಭಕ್ತರಿಗೆ ಎಲ್ಲಾ ಮೂಲಸೌಕರ್ಯ ಒದಗಿಸುವುದರ ಜೊತೆಗೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಿದೆ.

Tap to resize

Latest Videos

ಇದನ್ನೂ ಓದಿ: ಪಾಪಿಷ್ಟರು ಮಾತ್ರ ಕುಂಭಮೇಳಕ್ಕೆ ಹೋಗ್ತಾರೆ.. ಭೀಮ್‌ ಆರ್ಮಿ ಚಂದ್ರಶೇಖರ ಆಜಾದ್ ವಿವಾದಾತ್ಮಕ ಹೇಳಿಕೆ!

ಪ್ರಯಾಗ್‌ರಾಜ್‌ ನಗರದ ನದಿ ತಟದ ಸಮೀಪದಲ್ಲೇ 10000 ಎಕರೆ ಪ್ರದೇಶದಲ್ಲಿ ಮಹಾಕುಂಭ ನಗರ ಸ್ಥಾಪಿಸಲಾಗಿದ್ದು, ಅಲ್ಲಿ ವಸತಿ, ಶೌಚಾಲಯ, ಚಿಕಿತ್ಸೆ, ಭದ್ರತೆ, ಧಾರ್ಮಿಕ ಕಾರ್ಯಕ್ರಮಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಇದನ್ನೂ ಓದಿ: ಕುಂಭಮೇಳಕ್ಕೆ ಬೆಂಬಲ, ಗಂಗಾಸಾಗರ ಕಡೆಗೆ ತಿರುಗಿಯೂ ನೋಡೋಲ್ಲ: ಪ್ರಧಾನಿ ಮೋದಿ ವಿರುದ್ಧ ಮಮತಾ ವಾಗ್ದಾಳಿ!

ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠೆಯ ಬಳಿಕದ ಮೊದಲ ಕುಂಭವಾಗಿರುವುದರಿಂದ ಇದು ಇನ್ನಷ್ಟು ಮಹತ್ವ ಪಡೆದಿದೆ.

ಪ್ರಯಾಗ್‌ನಲ್ಲಿ ವಿಶ್ವದ ಅತಿದೊಡ್ಡ ಧಾರ್ಮಿಕ ಸಮಾಗಮ:

  • 1.5 ತಿಂಗಳಲ್ಲಿ 40 ಕೋಟಿ ಜನರ ಭೇಟಿ ನಿರೀಕ್ಷೆ
  • 45 ದಿನಗಳ ಕಾಲ ನಡೆಯಲಿರುವ ಕುಂಭಮೇಳ 
  • ಮೇಳದಲ್ಲಿ 40 ಕೋಟಿ ಜನರ ಸ್ನಾನ ನಿರೀಕ್ಷೆ
  • 10 ಸಾವಿರ ಎಕರೆ ವಿಸ್ತೀರ್ಣದಲ್ಲಿ ಮಹಾಕುಂಭನಗರ ಸ್ಥಾಪನೆ,
  • 12 ವರ್ಷಕ್ಕೊಮ್ಮೆ ನಡೆಯುತ್ತೆ ಮಹಾಕುಂಭಮೇಳ
click me!