
ನವದೆಹಲಿ (ಜ.13): ದೆಹಲಿ ವಿಧಾನಸಭಾ ಚುನಾವಣೆ ಗೆದ್ದೇ ತೀರುವ ಹಠಕ್ಕೆ ಬಿದ್ದಂತೆ ತೋರುತ್ತಿರುವ ಕಾಂಗ್ರೆಸ್ ಪಕ್ಷ, ಮುಂಬರುವ ಚುನಾವಣೆ ಸಂಬಂಧ ಮತ್ತೊಂದು ಭರ್ಜರಿ ಗ್ಯಾರಂಟಿ ಯೋಜನೆ ಘೋಷಿಸಿದೆ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ನಿರುದ್ಯೋಗಿಗಳಿಗೆ ಮಾಸಿಕ 8500 ರು. ಕೌಶಲ್ಯಾಭಿವೃದ್ಧಿ ಭತ್ಯೆ ನೀಡುವುದಾಗಿ ಪಕ್ಷ ಹೇಳಿದೆ.
ಈ ಕುರಿತು ಭಾನುವಾರ ಇಲ್ಲಿ ಮಾಹಿತಿ ನೀಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಸಚಿನ್ ಪೈಲಟ್, ‘ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಯುವ ಉಡಾನ್ ಯೋಜನೆಯಡಿ ನಿರುದ್ಯೋಗಿಳಿಗೆ ಒಂದು ವರ್ಷದ ಅವಧಿಗೆ ಮಾಸಿಕ 8500 ರು.ತರಬೇತಿ ಭತ್ಯೆ ನೀಡಲಾಗುವುದು. ಆದರೆ ಇದು ಎಲ್ಲ ನಿರುದ್ಯೋಗಿಗಳಿಗೂ ಬರುವುದಿಲ್ಲ. ಬದಲಾಗಿ ಯಾವುದಾದರೂ ಕಂಪನಿ, ಫ್ಯಾಕ್ಟರಿ ಅಥವಾ ಸಂಘಟನೆಯಲ್ಲಿ ಸೇರಿಕೊಂಡು ಅಲ್ಲಿ ಕೆಲಸ ಮಾಡುತ್ತಿದ್ದರೆ, ಅವರಿಗೆ ತಮ್ಮ ಕೌಶಲ್ಯ ವೃದ್ಧಿಸಿಕೊಳ್ಳಲು ನೆರವಾಗುವಂತೆ ಕಂಪನಿ ಮೂಲಕವೇ ಒಂದು ವರ್ಷದ ಅವಧಿಗೆ ಮಾಸಿಕ 8500 ರು. ನೆರವು ಸಿಗುವಂತೆ ಮಾಡಲಾಗುವುದು’ ಎಂದು ತಿಳಿಸಿದರು.
ದಿಲ್ಲಿ ಚುನಾವಣಾ ಅಂಗಳದಲ್ಲಿ ಶೀಷಮಹಲ್ vs ರಾಜಮಹಲ್: ಬಿಜೆಪಿ-ಎಎಪಿ ವಿಡಿಯೋ ವಾರ್!
ಇದಕ್ಕೂ ಮೊದಲು ಮಹಿಳೆಯರಿಗೆ ಮಾಸಿಕ 2500 ರು. ಆರ್ಥಿಕ ನೆರವು ನೀಡುವ ಮತ್ತು ಪ್ರತಿ ಕುಟುಂಬಕ್ಕೂ 25 ಲಕ್ಷ ರು.ವರೆಗೆ ಆರೋಗ್ಯ ವಿಮೆ ನೀಡುವ ಭರವಸೆಯನ್ನು ಕಾಂಗ್ರೆಸ್ ನೀಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ