ಬೆಳ್ಳಂಬೆಳಗ್ಗೆ ನೇಪಾಳದಲ್ಲಿ 5.3 ತೀವ್ರತೆಯ ಭೀಕರ ಭೂಕಂಪ, ಭಾರತಕ್ಕೂ ತಟ್ಟಿದ ಕಂಪನ!

Published : Nov 24, 2026, 08:19 AM ISTUpdated : Nov 24, 2026, 08:26 AM IST
Magnitude 5 3 earthquake hits Nepal  today

ಸಾರಾಂಶ

Magnitude 5.3 earthquake in Nepal: ನೇಪಾಳದಲ್ಲಿ ಮಂಗಳವಾರ ಬೆಳಗ್ಗೆ 5.3 ತೀವ್ರತೆಯ ಭೂಕಂಪ ಸಂಭವಿಸಿದೆ. ಕೋಶಿ ಪ್ರಾಂತ್ಯದ ಲೆಲೆಪ್ ಇದರ ಕೇಂದ್ರಬಿಂದುವಾಗಿದ್ದು, ಭಾರತ, ಚೀನಾ ಹಾಗೂ ಭೂತಾನ್‌ನಲ್ಲೂ ಕಂಪನದ ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಯಾವುದೇ ಪ್ರಾಣಹಾನಿಯ ವರದಿಯಾಗಿಲ್ಲ.

Magnitude 5.3 earthquake in Nepal: ನೇಪಾಳದಲ್ಲಿ ಇಂದು(ನವೆಂಬರ್ 24, ಮಂಗಳವಾರ) ಬೆಳಗಿನ ಜಾವ 5.3 ತೀವ್ರತೆಯ ಭೂಕಂಪ ಸಂಭವಿಸಿದೆ. ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ(EMSC)ದ ಪ್ರಕಾರ, ನೇಪಾಳದ ಕೋಶಿ ಪ್ರಾಂತ್ಯದ ಲೆಲೆಪ್ ಪ್ರದೇಶದಲ್ಲಿ ಭೂಕಂಪನದ ಕೇಂದ್ರಬಿಂದು ಹತ್ತು ಕಿಮೀ ಆಳದಲ್ಲಿ ದಾಖಲಾಗಿದೆ.

ಭಾರತ-ಚೀನಾದಲ್ಲೂ ಕಂಪನದ ಅನುಭವ

ನೇಪಾಳದಲ್ಲಿ ಭೂಕಂಪನದಿಂದ ಭಾರತ, ಚೀನಾದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ನೇಪಾಳದಲ್ಲಿನ ಭೂಕಂಪನ ಬಗ್ಗೆ ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಕೂಡ ಖಚಿತಪಡಿಸಿದ್ದು, 5.3 ತೀವ್ರತೆ ಮತ್ತು 20 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ವರದಿ ಮಾಡಿದೆ. ಇನ್ನು ರಾಷ್ಟ್ರೀಯ ಭದ್ರತಾ ಸಂಸ್ಥೆ (NSA) ಪ್ರಕಾರ, ಭೂಕಂಪದ ಕೇಂದ್ರಬಿಂದು ಸಿಕ್ಕಿಂನ ಯುಕ್ಸೋಮ್‌ನಿಂದ ವಾಯುವ್ಯಕ್ಕೆ 61 ಕಿಲೋಮೀಟರ್ ದೂರದಲ್ಲಿದೆ. ಭಾರತ, ಭೂತಾನ್ ಮತ್ತು ಚೀನಾದವರೆಗೂ ಕಂಪನದ ಅನುಭವವಾಗಿದೆ ಎಂದು ಹೇಳಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿಯ ಪ್ರಕಾರ, ಮಂಗಳವಾರ ಬೆಳಿಗ್ಗೆ 7:02 ಕ್ಕೆ

5.3 ತೀವ್ರತೆಯ ಭೂಕಂಪ ದಾಖಲಾಗಿದೆ . ಇದರ ಅಕ್ಷಾಂಶ 27.855 ಮತ್ತು ರೇಖಾಂಶ 87.909 ಆಗಿತ್ತು. ಇದರ ಕೇಂದ್ರಬಿಂದು ನೇಪಾಳದಲ್ಲಿತ್ತು ಹೇಳಿದೆ.

ಸಿಕ್ಕಿಂನಲ್ಲಿ ನಡುಗಿದ ಭೂಮಿ:

ಸಿಕ್ಕಿಂನ ಮಂಗನ್‌ನಲ್ಲಿ ಬೆಳಿಗ್ಗೆ 5:22 ಕ್ಕೆ 2.8 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ಕೇಂದ್ರಬಿಂದು ಲಾಚುಂಗ್‌ನಿಂದ ವಾಯುವ್ಯಕ್ಕೆ 51 ಕಿಲೋಮೀಟರ್ ದೂರದಲ್ಲಿತ್ತು ಮತ್ತು ಅದರ ಆಳ 21 ಕಿಲೋಮೀಟರ್ ಆಗಿತ್ತು. ಎಂದು ವರದಿಯಾಗಿದೆ. ಅದೇ ರೀತಿ ಮಹಾರಾಷ್ಟ್ರ, ಅಸ್ಸಾಂನಲ್ಲೂ ಲಘು ಭೂಕಂಪ ಸಂಭವಿಸಿದೆ. ಬೆಳಿಗ್ಗೆ 4:10 ಕ್ಕೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ 2.5 ತೀವ್ರತೆಯ ಭೂಕಂಪ ದಾಖಲಾಗಿದೆ. ಇದರ ಕೇಂದ್ರ ಬಿಂದು ನಾಸಿಕ್‌ನಿಂದ ಪಶ್ಚಿಮಕ್ಕೆ 85 ಕಿಲೋಮೀಟರ್ ದೂರದಲ್ಲಿ, ಐದು ಕಿಲೋಮೀಟರ್ ಆಳದಲ್ಲಿತ್ತು ಎಂದು ವರದಿಯಾಗಿದೆ. ಇನ್ನು ಬೆಳಿಗ್ಗೆ 3:39 ಕ್ಕೆ, ಅಸ್ಸಾಂನ ಕರ್ಬಿ ಆಂಗ್ಲಾಂಗ್‌ನಿಂದ 2.5 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ಕೇಂದ್ರ ಬಿಂದು ನಾಗಾಲ್ಯಾಂಡ್‌ನ ಚುಮುಕೆಡಿಮಾದಿಂದ ಪಶ್ಚಿಮಕ್ಕೆ 40 ಕಿಲೋಮೀಟರ್ ದೂರದಲ್ಲಿ, 15 ಕಿಲೋಮೀಟರ್ ಆಳದಲ್ಲಿತ್ತು ಎಂದು ವರದಿ ಹೇಳಿದೆ.

ಟಿಬೆಟ್ ಮತ್ತು ಬಾಂಗ್ಲಾದೇಶದಲ್ಲೂ ಕಂಪನ

ಟಿಬೆಟ್‌ನಲ್ಲಿ ಬೆಳಗಿನ ಜಾವ 3:19 ಕ್ಕೆ 2.8 ತೀವ್ರತೆಯ ಭೂಕಂಪ ದಾಖಲಾಗಿದೆ. ಇದರ ಕೇಂದ್ರ ಬಿಂದು ಅರುಣಾಚಲ ಪ್ರದೇಶದ ಪಾಂಗಿನ್‌ನಿಂದ ಉತ್ತರಕ್ಕೆ 149 ಕಿಲೋಮೀಟರ್ ದೂರದಲ್ಲಿ, ಐದು ಕಿಲೋಮೀಟರ್ ಆಳದಲ್ಲಿತ್ತು. ಇದಕ್ಕೂ ಮೊದಲು, ಸೋಮವಾರ ಬೆಳಗಿನ ಜಾವ 2:24 ಕ್ಕೆ ಬಾಂಗ್ಲಾದೇಶದಲ್ಲಿ 2.8 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ಕೇಂದ್ರ ಬಿಂದು ತ್ರಿಪುರದ ರಾಜಧಾನಿ ಅಗರ್ತಲಾದಿಂದ ವಾಯುವ್ಯಕ್ಕೆ 41 ಕಿಲೋಮೀಟರ್ ದೂರದಲ್ಲಿತ್ತು ಮತ್ತು ಅದರ ಆಳ ಒಂಬತ್ತು ಕಿಲೋಮೀಟರ್ ಆಗಿತ್ತು ಎಂದು ವರದಿಯಾಗಿದೆ.

ನೇಪಾಳದಲ್ಲಾದ ಭೂಕಂಪಗಳು

ನೇಪಾಳವು ಈ ಹಿಂದೆ ಹಲವಾರು ವಿನಾಶಕಾರಿ ಭೂಕಂಪಗಳನ್ನು ಅನುಭವಿಸಿದೆ. ಜನವರಿ 15, 1934 ರಂದು, 8.0 ತೀವ್ರತೆಯ ಭೂಕಂಪವು ನೇಪಾಳ ಮತ್ತು ಭಾರತದ ಬಿಹಾರ ರಾಜ್ಯದಲ್ಲಿ ಭಾರಿ ವಿನಾಶವನ್ನು ಉಂಟುಮಾಡಿತು, ಸುಮಾರು 10,600 ಜನರನ್ನು ಬಲಿ ತೆಗೆದುಕೊಂಡಿತು. ಆಗಸ್ಟ್ 20, 1988 ರಂದು, 6.6 ತೀವ್ರತೆಯ ಭೂಕಂಪವು ನೇಪಾಳ ಮತ್ತು ಬಿಹಾರದಲ್ಲಿ ಸುಮಾರು 1,000 ಜನರನ್ನು ಬಲಿ ತೆಗೆದುಕೊಂಡಿತು. ಇದರ ನಂತರ ಏಪ್ರಿಲ್ 25, 2015 ರಂದು 7.8 ತೀವ್ರತೆಯ ಭೂಕಂಪ ಸಂಭವಿಸಿ, ಸುಮಾರು 9,000 ಜನರು ಸಾವನ್ನಪ್ಪಿದರು ಮತ್ತು ಲಕ್ಷಾಂತರ ಕಟ್ಟಡಗಳಿಗೆ ಹಾನಿಯಾಯಿತು. ಮೇ 12, 2015 ರಂದು 7.3 ತೀವ್ರತೆಯ ನಂತರದ ಕಂಪನವೂ ಸಂಭವಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಂತಿಯುತವಾಗಿ ಬದುಕುವುದು ಹಿರಿಯ ನಾಗರಿಕರ ಹಕ್ಕು: 85 ವರ್ಷದ ಅಪ್ಪನ ಮನೆ ಖಾಲಿ ಮಾಡುವಂತೆ ಮಗ-ಸೊಸೆಗೆ ಕೋರ್ಟ್‌ ಆದೇಶ
5 ಲಕ್ಷ ಗೆಸ್ಟ್‌, 150 ಬಗೆಯ ಖಾದ್ಯ, ಕುದುರೆ ರೇಸ್ ಗೆದ್ದವರಿಗೆ ಮಹೀಂದ್ರಾ ಥಾರ್ ಗಿಫ್ಟ್‌!: ಬಿಹಾರ ಶಾಸಕ ಅನಂತ್ ಸಿಂಗ್ ಮಗಳ ರಾಜವೈಭವದ ಮದುವೆ