ಈ ಬೋರ್‌ವೆಲ್‌ನಲ್ಲಿ ಪಂಪ್‌ ಮಾಡಿದ್ರೆ ಮದ್ಯ ಹೊರಬರುತ್ತೆ, ಮಹಿಳೆಯ ಖತರ್ನಾಕ್‌ ಐಡಿಯಾ!

Published : Nov 24, 2026, 07:43 AM IST
Uttar Pradesh Police

ಸಾರಾಂಶ

ಉತ್ತರಪ್ರದೇಶದ ಝಾನ್ಸಿಯಲ್ಲಿ ಹ್ಯಾಂಡ್‌ಪಂಪ್ ಮೂಲಕ ಭೂಗತ ಟ್ಯಾಂಕ್‌ನಿಂದ ಕಳ್ಳಭಟ್ಟಿ ಮದ್ಯ ಹೊರತೆಗೆಯುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಮತ್ತು ಅಬಕಾರಿ ಅಧಿಕಾರಿಗಳ ದಾಳಿಯಲ್ಲಿ 1,000 ಲೀಟರ್ ಅಕ್ರಮ ಮದ್ಯ ಪತ್ತೆಯಾಗಿದ್ದು, ವಿನಿತಾ ಎಂಬ ಮಹಿಳೆಯನ್ನು ಬಂಧಿಸಲಾಗಿದೆ.

ಝಾನ್ಸಿ (ನ.24): ಬೋರ್‌ವೆಲ್‌ಗೆ ಅಳವಡಿಸಿರುವ ಹ್ಯಾಂಡ್‌ಪಂಪ್‌ ಜಗ್ಗಿದರೆ ಒಳಗಿಂದ ನೀರು ಬರುವುದು ಗೊತ್ತು. ನೀರಿಲ್ಲೇ ಹೋದರೆ ಗ್ಯಾಸ್‌ ಬರುತ್ತೆ. ಆದರೆ ಉತ್ತರಪ್ರದೇಶದ ಹಳ್ಳಿಯೊಂದರಲ್ಲಿ ಹ್ಯಾಂಡ್‌ಪಂಪ್‌ ಜಗ್ಗಿದರೆ ಒಳ್ಳೆ ಕಿಕ್‌ ನೀಡುವ ಮದ್ಯ ಸಿಗುತ್ತೆ. ನಿಜ. ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡಲು ಝಾನ್ಸಿ ಜಿಲ್ಲೆಯ ಕಬುತ್ರಾ ಡೇರಾ ಎಂಬ ಹಳ್ಳಿಯಲ್ಲಿ ಮಹಿಳೆಯೊಬ್ಬರು ಭೂಗತ ಟ್ಯಾಂಕ್ ನಿರ್ಮಿಸಿ, ಅಲ್ಲಿಂದ ಕಳ್ಳಭಟ್ಟಿ ಹೊರತೆಗೆಯಲು ಹ್ಯಾಂಡ್‌ಪಂಪ್‌ ಬಳಸುತ್ತಿದ್ದ ಭಯಂಕರ ಪ್ರಕರಣವೊಂದು ಬೆಳಕಿಗೆ ಬಂದಿದೆ.

ನೆಲದ ಒಳಗೆ ಟ್ಯಾಂಕ್‌ಗಳನ್ನು ಹುಗಿದಿಟ್ಟು, ಅವುಗಳಲ್ಲಿ ಅಕ್ರಮ ದೇಶೀಯ ಮದ್ಯವನ್ನು ಸಂಗ್ರಹಿಸಿಡಲಾಗುತ್ತಿದೆ ಎಂಬ ಮಾಹಿತಿಯ ಮೇರೆ ಪೊಲೀಸರು ಅಬಕಾರಿ ಇಲಾಖೆಯ ಸಹಯೋಗದಲ್ಲಿ ದಾಳಿ ನಡೆಸಿದ್ದಾರೆ. ಆಗ ಅಲ್ಲಿನ ಜನ ಹ್ಯಾಂಡ್ ಪಂಪ್‌ಗಳ ಮೂಲಕ ನೆಲದಲ್ಲಿದ್ದ ಮದ್ಯವನ್ನು ಹೊರತೆಗೆದು ವಿತರಿಸುತ್ತಿದ್ದುದು ಬಯಲಾಗಿದೆ. ಕಾರ್ಯಾಚರಣೆ ವೇಳೆ ಅಧಿಕಾರಿಗಳು 1,000 ಲೀ. ದೇಶೀಯ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ವಿನಿತಾ ಎಂಬ ಮಹಿಳೆಯನ್ನು ಬಂಧಿಸಲಾಗಿದ್ದು, ಇಂಥ ಅಕ್ರಮ ನಡೆಯುತ್ತಿದ್ದ ಇತರ ಸ್ಥಳಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಈ ದಾಳಿಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹೊರಬಿದ್ದಿದ್ದು, ಅದರಲ್ಲಿ ಪೊಲೀಸ್ ಅಧಿಕಾರಿಗಳು ಹ್ಯಾಂಡ್‌ಪಂಪ್ ಅನ್ನು ಜಗ್ಗುತ್ತಿರುವುದು ಮತ್ತು ಅದರಿಂದ ಬರುವ ಮದ್ಯವನ್ನು ಟಬ್‌ನಲ್ಲಿ ಸಂಗ್ರಹಿಸಿ, ನಂತರ ಜೆರಿಕ್ಯಾನ್‌ಗೆ (Jerrycan) ಸುರಿಯುತ್ತಿರುವ ದೃಶ್ಯ ಸೆರೆಯಾಗಿದೆ. ನವೆಂಬರ್ 21ರಂದು ನಡೆದ ಈ ಕಾರ್ಯಾಚರಣೆಯ ಸಂದರ್ಭದಲ್ಲಿ, ನೆಲದ ಅಡಿಯಲ್ಲಿ ಕಚ್ಚಾ ಮದ್ಯವನ್ನು ಸಂಗ್ರಹಿಸಿಡಲಾಗಿದ್ದು, ಅದನ್ನು ಹೊರತೆಗೆಯಲು ಈ ರಹಸ್ಯ ಸಂಗ್ರಹಣಾ ವ್ಯವಸ್ಥೆಯ ಮೇಲ್ಭಾಗದಲ್ಲಿ ಹ್ಯಾಂಡ್‌ಪಂಪ್ ಅಳವಡಿಸಿರುವುದನ್ನು ಅಧಿಕಾರಿಗಳ ತಂಡ ಪತ್ತೆಹಚ್ಚಿದೆ.

ಯಾರಿಗೂ ಅನುಮಾನ ಬಾರದ ತಂತ್ರ

ಮೇಲ್ನೋಟಕ್ಕೆ ಸಾಮಾನ್ಯ ನೀರಿನ ಪಂಪ್‌ನಂತೆ ಕಾಣುತ್ತಿದ್ದ ಈ ಹ್ಯಾಂಡ್‌ಪಂಪ್ ಅನ್ನು, ಯಾರಿಗೂ ಯಾವುದೇ ರೀತಿಯ ಅನುಮಾನ ಬಾರದಂತೆ ಅಕ್ರಮ ಮದ್ಯವನ್ನು ಹೊರತೆಗೆಯಲು ಬಳಸಲಾಗುತ್ತಿತ್ತು. ದಾಳಿ ನಡೆಸಿದ ಪೊಲೀಸ್ ಮತ್ತು ಅಬಕಾರಿ ತಂಡವು ಸುಮಾರು 30 ಲೀಟರ್ ಅಕ್ರಮ ಕಚ್ಚಾ ಮದ್ಯವನ್ನು ವಶಪಡಿಸಿಕೊಂಡಿದೆ. ಅಲ್ಲದೆ, ಅಕ್ರಮ ಮಾರಾಟಕ್ಕೆ ಬಳಕೆಯಾಗುವುದನ್ನು ತಡೆಯಲು ಸ್ಥಳದಲ್ಲಿ ಪತ್ತೆಯಾದ ಸುಮಾರು 1,000 ಲೀಟರ್ ಕಚ್ಚಾ ಮದ್ಯವನ್ನು ಅಧಿಕಾರಿಗಳು ಸ್ಥಳದಲ್ಲೇ ನಾಶಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್, ಜಸ್ಟ್ ₹15 ನಿಂದ ಆರಂಭ
ದೆಹಲಿಯಲ್ಲಿ ಬರ್ತ್‌ಡೇಗೆ ಅಪರಿಚಿತರನ್ನು ಆಹ್ವಾನಿಸಿದ ಮಹಿಳೆ: ‘ಭಾರತದ ನಿಜವಾದ ಮುಖ ತೋರಿಸಿದ್ದಕ್ಕೆ ಧನ್ಯವಾದ’ ಎಂದ ಜನ್ರು