
ನವದೆಹಲಿ: ಜಿಯೋ ತನ್ನ ಲಕ್ಷಾಂತರ ಬಳಕೆದಾರರಿಗೆ ಹ್ಯಾಪಿ ನ್ಯೂ ಇಯರ್ ಆಫರ್ ಘೋಷಿಸಿದೆ. ಅದರ ಅಡಿಯಲ್ಲಿ ಬಳಕೆದಾರರು ಆಯ್ದ ಯೋಜನೆಗಳಲ್ಲಿ ಅನಿಯಮಿತ 4G ಮತ್ತು 5G ಡೇಟಾ ಪಡೆಯುತ್ತಾರೆ. ಕಂಪನಿಯು ಇತ್ತೀಚೆಗೆ ತನ್ನ 10 ವರ್ಷ ಪೂರ್ಣಗೊಳಿಸಿದೆ. 10ನೇ ವರ್ಷದ ವಾರ್ಷಿಕೋತ್ಸದ ನೆನಪಿಗಾಗಿ ಈ ಆಫರ್ ಘೋಷಣೆ ಮಾಡಿದೆ.
ರಿಲಯನ್ಸ್ ಜಿಯೋ ತನ್ನ ರೂ. 399 ಮತ್ತು ರೂ. 3999 ರ ಮೂಲ ಯೋಜನೆಗಳೊಂದಿಗೆ ಅನಿಯಮಿತ 4G/5G ಡೇಟಾ ನೀಡುತ್ತಿದೆ. ಜೊತೆಗೆ ರೂ. 15, ರೂ. 25 ಮತ್ತು ರೂ. 50 ರ ಆಡ್-ಆನ್ ಯೋಜನೆ ನೀಡುತ್ತಿದೆ. ಜಿಯೋ ಬಳಕೆದಾರರು ಈ 5 ರೀಚಾರ್ಜ್ ಯೋಜನೆಗಳೊಂದಿಗೆ ಅನಿಯಮಿತ 5G ಮತ್ತು ಅನಿಯಮಿತ 4G ಡೇಟಾ ಆನಂದಿಸಲು ಅನುಕೂಲ ಆಗಲಿದೆ. ಇನ್ನು ಕಂಪನಿ ಯಾವುದೇ ದೈನಂದಿನ ಡೇಟಾ ಬಳಕೆಯ ಮಿತಿ ನಿಗದಿಪಡಿಸಿಲ್ಲ.
28 ದಿನಗಳ ವ್ಯಾಲಿಡಿಟಿ ರೀಚಾರ್ಜ್ ಯೋಜನೆ ಇದು. ದೇಶದಾದ್ಯಂತ ಅನಿಯಮಿತ ಧ್ವನಿ ಕರೆ, ಉಚಿತ ರಾಷ್ಟ್ರೀಯ ರೋಮಿಂಗ್ ಮತ್ತು ಪ್ರತಿದಿನ 100 ಉಚಿತ SMS ನೀಡುತ್ತದೆ. ಹ್ಯಾಪಿ ನ್ಯೂ ಆಫರ್ ಪ್ಲಾನ್‌ನಲ್ಲಿ ಬಳಕೆದಾರರು ಅನಿಯಮಿತ 4G ಮತ್ತು 5G ಡೇಟಾದ ಪ್ರಯೋಜನ ಪಡೆಯುತ್ತಾರೆ. ಕಂಪನಿಯು ಡೇಟಾ ಬಳಕೆಯ ಮೇಲಿನ ದೈನಂದಿನ ಮಿತಿ ತೆಗೆದು ಹಾಕಿದೆ. ಜಿಯೋ ಹಾಟ್‌ಸ್ಟಾರ್ ಮೊಬೈಲ್, ಫ್ಯಾನ್‌ಕೋಡ್ OTT ಸೇರಿದಂತೆ ಇತರೆ ಚಂದಾದಾರಿಕೆ ನೀಡಲಿದೆ. ಇದರೊಂದಿಗೆ ಜಿಯೋಎಐ ಕ್ಲೌಡ್‌ನ 50GB ಸ್ಟೋರೇಜ್ ಸಹ ನೀಡುತ್ತದೆ.
365 ದಿನಗಳ ಮಾನ್ಯತೆಯೊಂದಿಗೆ ಜಿಯೋದ ವಾರ್ಷಿಕ ರೀಚಾರ್ಜ್ ಯೋಜನೆ ಇದಾಗಿದೆ. ಅದರ ಪ್ರಕಾರ ಕಂಪನಿಯು ಭಾರತದಾದ್ಯಂತ ಅನಿಯಮಿತ ಧ್ವನಿ ಕರೆ, ಉಚಿತ ರಾಷ್ಟ್ರೀಯ ರೋಮಿಂಗ್ ಮತ್ತು ಪ್ರತಿದಿನ 100 ಉಚಿತ SMS ನೀಡುತ್ತದೆ. ಹ್ಯಾಪಿ ನ್ಯೂ ಆಫರ್ ಅಡಿಯಲ್ಲಿ ಬಳಕೆದಾರರು ಈಗ ಅನಿಯಮಿತ 4G ಮತ್ತು 5G ಡೇಟಾ ಪ್ರಯೋಜನ ಪಡೆಯುತ್ತಾರೆ. ಕಂಪನಿಯು ದೈನಂದಿನ ಡೇಟಾ ಬಳಕೆಯ ಮಿತಿ ತೆಗೆದುಹಾಕಿದೆ. ಈ ಯೋಜನೆಯು ಜಿಯೋಹಾಟ್‌ಸ್ಟಾರ್ ಮೊಬೈಲ್, ಫ್ಯಾನ್‌ಕೋಡ್ OTT ಮತ್ತು ಇತರೆ ಚಂದಾದಾರಿಕೆ ನೀಡಲಿದೆ. 50GB JioAI ಕ್ಲೌಡ್ ಸ್ಟೋರೇಜ್ ನೀಡುತ್ತದೆ.
ಅಷ್ಟೇ ಅಲ್ಲದೇ.. ಕಂಪನಿಯು ತನ್ನ ₹15, ₹25 ಮತ್ತು ₹50 ಪ್ಲಾನ್‌ಗಳೊಂದಿಗೆ ಅನಿಯಮಿತ ಡೇಟಾ ನೀಡುತ್ತಿದೆ. ₹15 ಯೋಜನೆಯು 1 ದಿನದ ಮಾನ್ಯತೆಯೊಂದಿಗೆ ಬರುತ್ತದೆ. ₹25 ಯೋಜನೆಯು 2 ದಿನಗಳ ಮಾನ್ಯತೆ ನೀಡುತ್ತದೆ. ₹50 ಯೋಜನೆಯು 28 ದಿನಗಳ ಮಾನ್ಯತೆ ಸಹ ನೀಡುತ್ತದೆ. ಕಂಪನಿಯು ಮಧ್ಯರಾತ್ರಿ 12 ರಿಂದ ಬೆಳಿಗ್ಗೆ 5 ರವರೆಗೆ ಅನಿಯಮಿತ ಡೇಟಾ ನೀಡಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ