ಮದರಸಾ ಶಿಕ್ಷಣವೇ ಇರಕೂಡದು: ಅಸ್ಸಾಂ ಸಿಎಂ ಶರ್ಮಾ ಪ್ರತಿಪಾದನೆ!

By Suvarna News  |  First Published May 23, 2022, 6:08 AM IST

* ‘ಮದರಸಾ ಶಿಕ್ಷಣವೇ ಇರಬಾರದು. ಮದರಸಾ ಪದವು ಅಳಿಸಿ ಹೋಗಬೇಕು
* ಮದರಸಾ ಶಿಕ್ಷಣ ಇರುವವರೆಗೂ ವೈದ್ಯರು ಹಾಗೂ ಎಂಜಿನಿರುಗಳು ಸೃಷ್ಟಿಆಗುವುದಿಲ್ಲ
* ಅಸ್ಸಾಂ ಸಿಎಂ ಶರ್ಮಾ ಪ್ರತಿಪಾದನೆ!


ನವದೆಹಲಿ(ಮೇ.23): ‘ಮದರಸಾ ಶಿಕ್ಷಣವೇ ಇರಬಾರದು. ಮದರಸಾ ಪದವು ಅಳಿಸಿ ಹೋಗಬೇಕು. ಮದರಸಾ ಶಿಕ್ಷಣ ಇರುವವರೆಗೂ ವೈದ್ಯರು ಹಾಗೂ ಎಂಜಿನಿರುಗಳು ಸೃಷ್ಟಿಆಗುವುದಿಲ್ಲ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ. ಭಾನುವಾರ ಆರೆಸ್ಸೆಸ್‌ ಜತೆ ನಂಟು ಹೊಂದಿರುವ ‘ಪಾಂಚಜನ್ಯ’ ಹಾಗೂ ‘ಆರ್ಗನೈಸರ್‌’ ನಿಯತಕಾಲಿಕೆಗಳು ಹಮ್ಮಿಕೊಂಡಿದ್ದ ಮಾಧ್ಯಮ ಕಮ್ಮಟದಲ್ಲಿ ಮಾತನಾಡಿದ ಅವರು, ‘ಶಾಲೆಗಳು ಆಧುನಿಕ ಶಿಕ್ಷಣ ನೀಡಬೇಕು. ಇದರಿಂದಾಗಿ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲಿದೆ ಹಾಗೂ ವೃತ್ತಿಯಲ್ಲಿ ಆಯ್ಕೆಗಳು ಸಿಗಲಿವೆ. ಧಾರ್ಮಿಕ ಶಿಕ್ಷಣವನ್ನು ಮನೆಯಲ್ಲಿ ಮಾತ್ರ ನೀಡಬೇಕು’ ಎಂದು ಪ್ರತಿಪಾದಿಸಿದರು.

Uniform Civil Code ಗಂಡ 3 ಪತ್ನಿಯರೊಂದಿಗಿರಲು ಯಾವ ಮುಸ್ಲಿಂ ಮಹಿಳೆ ಒಪ್ಪಲ್ಲ, UCC ಕುರಿತು ಸಿಎಂ ಶರ್ಮಾ ಖಡಕ್ ಮಾತು!

Tap to resize

Latest Videos

ಮದರಸಾ ನಿರ್ಮಾಣಕ್ಕೆ ಹಿಂದೂ ವ್ಯಕ್ತಿಯಿಂದ ಜಾಗ ದಾನ

ಮುಸ್ಲೀಂ ಸಮುದಾಯದ ಮದರಸಾ ನಿರ್ಮಾಣಕ್ಕೆ ಕೋಣನಕೊಪ್ಪ ಗ್ರಾಮದ ಮಾರುತಿ ಪುರ್ಲಿ ಎಂಬುವವರು ಜಾಗೆ ದಾನ ಮಾಡಿರುವುದಕ್ಕೆ ಮುಸ್ಲೀಂ ಬಾಂಧವರು ಗೌರವಿಸಿ ಭಾವೈಕ್ಯತೆಯ ಸಂಕೇತ ಇದು ಎಂದು ಶ್ಲಾಘಿಘಿಸಿದ್ದಾರೆ.

ತಾಲೂಕಿನ ಚಿಕ್ಕಾಂಶಿ ಹೊಸೂರು ಗ್ರಾಮದಲ್ಲಿ ಮದರಸಾ ನಿರ್ಮಾಣಕ್ಕಾಗಿ ಮುಸ್ಲಿಂ ಸಮುದಾಯದವರು ಜಾಗೆ ಹುಡುಕಾಟದಲ್ಲಿದ್ದರು. ಕೋಣನಕೊಪ್ಪ ಗ್ರಾಮದ ಯುವ ಮುಖಂಡ ಮಾರುತಿ ಪುರ್ಲಿ ಮದರಸಾ ನಿರ್ಮಾಣಕ್ಕೆ ಅಗತ್ಯವಿರುವ ಜಾಗೆಯನ್ನು ದಾನವಾಗಿ ನೀಡಿದ್ದಕ್ಕೆ ಮುಸ್ಲೀಂ ಸಮುದಾಯದವರು ಸನ್ಮಾನಿಸಿ ಗೌರವಿಸಿದ್ದಾರೆ.

ಸನ್ಮಾನ ಸ್ವೀಕರಿಸಿದ ಸಂದರ್ಭದಲ್ಲಿ ಮಾತನಾಡಿದ ಮಾರುತಿ ಪುರ್ಲಿ, ಮುಸ್ಲಿಂ ಸಮುದಾಯಕ್ಕೆ ಮದರಸಾ ನಿರ್ಮಾಣಕ್ಕೆ ಜಾಗೆಯನ್ನು ದಾನ ಮಾಡುವ ಮೂಲಕ ಆತ್ಮ ತೃಪ್ತಿ ಹೊಂದಿದ್ದೇನೆ. ರಂಜಾನ ಸಂದರ್ಭದಲ್ಲಿ ಮುಸ್ಲಿಂ ಬಾಂಧವರ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸಿ ಜಾಗೆ ನೀಡಬೇಕೆಂಬುದು ನನ್ನ ಸ್ವಯಂ ಇಚ್ಛೆಯಾಗಿದೆ. ಇದರಲ್ಲಿ ಯಾವುದೇ ಫಲಾಪೇಕ್ಷೆಯ ವಿಚಾರವಿಲ್ಲ. ಯಾವುದೇ ಸಮಾಜವಾಗಲಿ ಧಾರ್ಮಿಕ ಕಾರ್ಯಗಳಿಗೆ ಸಾರ್ವಜನಿಕರು ಮುಕ್ತವಾಗಿ ಕೊಡುಗೆ ನೀಡಿದಾಗಲೇ ಸಾಮಾಜಿಕ ಅಭಿವೃದ್ಧಿ ಸಾಧ್ಯ ಎಂಬುದು ನನ್ನ ಅಭಿಪ್ರಾಯ. ಧರ್ಮಗಳ ವಿಷಯದಲ್ಲಿ ಅನಗತ್ಯ ರಾಜಕೀಯ ವಿಷಯಗಳು ಸುಳಿಯದಂತೆ ನಾವೆಲ್ಲ ಒಟ್ಟಾಗಿ ಬದುಕಲು ಮುಂದಾಗಬೇಕು ಎಂದರು.

ನನ್ನ ಜೀವಿತಾವಧಿಯ ಕೊನೆಯ ವರ್ಷಗಳು ಆರೋಗ್ಯ ಕ್ಷೇತ್ರದ ಸೇವೆಗೆ ಮೀಸಲು: ರತನ್ ಟಾಟಾ

ಮುಸ್ಲಿಂ ಸಮಾಜದ ಅಧ್ಯಕ್ಷ ಹುಸೇನಮಿಯಾ ಬಿಳಗಲಿ ಮಾತನಾಡಿ, ಪವಿತ್ರ ರಂಜಾನ ಸಂದರ್ಭದಲ್ಲಿ ಮಾರುತಿ ಪುರ್ಲಿ ಅವರು ಮದರಸಾ ನಿರ್ಮಾಣಕ್ಕೆ ಜಾಗೆ ನೀಡಿರುವುದು ಪವಿತ್ರ ಕಾರ್ಯವಾಗಿದೆ. ಧರ್ಮ ಕಾರ್ಯಕ್ಕೆ ಒಬ್ಬ ಹಿಂದೂ ಯುವ ಮುಖಂಡ ನಿರ್ಮಲ ಮನಸ್ಸಿನಿಂದ ದಾನ ನೀಡಿರುವುದು ಎಲ್ಲ ಸಮಾಜಗಳಿಗೂ ಮಾದರಿಯಾಗಿದೆ. ಇಂತಹ ಕಾರ್ಯಗಳ ಮೂಲಕ ಧರ್ಮ ಬೇಧವಿಲ್ಲದೆ ಒಟ್ಟಾಗಿ ಮುನ್ನಡೆಯೋಣ ಎಂದರು.

click me!