ಗೋಧಿ ನಂಗೆ ಅಲರ್ಜಿ, ಸ್ಪೆಷಲ್ ಡಯಟ್ ಫುಡ್ ಕೊಡಿ: ಜೈಲಲ್ಲಿ ಸಿಧು ಬೇಡಿಕೆ

Published : May 23, 2022, 12:22 PM ISTUpdated : May 23, 2022, 12:44 PM IST
ಗೋಧಿ ನಂಗೆ ಅಲರ್ಜಿ, ಸ್ಪೆಷಲ್ ಡಯಟ್ ಫುಡ್ ಕೊಡಿ: ಜೈಲಲ್ಲಿ ಸಿಧು ಬೇಡಿಕೆ

ಸಾರಾಂಶ

ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಪಟಿಯಾಲ ಜೈಲಿನಲ್ಲಿ ಬಂಧಿಯಾಗಿದ್ದಾರೆ. 33 ವರ್ಷಗಳಷ್ಟು ಹಳೆಯದಾದ ರೋಡ್ ಹೊಡೆದಾಟ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಶಿಕ್ಷೆಯನ್ನು ಅವರು ಅನುಭವಿಸುತ್ತಿದ್ದಾರೆ. ಈ ನಡುವೆ ಜೈಲಿನಲ್ಲಿ ಸೊಪ್ಪು, ರೊಟ್ಟಿ ತಿನ್ನಲು ಸಿದ್ದು ನಿರಾಕರಿಸಿದ್ದಾರೆ ಎಂಬ ಸುದ್ದಿ ಬಂದಿದೆ. ಅವರನ್ನು ಪಟಿಯಾಲಾದ ರಾಜೇಂದ್ರ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಅವರ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ.  

ಪಟಿಯಾಲ (ಮೇ.23): ಪಂಜಾಬ್ ಕಾಂಗ್ರೆಸ್ ನ (Punjab Congress) ಮಾಜಿ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ (Former Cricketer) ನವಜೋತ್ ಸಿಂಗ್ ಸಿಧು (Navjot Singh Sidhu) 33 ವರ್ಷಗಳಷ್ಟು ಹಳೆಯ ಕೇಸ್ ನಲ್ಲಿ ದೋಷಿಯಾಗಿ ಸಾಬೀತಾಗಿದ್ದು, ಸುಪ್ರೀಂ ಕೋರ್ಟ್ (Supreme Court ) 1 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಇದರ ಬೆನ್ನಲ್ಲಿಯೇ ಅವರು ಪಟಿಯಾಲ ನ್ಯಾಯಲಯಕ್ಕೆ (Patiala Court) ಶರಣಾಗಿದ್ದರು. ವಿಚಾರಣೆ ಮುಗಿದ ಬೆನ್ನಲ್ಲಿಯೇ ಅವರನ್ನು ಪಟಿಯಾಲ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.
ಹಾಜರಾಗಿದ್ದರು.

ಆದರೆ, ಹೊಸ ಸುದ್ದಿಯ ಪ್ರಕಾರ ನವಜೋತ್ ಸಿಂಗ್ ಸಿಧು ಜೈಲಿನಲ್ಲಿ ಸ್ಪೆಷಲ್ ಡಯಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ತಮಗೆ ಗೋಧಿಯ ಆಹಾರದ ಅಲರ್ಜಿ ಇದೆ. ಆ ಕಾರಣಕ್ಕಾಗಿ ಸ್ಪೆಷಲ್ ಡಯಟ್ ನೀಡಬೇಕು ಎಂದಿದ್ದು, ಜೈಲಿನಲ್ಲಿ ನೀಡಲಾಗುತ್ತಿರುವ ರೊಟ್ಟಿ ಹಾಗೂ ಸೊಪ್ಪಿನ ಪಲ್ಯ/ಸಾಂಬಾರು ತಿನ್ನಲು ನಿರಾಕರಿಸಿದ್ದಾರೆ. ಈ ನಡುವೆ ಸಿಧು ಅವರನ್ನು ಪಟಿಯಾಲಾದ ರಾಜೇಂದ್ರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ.  ವಾಸ್ತವವಾಗಿ, ಜೈಲು ಆಡಳಿತದಿಂದಲೇ ಈ ವೈದ್ಯಕೀಯ ಮಂಡಳಿಯನ್ನು ರಚಿಸಲಾಗಿದೆ.

ಈ ಮಂಡಳಿಯು ಸಿಧು ಅವರ ವೈದ್ಯಕೀಯ ತಪಾಸಣೆ ನಡೆಸಿ ಡಯಟ್ ಪ್ಲಾನ್ ಸಿದ್ಧಪಡಿಸಲಿದೆ. ವಾಸ್ತವವಾಗಿ, ಸಿಧು ಅವರು ತಮಗೆ ಗೋಧಿ ಅಲರ್ಜಿ ಎಂದು ಹೇಳಿಕೊಂಡಿದ್ದಾರೆ, ಆದ್ದರಿಂದ ಅವರು ಜೈಲಿನ ಆಹಾರವನ್ನು ತಿನ್ನಲು ನಿರಾಕರಿಸಿದ್ದಾರೆ. ಅವರು ಜೈಲಿನ ದಾಲ್ ರೊಟ್ಟಿ ತಿನ್ನುತ್ತಿಲ್ಲ. ಕೇವಲ ಸಲಾಡ್ ತಿಂದು ದಿನ ದೂಡುತ್ತಿದ್ದಾರೆ.

ಸ್ಪೆಷಲ್ ಡಯಟ್ ನೀಡಿ: ಸಿಧುಗೆ ಗೋಧಿ ಅಲರ್ಜಿ. ಅವರಿಗೆ ಲಿವರ್ ಸಮಸ್ಯೆಯೂ ಇದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಧು ವಿಶೇಷ ಆಹಾರ ಕ್ರಮಕ್ಕೆ ಜೈಲು ಆಡಳಿತಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಿಧು ಅವರ ಮಾಧ್ಯಮ ಸಲಹೆಗಾರ ಸುರೀಂದರ್ ದಲ್ಲಾ ಅವರು ಸಿಧು ಅವರಿಗೆ ಗೋಧಿ ಅಲರ್ಜಿ ಎಂದು ಹೇಳಿದ್ದಾರೆ. ಅವರು ಗೋಧಿಯಿಂದ ಮಾಡಿದ ರೊಟ್ಟಿಯನ್ನು ತಿನ್ನಲು ಸಾಧ್ಯವಿಲ್ಲ. ಬಹಳ ದಿನಗಳಿಂದ ರೊಟ್ಟಿ ತಿನ್ನುತ್ತಿಲ್ಲ ಹಾಗಾಗಿ ಸ್ಪೆಷಲ್ ಡಯಟ್ ಮಾಡುವಂತೆ ಕೋರಿದ್ದಾರೆ. ಮೆಡಿಕಲ್ ವೇಳೆಯೂ ಈ ಬಗ್ಗೆ ಮಾಹಿತಿ ನೀಡಿದ್ದರು. ವೈದ್ಯಕೀಯ ತಪಾಸಣೆ ನಡೆಸಿ ಸಂಜೆ 4 ಗಂಟೆಯೊಳಗೆ ವರದಿ ನೀಡುವಂತೆ ನ್ಯಾಯಾಲಯ ಸೂಚಿಸಿದೆ.

ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧುಗೆ 1988 ರ ರಸ್ತೆ ಹೊಡೆದಾತ ಪ್ರಕರಣದಲ್ಲಿ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ವಾಸ್ತವವಾಗಿ, ಸಿಧು ತನ್ನ ಸ್ನೇಹಿತನೊಂದಿಗೆ ಒಬ್ಬ ವ್ಯಕ್ತಿಯನ್ನು ಥಳಿಸಿದ್ದರು. ಇದಾದ ಬಳಿಕ ಚಿಕಿತ್ಸೆ ವೇಳೆ ಆ ವ್ಯಕ್ತಿ ಮೃತಪಟ್ಟಿದ್ದ. ಆತ, ಹೃದಯಾಘಾತದಿಂದ  ಮೃತಪಟ್ಟಿರುವುದು ವರದಿಯಲ್ಲಿ ಬಹಿರಂಗವಾಗಿತ್ತು.

ಶರಣಾದ ಸಿಧು ಪಟಿಯಾಲ ಸೆಂಟ್ರಲ್ ಜೈಲಿಗೆ, ಒಂದೇ ಜೈಲಿನಲ್ಲಿ ಇಬ್ಬರು ಬದ್ಧ ವೈರಿಗಳು!

ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಸಿಧು ಅವರನ್ನು ಖುಲಾಸೆಗೊಳಿಸಿತ್ತು. ಆದರೆ ಹೈಕೋರ್ಟ್ ಸಿದ್ದುಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದಾದ ಬಳಿಕ ಈ ತೀರ್ಪನ್ನು ಸಿಧು ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. 15 ಮೇ 2018 ರಂದು, ಸುಪ್ರೀಂ ಕೋರ್ಟ್ ಹೈಕೋರ್ಟ್‌ನ ತೀರ್ಪನ್ನು ರದ್ದುಗೊಳಿಸಿದ್ದಲ್ಲದೆ,  ಈ ಪ್ರಕರಣದಲ್ಲಿ ನವಜೋತ್ ಸಿಧುಗೆ ಸುಪ್ರೀಂ ಕೋರ್ಟ್ 1000 ರೂಪಾಯಿ ದಂಡ ವಿಧಿಸಿತ್ತು. ಆದರೆ ಮೇ 2018 ರಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪಿನ ಮರುಪರಿಶೀಲನಾ ಅರ್ಜಿಯನ್ನು ಸಂತ್ರಸ್ತರು ಸಲ್ಲಿಸಿದ್ದರು ಅದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

1988ರ ಹಲ್ಲೆ ಮಾಡಿ ಹತ್ಯೆ ಪ್ರಕರಣ : ನವಜೋತ್ ಸಿಂಗ್ ಸಿಧುಗೆ 1 ವರ್ಷ ಜೈಲು

ಏನಿದು ಪ್ರಕರಣ?: 988ರ ಡಿ.27ರಂದು ಪಂಜಾಬ್‌ನ ಪಟಿಯಾಲಾದಲ್ಲಿ ಸ್ನೇಹಿತನ ಜತೆ ಸಿಧು ಜಿಪ್ಸಿ ವಾಹನದಲ್ಲಿ ತೆರಳುತ್ತಿದ್ದರು. ಆಗ ಪಟಿಯಾಲಾದ 65 ವರ್ಷದ ವೃದ್ಧ ಗುರ್ನಾಮ್‌ ಸಿಂಗ್‌ ಎಂಬಾತ ಸಿಧುಗೆ ‘ನನ್ನ ವಾಹನಕ್ಕೆ ದಾರಿ ಬಿಡಿ’ ಎಂದು ಕೇಳಿದ. ಅಷ್ಟಕ್ಕೇ ಸಿಟ್ಟಾದ ಸಿಧು ತನ್ನ ಸ್ನೇಹಿತನ ಜೊತೆ ಸೇರಿ ವೃದ್ಧ ಗುರ್ನಾಮ್‌ಗೆ ಹಿಗ್ಗಾಮುಗ್ಗಾ ಹೊಡೆದು ಓಡಿಹೋದರು. ಚಿಕಿತ್ಸೆ ಫಲಕಾರಿಯಾಗದೆ ಗುರ್ನಾಮ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ