ನಿಷೇಧಾಜ್ಞೆ ಉಲ್ಲಂಘನೆ, BJP ನಾಯಕನ ಕೆನ್ನೆಗೆ ಬಾರಿಸಿದ ಮಹಿಳಾ ಡಿಸಿ!

By Suvarna NewsFirst Published Jan 20, 2020, 4:03 PM IST
Highlights

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ತಿರಂಗಾ ಯಾತ್ರೆ| ನಿಷೇಧಾಜ್ಞೆ ಜಾರಿಯಲ್ಲಿದ್ದರೂ ರ‍್ಯಾಲಿ ನಡೆಸಿದ ಬಿಜೆಪಿ ನಾಯಕ| ನಿಯಮ ಉಲ್ಲಂಘಿಸಿದ ಬಿಜೆಪಿ ನಾಯಕನಿಗೆ ಕಪಾಳ ಮೋಕ್ಷ 

ಭೋಪಾಲ್[ಜ.20]: ಮಧ್ಯಪ್ರದೇಶದ ರಾಜಘಡ ಜಿಲ್ಲೆಯಲ್ಲಿ ಭಾನುವಾರ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ತಿರಂಗಾ ಯಾತ್ರೆ ಆರಂಭಿಸಿದ್ದ ಬಿಜೆಪಿ ಕಾರ್ಯಕರ್ತರ ಹಾಗೂ ಆಡಳಿತಾಧಿಕಾರಿಗಳ ನಡುವೆ ವಾಗ್ದಾದ ನಡೆದಿದೆ. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ರ‍್ಯಾಲಿ ನಡೆಸಿದ ಬಿಜೆಪಿ ನಾಯಕನಿಗೆ ಇಲ್ಲಿನ ಜಿಲ್ಲಾಧಿಕಾರಿ ಕಪಾಳ ಮೋಕ್ಷ ಮಾಡಿದ್ದಾರೆ.

'ಅಖಂಡ ಭಾರತ ಎರಡಾಗಲು ಜವಾಹರಲಾಲ್ ನೆಹರು ಮನೆತನವೇ ಕಾರಣ'

ಹೌದು ರಾಜಘಡದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಹೀಗಿದ್ದರೂ ಇಲ್ಲಿನ ಬಿಜೆಪಿ ಕಾರ್ಯಕರ್ತರು ಪೌರತ್ವ ಕಾಯ್ದೆ ಬೆಂಬಲಿಸಿ ರ‍್ಯಾಲಿ ಆಯೋಜಿಸಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ನಿಧಿ ನಿವೇದಿತಾ ಅವರನ್ನು ತಡೆಯುವ ಯತ್ನ ನಡೆಸಿದ್ದಾರೆ ಹಾಗೂ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ರ‍್ಯಾಲಿ ನಡೆಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಕಾರ್ಯಕರ್ತರು ಮಾತ್ರ ಜಿಲ್ಲಾಧಿಕಾರಿ ಮಾತಿಗೆ ಕಿವಿಗೊಡದೆ ರ‍್ಯಾಲಿ ಆರಂಭಿಸಿದ್ದಾರೆ. ಹೀಗಿರುವಾಗ ಡಿಸಿ ನಿವೇದಿತಾ ಹಾಗೂ ಕಾರ್ಯಕರ್ತರ ನಡುವೆ ತೀವ್ರ ವಾಗ್ದಾದವೇರ್ಪಟ್ಟಿದೆ. ಅಂತಿಮವಾಗಿ ಜಿಲ್ಲಾಧಿಕಾರಿ ಕಾರ್ಯಕರ್ತನೊಬ್ಬನ ಕಪಾಳಕ್ಕೆ ಬಾರಿಸಿದ್ದಾರೆ.

ಆರಂಭದಲ್ಲಿ ಉದ್ರಿಕ್ತ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಯತ್ನಿಸಿದ್ದರು. ಈ ವೇಳೆ ಜಿಲ್ಲಾಧಿಕಾರಿಯೂ ಅಲ್ಲಿಗಾಗಮಿಸಿ ಅರ್ಥೈಸಲು ಯತ್ನಿಸಿದ್ದಾರೆ. ಆದರೆ ಅದೆಷ್ಟೇ ಮನವಿ ಮಾಡಿಕೊಂಡರು ಕಾರ್ಯಕರ್ತರು ಒಪ್ಪದಿದ್ದಾಗ ಸಿಟ್ಟುಗೊಂಡ ಡಿಸಿ ನಿವೇದಿತಾ ಕಾರ್ಯಕರ್ತನ ಕೆನ್ನೆಗೆ ಬಾರಿಸಿದ್ದಾರೆ.

ಮಾಜಿ IAS ಗೋಪಿನಾಥನ್ ವಶಕ್ಕೆ ಪಡೆದ ಪೊಲೀಸರು

Madhya Pradesh: A protestor pulls hair of Rajgarh Deputy Collector Priya Verma, after she hits BJP workers and drags them. The clash broke out during a demonstration in support of . pic.twitter.com/7ckpZaFBkJ

— ANI (@ANI)

ಇನ್ನು ಇದೇ ಸಂದರ್ಭದಲ್ಲಿ SDM ಪ್ರಿಯಾ ವರ್ಮಾ ಕೂಡಾ ಜಮಾಯಿಸಿದ್ದ ಕಾರ್ಯಕರ್ತರನ್ನು ನಿಯಂತ್ರಿಸಲು ಯತ್ನಿಸಿದ್ದಾರೆ. ಆದರೆ ಅವರನ್ನು ಸುತ್ತುವರೆದ ಕಾರ್ಯಕರ್ತರು ಕೂದಲು ಎಳೆದಾಡಿದ್ದಾರೆ.  ಹೀಗಿರುವಾಗ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಇದರಲ್ಲಿ ಇಬ್ಬರು ಗಾಯಗೊಂಡಿದ್ದಾರೆ. 

click me!