
ಅಲಹಾಬಾದ್[ಜ.20]: ಕೇರಳದ ಮಾಜಿ IAS ಅಧಿಕಾರಿ ಕನ್ನನ್ ಗೋಪಿನಾಥನ್‌ರನ್ನು ಪ್ರಯಾಗ್‌ರಾಜ್ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ. ಈ ಕುರಿತಾಗಿ ಪೊಲೀಸರು ಭಾನುವಾರ ಮಾಹಿತಿ ನೀಡಿದ್ದಾರೆ.
ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ನನಗೆ ಬೇಕು: ರಾಜೀನಾಮೆ ನೀಡಿದ ಮತ್ತೊಬ್ಬ IAS ಅಧಿಕಾರಿ!
ಶನಿವಾರದಂದು ಮಾಜಿ IAS ಅಧಿಕಾರಿ ಕನ್ನನ್ ಗೋಪಿನಾಥನ್, ಅಖಿಲ ಭಾರತೀಯ ಜನವಾದಿ ವೇದಿಕೆ ಆಯೋಜಿಸಿದ್ದ 'ನಾಗರಿಕತೆ ರಕ್ಷಿಸಿ, ಸಂವಿಧಾನ ಉಳಿಸಿ, ಗಣರಾಜ್ಯ ಕಾಪಾಡಿ' ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಲು ಪ್ರಯಾಗ್‌ರಾಜ್ ಗೆ ಆಗಮಿಸುತ್ತಿದ್ದರು. ಆದರೆ ವಿಮಾನ ನಿಲ್ದಾಣ ತಲುಪಿದ್ದ ಅವರನ್ನು ಪೊಲೀಸರು ತಡೆದಿದ್ದರು. ಈ ಕುರಿತು ಗೋಪಿನಾಥನ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ IAS ಅಧಿಕಾರಿ ಕನ್ನನ್ 'ವಿಮಾನದಿಂದ ಇಳಿದು ನಿರ್ಗಮನ ದ್ವಾರದೆಡೆ ತೆರಳುತ್ತಿದ್ದಂತೆಯೇ, ಸುಮಾರು 10 ಮಂದಿ ಪೊಲೀಸರು ನನ್ನ ಬಳಿ ಬಂದು ಗುರುತು ಪತ್ರ ಮೊದಲಾದ ದಾಖಲೆ ತೋರಿಸುವಂತೆ ಹೇಳಿದರು. ಈ ವೇಳೆ ನಾನು ಹೆಸರನ್ನು ಹೇಳಿದೆ. ಅಷ್ಟರಲ್ಲೇ ಅವರು ನನ್ನನ್ನು VIP ದ್ವಾರದೆಡೆ ಕರೆದೊಯ್ದರು. ಬಳಿಕ ನನ್ನನ್ನು ಅದ್ಯಾವುದೋ ಭದ್ರತಾ ಕೊಠಡಿಗೆ ಕರೆದೊಯ್ದರು' ಎಂದಿದ್ದಾರೆ.
ಗುರುತು ಬಚ್ಚಿಟ್ಟು 8 ದಿನ ಈ ಐಎಎಸ್ ಆಫೀಸರ್ ಮಾಡಿದ್ದೇನು?:
ಅಲ್ಲದೇ 'ಇಲ್ಲಿ ಅಲಹಾಬಾದ್ ನಿಂದ ಹೊರಟ ಬಳಿಕ ಭಾಗವಹಿಸುವ ಕಾರ್ಯಕ್ರಮಗಳ ಕುರಿತು ಪೊಲೀಸರು ವಿಚಾರಣೆ ನಡೆಸಿದರು. ಈ ವೇಳೆ ಶನಿವಾರ ರಾತ್ರಿ ದೆಹಲಿಯಿಂದ ಬೋಕಾರೋಗೆ ತೆರಳಬೇಕಿದೆ ಎಂದು ತಿಳಿಸಿದೆ. ಇದಾದ ಕೆಲವೇ ಕ್ಷಣಗಳಲ್ಲಿ ನನ್ನನ್ನು ವಿಮಾನದ ಮೂಲಕ ದೆಹಲಿಗೆ ಕಳುಹಿಸಿದರು' ಎಂದಿದ್ದಾರೆ. ಹೀಗಾಗಿ ಕನ್ನನ್ ಕಾರ್ಯಕ್ರಮದಲ್ಲಿ ಭಾಗವಹಿಸದೇ ಮರಳಿದ್ದಾರೆ.
ಆರ್ಟಿಕಲ್ 370 ರದ್ದುಗೊಳಿಸಿದ್ದ ವೇಳೆ ಕನ್ನನ್ ಗೋಪಿನಾಥನ್ ತಮ್ಮ ಸೇವೆಗೆ ರಾಜೀನಾಮೆ ನೀಡಿ ಭಾರೀ ಸದ್ದು ಮಾಡಿದ್ದರು. ಅಂದು ಅವರು ಸರ್ಕಾರ 370ನೇ ವಿಧಿ ರದ್ದುಗೊಳಿಸಿ ಕಾಶ್ಮೀರಿಗರ ಮೂಲ ಹಕ್ಕುಗಳನ್ನು ಕಸಿದುಕೊಂಡಿದೆ' ಎಂದು ಕಿಡಿ ಕಾರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ