ಅಪ್ಪನ ಶವ 2 ತುಂಡು ಮಾಡಿ ಅಂತ್ಯಸಂಸ್ಕಾರಕ್ಕೆ ಪಾಪಿ ಮಕ್ಕಳ ಸ್ಕೆಚ್‌!

Published : Feb 04, 2025, 01:03 PM ISTUpdated : Feb 04, 2025, 01:27 PM IST
ಅಪ್ಪನ ಶವ 2 ತುಂಡು ಮಾಡಿ ಅಂತ್ಯಸಂಸ್ಕಾರಕ್ಕೆ ಪಾಪಿ ಮಕ್ಕಳ ಸ್ಕೆಚ್‌!

ಸಾರಾಂಶ

ಮಧ್ಯಪ್ರದೇಶದಲ್ಲಿ ಮೃತ ತಂದೆಯ ಅಂತ್ಯಸಂಸ್ಕಾರಕ್ಕಾಗಿ ಇಬ್ಬರು ಮಕ್ಕಳು ಜಗಳವಾಡಿ, ಶವವನ್ನು ಎರಡು ತುಂಡು ಮಾಡಿ ಪ್ರತ್ಯೇಕವಾಗಿ ಅಂತ್ಯಸಂಸ್ಕಾರ ಮಾಡಿದ್ದಾರೆ. 85 ವರ್ಷದ ಧ್ಯಾನಿ ಸಿಂಗ್ ಘೋಷ್ ಅವರ ಮಕ್ಕಳಾದ ದಾಮೋದರ್ ಮತ್ತು ಕಿಶನ್ ನಡುವೆ ಈ ಘಟನೆ ನಡೆದಿದೆ.

ಭೋಪಾಲ್‌ (ಫೆ.4): ಹಿರಿಯರ ಆಸ್ತಿಗಾಗಿ ಮಕ್ಕಳು ಕಿತ್ತಾಡುವುದು ಸಾಮಾನ್ಯ. ಆದರೆ ಮೃತ ತಂದೆಯ ಅಂತ್ಯಸಂಸ್ಕಾರಕ್ಕಾಗಿ ಜಗಳವಾಡಿದ ಮಕ್ಕಳಿಬ್ಬರು ಕೊನೆಗೆ ಶವವನ್ನು ಸರಿಯಾಗಿ ಎರಡು ತುಂಡು ಮಾಡಿ ಪ್ರತ್ಯೇಕವಾಗಿ ಅಂತ್ಯಸಂಸ್ಕಾರಕ್ಕೆ ಮುಂದಾದ ಆಘಾತಕಾರಿ ಘಟನೆ ಮಧ್ಯಪ್ರದೇಶದ ತಿಕಂಘರ್‌ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಧ್ಯಾನಿ ಸಿಂಗ್‌ ಘೋಷ್‌ (85) ಭಾನುವಾರ ಮೃತರಾಗಿದ್ದರು. ಅವರ ಆರೈಕೆ ಮಾಡುತ್ತಿದ್ದ ಮಗ ದಾಮೋದರ್‌ ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸುತ್ತಿದ್ದಾಗ ಕಿಶನ್‌ ಸಿಂಗ್‌ ಎಂದ ಇನ್ನೊಬ್ಬ ಮಗ ಬಂದು ತಾನು ಅಂತ್ಯಸಂಸ್ಕಾರ ನಡೆಸುವುದಾಗಿ ಹೇಳಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ತಂದೆಯ ಮೃತದೇಹ ಸುಮಾರು 5 ಗಂಟೆಗಳ ಕಾಲ ಮನೆಯ ಹೊರಗೇ ಇತ್ತು. ಆಗ ಶವವನ್ನು 2 ಭಾಗವಾಗಿಸಿ ಪ್ರತ್ಯೇಕವಾಗಿ ಅಂತ್ಯಸಂಸ್ಕಾರ ಮಾಡುವಂತೆ ಕಿಶನ್‌ ಸೂಚಿಸಿದ್ದಾನೆ. ಬಂಧು ಬಳಗದವರು ಎಷ್ಟು ಹೇಳಿದರೂ ಕೇಳದೆ ಕಿಶನ್‌ ಹಠ ಹಿಡಿದಾಗ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರ ನಿಗಾದಲ್ಲಿ ದಾಮೋದರ್‌ ಅಂತ್ಯಸಂಸ್ಕಾರ ನೆರವೇರಿಸಿದ್ದು, ಕಿಶನ್‌ರ ಪರಿವಾರ ಕೂಡ ಭಾಗಿಯಾಗಿತ್ತು.

ಮಾಜಿ RTO ಪೇದೆ ಸೌರಭ್‌ ಶರ್ಮ ಹೆಸರಲ್ಲಿ 700 ಕೋಟಿ ಆಸ್ತಿ, ದುಬೈನಲ್ಲಿ 150 ಕೋಟಿ ಮೌಲ್ಯದ ಬಂಗಲೆ!

ಹಿರಿಯ ಮಗನಿಗೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ಅನುಮತಿ: ಅಸ್ವಸ್ಥ ತಂದೆಯನ್ನು ನೋಡಿಕೊಂಡಿದ್ದ ದಾಮೋದರ್, ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದಾಗ, ಕಿಶನ್ ತನ್ನ ಕುಟುಂಬದೊಂದಿಗೆ ಬಂದು, ತಾನೂ ಧಾರ್ಮಿಕ ವಿಧಿವಿಧಾನಗಳನ್ನು ಮಾಡಬೇಕೆಂದು ಒತ್ತಾಯಿಸಿದ್ದ. ಬಳಿಕ ಇದೇ ವಿಚಾರದಲ್ಲಿ ಇಡೀ ಗ್ರಾಮದ ಜನರೊಂದಿಗೆ ಜಗಳವಾಡಿದ್ದ. ಸಂಬಂಧಿಕರು ಮತ್ತು ಗ್ರಾಮಸ್ಥರ ಮನವಿಗಳ ಹೊರತಾಗಿಯೂ, ಕಿಶನ್ ಹಿಂದೆ ಸರಿಯಲು ನಿರಾಕರಿಸಿದ್ದ. ಚರ್ಚೆಗಳ ನಂತರ, ಕಿಶನ್ ಅವರ ಸಮ್ಮುಖದಲ್ಲಿ ಮತ್ತು ಅಧಿಕೃತ ಮೇಲ್ವಿಚಾರಣೆಯಲ್ಲಿ ದಾಮೋದರ್ ಅಂತ್ಯಕ್ರಿಯೆಯನ್ನು ಮುಂದುವರಿಸಲು ಅಧಿಕಾರಿಗಳು ನಿರ್ಧರಿಸಿದರು.

ಮದುವೆ ಮನೆಗೆ ಅತಿಥಿಯಂತೆ ಬಂದು 7 ವರ್ಷದ ಬಾಲಕಿಯನ್ನ ಹೊತ್ತೊಯ್ದ ಪಾತಕಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
India Latest News Live: ಟಿ20 ವಿಶ್ವಕಪ್ ತಂಡದಿಂದ ಗಿಲ್‌ಗೆ ಔಟ್ - ಅಷ್ಟಕ್ಕೂ ಕೊನೆಯ ಕ್ಷಣದಲ್ಲಿ ಆಯ್ಕೆ ಸಮಿತಿ ಈ ತೀರ್ಮಾನ ಮಾಡಿದ್ದೇಕೆ?