
ಮಹಾಕುಂಭ 2025ರಲ್ಲಿ ಮಾಲೆ ಮಾರುತ್ತಿದ್ದ ಮಧ್ಯಪ್ರದೇಶದ ಮೋನಾಲಿಸಾ ಈಗ ಮತ್ತೆ ಸುದ್ದಿ ಮಾಡ್ತಿದ್ದಾರೆ. ನೀಲಿ ಕಣ್ಣು ಮತ್ತು ಆಕರ್ಷಕ ಲುಕ್‌ನಿಂದ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿಬಿಟ್ಟಿದ್ದಾರೆ. ಈ ಲುಕ್ ಬಗ್ಗೆ ಜನ ಚರ್ಚೆ ಮಾಡ್ತಿದ್ದಾರೆ. ಇತ್ತೀಚೆಗೆ ಮೋನಾಲಿಸಾಗೆ ಸಿನಿಮಾ ಆಫರ್ ಕೂಡ ಬಂದಿದೆ. ಆದ್ರೆ ಈಗ, ಅವರ ಹೊಸ ವೈರಲ್ ವಿಡಿಯೋ ಚರ್ಚೆಗೆ ಗ್ರಾಸವಾಗಿದೆ.
ವಿಡಿಯೋದಲ್ಲಿ ಏನಿದೆ ವಿಶೇಷ?: ಈ ವೈರಲ್ ವಿಡಿಯೋದಲ್ಲಿ ಮೋನಾಲಿಸಾ ವೆಸ್ಟರ್ನ್ ಉಡುಪಲ್ಲಿ ಗ್ಲಾಮರಸ್ ಆಗಿ ನಡೆಯುತ್ತಿರುವುದನ್ನು ನೋಡಬಹುದು. ಸ್ಟೈಲಿಶ್ ಲುಕ್ ಮತ್ತು ಭೋಜ್‌ಪುರಿ ಹಾಡಿನ ಹಿನ್ನೆಲೆ, ಈ ವಿಡಿಯೋವನ್ನು ಇನ್ನಷ್ಟು ಆಕರ್ಷಕವಾಗಿಸಿದೆ. ಆದ್ರೆ ಈ ವಿಡಿಯೋ ನಿಜಕ್ಕೂ ಡೀಪ್‌ಫೇಕ್ ತಂತ್ರಜ್ಞಾನದಿಂದ ತಯಾರಾಗಿದ್ದು ಅಂತ ನಿಮಗೆ ಗೊತ್ತಾ?
ಆಕ್ಟಿಂಗ್ ಕಲಿಯೋಕೆ ಹೊರಟ ಮೋನಾಲಿಸ, ಸೋಶಿಯಲ್ ಮೀಡಿಯಾದಲ್ಲಿ ಬಂದಿದ್ದು ಸುಳ್ಳು
ವಿಡಿಯೋದ ನಿಜ ಸ್ವರೂಪ: ನಿಜ ಹೇಳ್ಬೇಕಂದ್ರೆ, ಈ ವಿಡಿಯೋ "ni8.out9" ಅನ್ನೋ ಇನ್‌ಸ್ಟಾಗ್ರಾಮ್ ಖಾತೆಯಿಂದ ಶೇರ್ ಆಗಿದೆ. ವಿಡಿಯೋದಲ್ಲಿ ಮೋನಾಲಿಸಾಳ ಮುಖವನ್ನು AI ತಂತ್ರಜ್ಞಾನದ ಮೂಲಕ ಸೇರಿಸಿ ಡೀಪ್‌ಫೇಕ್ ವಿಡಿಯೋ ತಯಾರಿಸಲಾಗಿದೆ. ವಿಡಿಯೋದಲ್ಲಿ ಅವರು ವೆಸ್ಟರ್ನ್ ಉಡುಪಲ್ಲಿ ಸ್ಟೈಲಿಶ್ ಆಗಿ ಕಾಣಿಸ್ತಿದ್ರೂ, ನಿಜಕ್ಕೂ ಇದು ನಕಲಿ ವಿಡಿಯೋ.
ಇನ್‌ಸ್ಟಾಗ್ರಾಮ್‌ನಲ್ಲಿ ಮೋನಾಲಿಸಾಳ ಇಂತಹ ಹಲವು ಡೀಪ್‌ಫೇಕ್ ವಿಡಿಯೋಗಳು ವೈರಲ್ ಆಗಿವೆ. ಒಮ್ಮೆ ಸಮುದ್ರ ತೀರದಲ್ಲಿ ಡ್ಯಾನ್ಸ್ ಮಾಡ್ತಿದ್ರೆ, ಇನ್ನೊಮ್ಮೆ ಸ್ಟೈಲಿಶ್ ಉಡುಪಲ್ಲಿ ನಡೆಯುತ್ತಿರುವಂತೆ ತೋರಿಸಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಜನ ಏನ್ ಹೇಳ್ತಿದ್ದಾರೆ?
ಈ ವೈರಲ್ ವಿಡಿಯೋ ಬಗ್ಗೆ ಯೂಸರ್ಸ್ ತರಹೇವಾರಿ ಕಮೆಂಟ್ಸ್ ಮಾಡ್ತಿದ್ದಾರೆ. ಕೆಲವರು ಇದನ್ನು ತಮಾಷೆ ಅಂತ ಭಾವಿಸ್ತಿದ್ರೆ, ಇನ್ನು ಕೆಲವರು ವಂಚನೆ ಅಂತಿದ್ದಾರೆ. ವಿಡಿಯೋದ ನಿಜ ಸ್ವರೂಪ ಗೊತ್ತಾದ ಮೇಲೆ, ಸೋಶಿಯಲ್ ಮೀಡಿಯಾದಲ್ಲಿ ಇಷ್ಟೊಂದು ವೈರಲ್ ಆಗೋದು ಹೇಗೆ ಅಂತ ಕೆಲವರಿಗೆ ಅರ್ಥ ಆಗ್ತಿಲ್ಲ.
ಕುಂಭಮೇಳದ ವೈರಲ್ ಬೆಡಗಿ ಮೊನಾಲಿಸಾ ಮೊದಲ ಬಾಲಿವುಡ್ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು?
ಮೋನಾಲಿಸಾಳ ಈ ವೈರಲ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಏನಾದ್ರೂ ವೈರಲ್ ಆದ್ರೆ ಅದರ ಪರಿಣಾಮ ಎಷ್ಟಿರತ್ತೆ ಅಂತ ತೋರಿಸಿಕೊಟ್ಟಿದೆ. ಈ ವಿಡಿಯೋ ಬಗ್ಗೆ ಮೋನಾಲಿಸಾ ಏನ್ ಹೇಳ್ತಾರೆ ಅಂತ ನೋಡ್ಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ