The Kashmir Files: ಚಿತ್ರ ನೋಡಲು ಮಧ್ಯ ಪ್ರದೇಶ ಪೊಲೀಸರಿಗೆ ಸರ್ಕಾರ ರಜೆ!

Published : Mar 15, 2022, 07:42 AM ISTUpdated : Mar 15, 2022, 08:25 AM IST
The Kashmir Files: ಚಿತ್ರ ನೋಡಲು ಮಧ್ಯ ಪ್ರದೇಶ ಪೊಲೀಸರಿಗೆ ಸರ್ಕಾರ ರಜೆ!

ಸಾರಾಂಶ

ಕಾಶ್ಮೀರಿ ಫೈಲ್ಸ್‌  ಸಿನಿಮಾವನ್ನು  ಮಧ್ಯ ಪ್ರದೇಶದಲ್ಲಿ ಈಗಾಗಲೇ ತೆರಿಗೆಮುಕ್ತಗೊಳಿಸಲಾಗಿದೆ

ಭೋಪಾಲ್‌  (ಮಾ. 15) : ಕಾಶ್ಮೀರಿ ಪಂಡಿತರ ಕಥೆಯನ್ನು ಒಳಗೊಂಡ ವಿವೇಕ್‌ ರಂಜನ್‌ ಅಗ್ನಿಹೋತ್ರಿ ನಿರ್ದೇಶನದ ‘ದ ಕಾಶ್ಮೀರಿ ಫೈಲ್ಸ್‌’ ಸಿನಿಮಾ ನೋಡಲು ಮಧ್ಯ ಪ್ರದೇಶ ಪೊಲೀಸರಿಗೆ ರಜೆ ನೀಡುವುದಾಗಿ ಮಧ್ಯಪ್ರದೇಶ ಸರ್ಕಾರ ಸೋಮವಾರ ಘೋಷಿಸಿದೆ. ಈ ಸಿನಿಮಾವನ್ನು ರಾಜ್ಯದಲ್ಲಿ ಈಗಾಗಲೇ ತೆರಿಗೆಮುಕ್ತಗೊಳಿಸಲಾಗಿದೆ. ‘ಕಾಶ್ಮೀರಿ ಫೈಲ್ಸ್‌ ಸಿನಿಮಾವನ್ನು ನೋಡಲು ಪೊಲೀಸ್‌ ಸಿಬ್ಬಂದಿಗೆ ರಜೆ ನೀಡಲಾಗುವುದು. ಈ ಕುರಿತಾಗಿ ಪೊಲೀಸ್‌ ಮಹಾ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ’ ಎಂದು ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್‌ ಮಿಶ್ರಾ ಹೇಳಿದ್ದಾರೆ.

ಝೀ ಸ್ಟುಡಿಯೋಸ್‌ ನಿರ್ಮಾಣದ ಈ ಸಿನಿಮಾ ಪಾಕಿಸ್ತಾನದ ಉಗ್ರರ ಕೃತ್ಯಕ್ಕೆ ಒಳಗಾದ ಕಾಶ್ಮೀರಿ ಪಂಡಿತರ ಚಿತ್ರಕಥೆಯನ್ನು ಒಳಗೊಂಡಿದೆ. ಅನುಪಮ್‌ ಖೇರ್‌, ದರ್ಶನ್‌ ಕುಮಾರ್‌, ಮಿಥುನ್‌ ಚಕ್ರವರ್ತಿ ಮತ್ತು ಪಲ್ಲವಿ ಘೋಷ್‌ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ಕರ್ನಾಟಕ, ಗುಜರಾತ್‌, ಹರ್ಯಾಣದಲ್ಲೂ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.

ಇದನ್ನೂ ಓದಿ: The Kashmir Files: ಕಾಶ್ಮೀರಿ ಪಂಡಿತರ ಹತ್ಯೆ ನಂತರ ಅನುಪಮ್‌ ಖೇರ್‌ ನನ್ನಲ್ಲಿ ಕಣ್ಣೀರುಗರೆದು ನೆರವು ಕೇಳಿದ್ರು: ಅನಂತನಾಗ್‌

ಕಾಶ್ಮೀರದಲ್ಲಿ ಪಂಡಿತರಿಗಿಂತ ಹೆಚ್ಚು ಮುಸ್ಲಿಮರ ಸಾವು: ಕೇರಳ ಕಾಂಗ್ರೆಸ್‌: ಕಾಶ್ಮೀರ ಪಂಡಿತರ ಹತ್ಯೆ ಕುರಿತಾಗಿ ತಯಾರಾಗಿರುವ ದ ಕಾಶ್ಮೀರಿ ಫೈಲ್ಸ್‌ ಚಿತ್ರದ ಕುರಿತಾಗಿ ದೇಶಾದ್ಯಂತ ಚರ್ಚೆ ಆರಂಭವಾಗಿರುವ ಸಮಯದಲ್ಲೇ, 1990ರಿಂದ 2007ರವರೆಗೆ ಕಾಶ್ಮೀರದಲ್ಲಿ ಪಂಡಿತರಿಗಿಂತ ಹೆಚ್ಚು ಮುಸ್ಲಿಮರು ಹತರಾಗಿದ್ದಾರೆ ಎಂದು ಕೇರಳ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ. 

ಇದಕ್ಕೆ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾದ ನಂತರ ಟ್ವೀಟ್‌ ಡಿಲೀಟ್‌ ಮಾಡಲಾಗಿದೆ. 1990ರಿಂದ 2007ರ ಅವಧಿಯಲ್ಲಿ 399 ಕಾಶ್ಮೀರಿ ಪಂಡಿತರು ಮೃತಪಟ್ಟಿದ್ದರೆ, 15 ಸಾವಿರ ಮುಸ್ಲಿಮರು ಮೃತಪಟ್ಟಿದ್ದಾರೆ ಎಂದು ಕೇರಳ ಕಾಂಗ್ರೆಸ್‌ ಟ್ವೀಟ್‌ ಮಾಡಿತ್ತು. ಇದಕ್ಕೆ ತೀಕ್ಷ$್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ‘ಕಾಂಗ್ರೆಸ್‌ಗೆ ಇತಿಹಾಸ ತಿಳಿದಿಲ್ಲ. ಇದೊಂದು ಅಸ್ವಸ್ಥ ಮನಸ್ಥಿತಿಯ ಟ್ವೀಟ್‌’ ಎಂದು ಹೇಳಿತ್ತು.

ಇಂದು ಶಾಸಕರಿಗೆ ಕಾಶ್ಮೀರ್‌ ಫೈಲ್ಸ್‌ ಸಿನಿಮಾ ಪ್ರದರ್ಶನ:  ವಿಧಾನಸಭೆಯ ಎಲ್ಲಾ ಸದಸ್ಯರಿಗೆ ಮಂಗಳವಾರ ಸಂಜೆ 6.45 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್‌ ಪರದೆ ಸಂಖ್ಯೆ 6ರಲ್ಲಿ ‘ದಿ ಕಾಶ್ಮೀರ್‌ ಫೈಲ್ಸ್‌’ ಸಿನಿಮಾ ಪ್ರದರ್ಶನ ಏರ್ಪಡಿಸಿರುವುದಾಗಿ ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಈ ವಿಚಾರವಾಗಿ ಮಾಹಿತಿ ಪ್ರಕಟಿಸಿದ ಅವರು, ಈ ಸಿನಿಮಾ ನೋಡುವುದರಿಂದ ಒಳ್ಳೆಯದಾಗುತ್ತದೆ. ಹಾಗಾಗಿ, ಎಲ್ಲರೂ ಸೇರಿ ಚಿತ್ರ ವೀಕ್ಷಿಸಲು ಹೋಗೊಣ ಎಂದು ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರಿಗೆ ಸ್ಪೀಕರ್‌ ಆಹ್ವಾನ ನೀಡಿದರು.

ಇದನ್ನೂ ಓದಿ: LRC The Kashmir Files: ಅಷ್ಟಕ್ಕೂ ಕಾಶ್ಮೀರದ ಬಗ್ಗೆ ಕಾಂಗ್ರೆಸ್‌ ನಿಲುವೇನು?

ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಚಿತ್ರ ವೀಕ್ಷಿಸಿ ಶೇ.100 ರಷ್ಟುತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದಾರೆ. ಅದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಮಂಗಳವಾರ ಎಲ್ಲರೂ ಒಟ್ಟಿಗೆ ಹೋಗಿ ಸಿನಿಮಾ ನೋಡೋಣ ಎಂದು ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಹೇಳಿದರು. 

ಕಾಶ್ಮೀರಿ ಪಂಡಿತರ ಹತ್ಯೆ ನಂತರ ಅನುಪಮ್‌ ಖೇರ್‌ ನನ್ನಲ್ಲಿ ಕಣ್ಣೀರುಗರೆದು ನೆರವು ಕೇಳಿದ್ರು: ದ ಕಾಶ್ಮೀರ್‌ ಫೈಲ್ಸ್‌ ಸಿನಿಮಾ ಎಲ್ಲೆಡೆ ಸದ್ದು ಮಾಡುತ್ತಿದೆ. 1990ರಲ್ಲಿ ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯಾಕಾಂಡದ ಕುರಿತ ಈ ಸಿನಿಮಾ ನೋಡಿದ ಖ್ಯಾತ ನಟ ಅನಂತನಾಗ್‌ ತಮ್ಮ ಹಳೆಯ ಅನುಭವ ಇಲ್ಲಿ ಹಂಚಿಕೊಂಡಿದ್ದಾರೆ. ಅನಂತನಾಗ್‌ ಪೂರ್ವಜರು ಕಾಶ್ಮೀರದವರು.

ರಾಜಕಾರಣ ಬಿಟ್ಟು 20 ವರ್ಷಗಳು ಕಳೆದ ನಂತರ ಎರಡು ವರ್ಷಗಳ ಹಿಂದೆ ಹಿಂದೂ ಮಹಾಸಭಾ, ಆರ್‌ಎಸ್‌ಎಸ್‌ ಸ್ನೇಹಿತರು ಕರೆದಿದ್ದ ಕಾರ್ಯಕ್ರಮಕ್ಕೆ ಹೋಗಿದ್ದೆ. ಆ ಸಂದರ್ಭದಲ್ಲಿ ಆರ್ಟಿಕಲ್‌ 370 ರದ್ದುಮಾಡುವ ವಿಚಾರ ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ನಮ್ಮ ಪೂರ್ವಜರು ಕಾಶ್ಮೀರದಿಂದ ವಲಸೆ ಬಂದವರು ಎಂಬ ವಿಚಾರ ತಿಳಿಸಿದ್ದೆ.

 ಪುಲ್ವಾಮಾ ದಾಳಿ ಆದಾಗ ಜಮ್ಮು ಮತ್ತು ಕಾಶ್ಮೀರ ಮಾತ್ರ ಇರುವುದಲ್ಲ, ಲಡಾಕ್‌ ಕೂಡ ಇದೆ. ಈ ಮೂರನ್ನೂ ವಿಂಗಡಿಸಿದರೆ ಆಡಳಿತ ನಡೆಸುವುದು ಸುಲವಾಗುತ್ತದೆ ಎಂಬ ಅಭಿಪ್ರಾಯ ಹೇಳಿದ್ದೆ. ಕರ್ಮ ಧರ್ಮ ಸಂಯೋಗದಿಂದ ಆರ್ಟಿಕಲ್‌ 370 ರದ್ದಾಯಿತು. ಲಡಾಕ್‌ ವಿಭಜನೆ ಆಯಿತು. ಇದೆಲ್ಲವೂ ಹಳೇ ಕತೆ. ಈಗ ಕಾಶ್ಮೀರ್‌ ಫೈಲ್ಸ್‌ ಸಿನಿಮಾ ಬಂದಿದೆ. ಸಚಿವ ಮುನಿರತ್ನ ಒತ್ತಾಯದ ಮೇರೆಗೆ ಆ ಸಿನಿಮಾ ನೋಡಿದೆ. ಸಿನಿಮಾ ಪ್ರದರ್ಶನದಲ್ಲಿ ಆಘಾತ ತರುವ ಮೌನ ಆವರಿಸಿತ್ತು. ಅಲ್ಲಿಂದ ಬಂದ ಮೇಲೆ ಹಳೆಯದೆಲ್ಲಾ ಮತ್ತೆ ನೆನಪಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Morphing Wing: ಹಾರಾಡುವಾಗಲೇ ಕ್ಷಣ ಮಾತ್ರದಲ್ಲಿ ಬದಲಾಗುತ್ತೆ ಫೈಟರ್‌ ಜೆಟ್‌ ಶೇಪ್‌, ಹೊಸ ಟೆಕ್ನಾಲಜಿ ಪರೀಕ್ಷಿಸಿದ ಡಿಆರ್‌ಡಿಓ
ವೈರಲ್ ಮೀಮ್ಸ್ ಆಗಿದ್ದ ಯುವಕನ ಫೋಟೋದ ಹಿಂದಿದೆ ನೋವಿನ ಕತೆ: 38 ವರ್ಷ ಬರೀ ದ್ರವಾಹಾರದಲ್ಲೇ ಬದುಕಿದ್ದ ಪಂಚಾಲ್