Namami Gange: ಫಲ ನೀಡಿದ ಯೋಜನೆ,  ಗಂಗಾ ನೀರು ಸ್ನಾನಕ್ಕೆ ಯೋಗ್ಯ

By Kannadaprabha NewsFirst Published Mar 15, 2022, 3:21 AM IST
Highlights

* ಗಂಗಾನದಿಯ ನೀರು ಸ್ನಾನಕ್ಕೆ ಯೋಗ್ಯ: ಕೇಂದ್ರ ಸರ್ಕಾರ
* ಗಂಗಾನದಿ ಶುದ್ಧೀಕರಣದ ನಮಾಮಿ ಗಂಗೆ ಯೋಜನೆ
* ರಾಜ್ಯಸಭೆಯಲ್ಲಿ ಈ ವಿಷಯ ತಿಳಿಸಿದ   ಸಚಿವ

ನವದೆಹಲಿ(ಮಾ. 15)  ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದ ಗಂಗಾನದಿ (Ganga) ಶುದ್ಧೀಕರಣದ ನಮಾಮಿ ಗಂಗೆ (Namami Gange) ಯೋಜನೆ ಫಲ ನೀಡುತ್ತಿದೆ. ತೀವ್ರ ಮಾಲಿನ್ಯಕ್ಕೆ (Pollution) ತುತ್ತಾಗಿದ್ದ ಗಂಗಾನದಿ ನೀರು (Water) ಈಗ ಸ್ನಾನ ಮಾಡುವ ಮಟ್ಟದಲ್ಲಿದೆ ಎಂದು ಖುದ್ದು ಕೇಂದ್ರ (Union Govt)  ಸರ್ಕಾರ ತಿಳಿಸಿದೆ.

ರಾಜ್ಯಸಭೆಯಲ್ಲಿ ಈ ವಿಷಯ ತಿಳಿಸಿದ ಜಲಶಕ್ತಿ ಸಚಿವಾಲಯದ ರಾಜ್ಯ ಖಾತೆ ಸಚಿವ ವಿಶ್ವೇಶ್ವರ್‌ ತುಡು, ‘ನೀರಿನ ಗುಣಮಟ್ಟವನ್ನು ನಿರ್ಧರಿಸುವ ಆಮ್ಲಜನಕದ ಗುಣಮಟ್ಟವು ಗಂಗಾ ನದಿಯ ನೀರಿನಲ್ಲಿ ಸ್ನಾನ ಮಾಡುವ ಮಟ್ಟದಲ್ಲಿದೆ ಎಂದು ತಿಳಿಸಿದೆ’ ಎಂದರು.

ಬದುಕುವ ಆಸೆ ಬಿಟ್ಟಿದ್ದ ನಮ್ಮನ್ನು ರಕ್ಷಿಸಿದ್ದು ಭಾರತ ಸರ್ಕಾರ: ಸುಮಿ ಅನುಭವ ಬಿಚ್ಚಿಟ್ಟ ಕನ್ನಡಿಗ!

‘ಗಂಗಾ ನದಿ ಹರಿಯುವ ಪ್ರದೇಶಗಳಲ್ಲಿ ಯಾವುದೂ ಸಹ ಗುಣಮಟ್ಟಸೂಚಿಯಲ್ಲಿ 1ರಿಂದ 5ರವರೆಗೆ ಇಲ್ಲ. ಎರಡು ಪ್ರದೇಶಗಳು ಮಾತ್ರ 5ನೇ ಹಂತದಲ್ಲಿವೆ’ ಎಂದು ಅವರು ಹೇಳಿದರು.

ಗುಣಮಟ್ಟಸೂಚಿಯಲ್ಲಿ 1 ಸ್ಥಾನವನ್ನು ಅತಿ ಹೆಚ್ಚು ಮಲಿನ ಮತ್ತು ನಂತರ ಸ್ಥಾನಗಳನ್ನು ಕಡಿಮೆ ಮಲಿನ ಮಾನದಂಡದಲ್ಲಿ ಗುರುತಿಸಲಾಗುತ್ತದೆ. ಗಂಗಾ ನದಿ ನೀರಿನಲ್ಲಿರುವ ಆಮ್ಲಜನಕದ ಪ್ರಮಾಣ ಸ್ವೀಕಾರಾರ್ಹ ಪ್ರಮಾಣದಲ್ಲಿದೆ. ನದಿ ಪಾತ್ರದುದ್ದಕ್ಕೂ ಪರಿಸರ ವ್ಯಸಸ್ಥೆ ಅಭಿವೃದ್ಧಿಯ ಹಾದಿಯಲ್ಲಿದೆ ಎಂದು 2021ರ ಸಿಪಿಸಿಬಿ ದತ್ತಾಂಶಗಳು ತಿಳಿಸಿವೆ.

ಮೇಕೆದಾಟು: ರಾಜ್ಯಸಭೆಯಲ್ಲಿ ಧ್ವನಿಯೆತ್ತಿದ ಕಾಂಗ್ರೆಸ್‌
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ರಾಜ್ಯದಲ್ಲಿ ಪಾದಯಾತ್ರೆ ಹೋರಾಟ ನಡೆಸಿದ್ದ ಕಾಂಗ್ರೆಸ್‌ ಪಕ್ಷ ಇದೀಗ ರಾಜ್ಯಸಭೆಯಲ್ಲೂ ಈ ಬಗ್ಗೆ ಧ್ವನಿಯೆತ್ತಿದ್ದು ಈ ವಿಚಾರವಾಗಿ ಕೇಂದ್ರ ಸರ್ಕಾರದ ನಿಲುವೇನು ಎಂದು ಪ್ರಶ್ನಿಸಿದೆ. ಮಾತ್ರವಲ್ಲದೆ ಕಾಂಗ್ರೆಸ್‌ ಸಂಸದರ ನಿಯೋಗ ಪ್ರಧಾನಿಯನ್ನು ಭೇಟಿಯಾಗಿ ಕುಡಿಯುವ ನೀರಿನ ಯೋಜನೆ ಪ್ರಾಮುಖ್ಯತೆ ಬಗ್ಗೆ ವಿವರಿಸಲು ತೀರ್ಮಾನಿಸಿದೆ.

ಸೋಮವಾರ ರಾಜ್ಯಸಭೆಯಲ್ಲಿ ಮೇಕೆದಾಟು ವಿಚಾರ ಪ್ರಸ್ತಾಪಿಸಿದ ಸಂಸದ ಜಿ.ಸಿ.ಚಂದ್ರಶೇಖರ್‌, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ಇಂದಿನ ಜನಸಂಖ್ಯೆ ಸುಮಾರು 1.3 ಕೋಟಿ ಇದೆ. ಪ್ರಸ್ತುತ ಮಹಾನಗರಕ್ಕೆ 50 ಟಿಎಂಸಿ ನೀರಿನ ಅಗತ್ಯ ಇದ್ದರೂ ಲಭ್ಯವಿರುವುದು ಕೇವಲ 17 ಟಿಎಂಸಿ ಮಾತ್ರ. ಹೀಗಾಗಿ ಕುಡಿಯುವ ನೀರಿನ ಅಗತ್ಯಕ್ಕಾಗಿ ನಾವು ಮೇಕೆದಾಟು ಯೋಜನೆಯನ್ನು ಅನುಷ್ಠಾನಕ್ಕೆ ತರಲು ಇಚ್ಛಿಸುತ್ತೇವೆ. ಇದೇ ವೇಳೆ ತಮಿಳುನಾಡು ನೆರೆ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ಕಾವೇರಿ ನದಿಗೆ ಅಡ್ಡಲಾಗಿ 3 ಜಲವಿದ್ಯುತ್‌ ಯೋಜನೆಗಳನ್ನು ಮಾಡಲು ಅನುಮತಿ ನೀಡಲಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಕುಡಿಯುವ ನೀರಿನ ಯೋಜನೆಗೆ ಅಡ್ಡಗಾಲು ಹಾಕಲಾಗುತ್ತಿದೆ. ಹೀಗಿರುವಾಗ ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಸರ್ಕಾರದ ನಿಲುವೇನು ಎಂಬುದನ್ನು ತಿಳಿಸಬೇಕು. ಯಾಕೆಂದರೆ ಇದು ಕುಡಿಯುವ ನೀರಿನ ಯೋಜನೆಯಾಗಿದ್ದು ಕುಡಿಯುವ ನೀರಿನ ಯೋಜನೆಯ ಮಹತ್ವ ಏನೆಂದು ಇಡೀ ಪ್ರಪಂಚಕ್ಕೆ ಗೊತ್ತು ಎಂದು ಹೇಳಿದರು.

 

click me!