
ಇಂದೋರ್: ಮಹಿಳೆಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 15 ಕೆಜಿ ಗಡ್ಡೆಯನ್ನು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ. ಮಧ್ಯಪ್ರದೇಶದ ಇಂದೋರ್‌ನ ಆಸ್ಪತ್ರೆಯೊಂದರಲ್ಲಿ ಈ ವಿಶೇಷ ಶಸ್ತ್ರಚಿಕಿತ್ಸೆ ನಡೆದಿದೆ. ಹಲವು ದಿನಗಳಿಂದ ಈ ಮಹಿಳೆ ಹೊಟ್ಟೆಯಲ್ಲಿ ನೋವು ಹಾಗೂ ಸುಸ್ತಾಗುತ್ತಿರುವ ಬಗ್ಗೆ ಮನೆಯವರಿಗೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮನೆಯವರು ಮಹಿಳೆಯನ್ನು ಆಸ್ಪತ್ರೆಗೆ ಕರೆತಂದು ತಪಾಸಣೆ ನಡೆಸಿದಾಗ ಹೊಟ್ಟೆಯಲ್ಲಿ ಭಾರೀ ಗಾತ್ರದ ಗಡ್ಡೆ ಕಾಣಿಸಿಕೊಂಡಿದೆ. ಮಧ್ಯಪ್ರದೇಶದ (Madhya Pradesh) ಇಂಡೆಕ್ಸ್ ಆಸ್ಪತ್ರೆಯಲ್ಲಿ (Index Hospital) ಈ ವಿಶೇಷ ಶಸ್ತ್ರಚಿಕಿತ್ಸೆ ನಡೆದಿದೆ.
41 ವರ್ಷದ ಮಹಿಳೆಯ ಹೊಟ್ಟೆ ದಿನದಿಂದ ದಿನಕ್ಕೆ ಗಾತ್ರದಲ್ಲೂ ದೊಡ್ಡದಾಗಿತ್ತು. ಜೊತೆಗೆ ಮಹಿಳೆಗೆ ಆಗಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಈ ಹಿನ್ನೆಲೆಯಲ್ಲಿ ತಪಾಸಣೆ ಮಾಡಿದ್ದ ವೈದ್ಯರು ಬೃಹತ್ ಗಾತ್ರದ ಗೆಡ್ಡೆಯನ್ನು (tumour) ಹೊರತೆಗೆದಿದ್ದಾರೆ. ಈ ಗಡ್ಡೆ ತೆಗೆಯಲು ಎರಡು ಗಂಟೆಗಳ ಕಾಲ ಈ ಆಪರೇಷನ್ ನಡೆದಿದೆ. ಈ ಶಸ್ತ್ರಚಿಕಿತ್ಸೆಯಲ್ಲಿ 12 ಜನ ವೈದ್ಯರು ಭಾಗಿಯಾಗಿದ್ದರು. ಈ ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದ ವೈದ್ಯ ಡಾ. ಅತುಲ್ ವ್ಯಾಸ್ (Dr. Atul vyas) ಮಾತನಾಡಿ, ಹೊಟ್ಟೆಯಲ್ಲಿ ಈ ಗಡ್ಡೆಯ ಬೆಳವಣಿಗೆಯಿಂದಾಗಿ ಮಹಿಳೆಗೆ ಆಹಾರ ಸೇವಿಸುವುದಕ್ಕೂ ಕಷ್ಟವಾಗುತ್ತಿತ್ತು. ಜೊತೆಗೆ ನಡೆದಾಡುವುದಕ್ಕೂ ಕಷ್ಟವಾಗುತ್ತಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದೆವು.
ಮಹಿಳೆಯ ಹೊಟ್ಟೆ ಸ್ಕ್ಯಾನ್ ಮಾಡಿದಾಗ ಕಾದಿತ್ತು ಅಚ್ಚರಿ: 11 ಕೆ.ಜಿ ತೂಕದ ಗೆಡ್ಡೆ ಹೊರ ತೆಗೆದ ವೈದ್ಯರು
ಈ ಗಡ್ಡೆಯೂ ದೇಹದ ಹಲವು ನರಗಳಿಗೆ ಅಂಟಿಕೊಂಡಿದ್ದ ಕಾರಣ ಈ ಶಸ್ತ್ರಚಿಕಿತ್ಸೆ (Surgery) ಬಹಳ ಕ್ಲಿಷ್ಟಕರವಾಗಿತ್ತು. ಬಹಳ ನಾಜೂಕಿನಿಂದ ಈ ಶಸ್ತ್ರಚಿಕಿತ್ಸೆಯನ್ನು ನಿಭಾಯಿಸಬೇಕಿತ್ತು. ಇನ್ನು ಈ ಬೃಹತ್ ಗಾತ್ರದ ಗಡ್ಡೆ ಹೊಂದಿದ್ದ ಮಹಿಳೆ ಮಾತ್ರ ಕೇವಲ 49 ಕೇಜಿ ತೂಕವನ್ನು ಹೊಂದಿದ್ದರು. ಇದರ ಜೊತೆಗೆ ಈ ಗೆಡ್ಡೆ ಭಾರಿ ತೂಕವಿದ್ದುದ್ದರಿಂದ ಅವರಿಗೆ ಆಹಾರ ಸೇವಿಸಲು ಸಾಧ್ಯವಾಗುತ್ತಿರಲಿಲ್ಲ, ಇದು ಹೊಟ್ಟೆಯಲ್ಲಿ ಊರಿಯೂತಕ್ಕೆ ಕಾರಣವಾಗಿತ್ತು. ಅಲ್ಲದೇ ಈ ಗಡ್ಡೆ ಇನ್ನೇನು ಒಡೆದು ಹೋಗುವುದರಲ್ಲಿದ್ದು, ಇದು ಮತ್ತಷ್ಟು ಜೀವಾಪಾಯಕ್ಕೆ ಕಾರಣವಾಗುವುದರಲ್ಲಿತ್ತು. ಹೀಗಾಗಿ ಕೊನೆಗೂ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಮಹಿಳೆ ಆರೋಗ್ಯವಾಗಿದ್ದು, ಗುಣಮುಖರಾಗುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದರು.
Uttar Kannada: ಜೊಯಿಡಾದಲ್ಲಿ ಆಕರ್ಷಕ ಗೆಡ್ಡೆ, ಗೆಣಸು ಮೇಳ: 5 ಕೆ.ಜಿ.ಗಿಂತ ಅಧಿಕ ತೂಕ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ