
ಆಗ್ರಾ: ಉತ್ತರಪ್ರದೇಶದ ಮಥುರಾದಲ್ಲಿರುವ ಶ್ರೀಕೃಷ್ಣ ಜನ್ಮಭೂಮಿ ದೇಗುಲ ಸಮುಚ್ಚಯಕ್ಕೆ ಹೊಂದಿಕೊಂಡಿರುವ ಅಕ್ರಮ ನಿರ್ಮಾಣ (ಶಾಹಿ ಈದ್ಗಾ ಮಸೀದಿ)ವನ್ನು ತೆರವುಗೊಳಿಸುವಂತೆ ಕೋರಿ ದೇಗುಲದ ಆಡಳಿತ ನೋಡಿಕೊಳ್ಳುವ ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್, ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಈ ಮೂಲಕ ವಿವಾದಿತ 13.37 ಎಕರೆ ಭೂಮಿಯ ಮೇಲಿನ ತನ್ನ ಹಕ್ಕನ್ನು ಬಲಪಡಿಸುವ ಯತ್ನ ಮಾಡಿದೆ. ಸ್ಥಳೀಯ ಕೋರ್ಟಲ್ಲಿ ಸಲ್ಲಿಕೆ ಆಗಿದ್ದ ಈ ಅರ್ಜಿ ಅಲಹಾಬಾದ್ ಹೈಕೋರ್ಟ್‌ಗೆ ವರ್ಗವಾಗಿದೆ.
ಜಾಗದ ವಿವಾದ ಇತ್ಯರ್ಥಪಡಿಸಿಕೊಳ್ಳಲು 1968ರಲ್ಲಿ ಅಧಿಕಾರದಲ್ಲಿದ್ದ ದೇಗುಲ ಮಂಡಳಿ ಮತ್ತು ಶಾಹಿ ಈದ್ಗಾ ಮಸೀದಿ ಮಾಡಿಕೊಂಡಿದ್ದ ಒಪ್ಪಂದವನ್ನು ದೇಗುಲ ಟ್ರಸ್ಟ್ ವಿರೋಧಿಸಿದೆ. ಇಡೀ ದೇಗುಲದ ಉಸ್ತುವಾರಿ ನೋಡಿಕೊಳ್ಳುತ್ತಿರುವುದು ಈ ಟ್ರಸ್ಟ್. ಆದರೆ 1968ರಲ್ಲಿ ಆದ ಒಪ್ಪಂದಲ್ಲಿ ತಾನು ಭಾಗಿದಾರನಲ್ಲ. ಹೀಗಾಗಿ ಆ ಒಪ್ಪಂದ ರದ್ದುಗೊಳಿಸಿ, ದೇಗುಲಕ್ಕೆ ಹೊಂದಿಕೊಂಡಂತೆ ರಚನೆಯಾಗಿರುವ ಅಕ್ರಮ ನಿರ್ಮಾಣವನ್ನು (Shahi Idga Masjid) ತೆರವುಗೊಳಿಸಬೇಕೆಂದು ಟ್ರಸ್ಟ್ ಅರ್ಜಿಯಲ್ಲಿ ಮನವಿ ಮಾಡಿದೆ.
Krishna Janmabhoomi case: ಶಾಹಿ ಈದ್ಗಾ ಮಸೀದಿ ಸಮೀಕ್ಷೆಗೆ ಮಥುರಾ ಕೋರ್ಟ್ ಆದೇಶ
ಆದರೆ ಈ ಒಪ್ಪಂದ ಮತ್ತು ಡಿಕ್ರಿ ಕುರಿತು 1974ರಲ್ಲಿ ನ್ಯಾಯಾಲಯದ ಆದೇಶ ಹೊರಬಿದ್ದಿದೆ. ಇದೀಗ ಬಹಳ ಸಮಯದ ಬಳಿಕ ಮತ್ತೆ ಆ ಪ್ರಕರಣದ ಕುರಿತು ಮೇಲ್ಮನವಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಮಸೀದಿ ಮಂಡಳಿ ವಾದ ಮಂಡಿಸಿದೆ. ಈ ನಡುವೆ ಮಸೀದಿ ತೆರವಿಗೆ ಒತ್ತಾಯಿಸಿ 2020ರ ಬಳಿಕ ಹಲವು ಅರ್ಜಿಗಳು ಮಥುರಾದ ಕೋರ್ಟ್‌ಗಳಲ್ಲಿ ಸಲ್ಲಿಕೆಯಾಗಿದೆ. ಆದರೆ ಈ ಎಲ್ಲಾ ಅರ್ಜಿಗಳನ್ನು ಒಗ್ಗೂಡಿಸಿ ಸ್ವತಃ ವಿಚಾರಣೆ ನಡೆಸಲು ಅಲಹಾಬಾದ್ ಹೈಕೋರ್ಟ್ (alahabad high court) ತೀರ್ಮಾನಿಸಿರುವ ಕಾರಣ ಟ್ರಸ್ಟ್ ಸಲ್ಲಿಸಿದ ಅರ್ಜಿಯನ್ನು ಇದೀಗ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಗಿದೆ.
ಅಯೋಧ್ಯೆ, ಮಥುರಾ ಸುತ್ತ ಎಣ್ಣೆ ಬ್ಯಾನ್: ಮದ್ಯ ಮಾರಿದ್ದು ಸಾಕು ಹಾಲು ಮಾರಿ ಅಂದ ಯೋಗಿ
ಇದುವರೆಗೆ ವಿವಿಧ ಪ್ರಕರಣಗಳಲ್ಲಿ ಶ್ರೀ ಕೃಷ್ಣಜನ್ಮಭೂಮಿ ಟ್ರಸ್ಟ್ ಪ್ರತಿವಾದಿಯಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಅದು ಅರ್ಜಿದಾರನಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ