ಚುನಾವಣೆಯಲ್ಲಿ ಸೋಲು ಖಚಿತವಾಗುತ್ತಿದ್ದಂತೆ ಹೃದಯಾಘಾತ, ಕಾಂಗ್ರೆಸ್ ನಾಯಕ ನಿಧನ

By Suvarna NewsFirst Published Jul 17, 2022, 6:08 PM IST
Highlights
  • ಮುನ್ಸಿಪಲ್ ಕೌನ್ಸಿಲ್ ಚನಾವಣೆಯಲ್ಲಿ ಸೋಲು ಕಂಡ ಕಾಂಗ್ರೆಸ್ ನಾಯಕ
  • ಸೋಲು ಖಚಿತವಾಗುತ್ತಿದ್ದಂತೆ ನಾಯಕನಿಗೆ ಹೃದಯಾಘಾತ
  • 14 ಮತಗಳಿಂದ ಕಾಂಗ್ರೆಸ್ ನಾಯಕನಿಗೆ ಸೋಲು

ಇಂದೋರ್(ಜು.17): ಮಧ್ಯಪ್ರದೇಶ ಮೊದಲ ಹಂತದ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ನಾಲ್ಕು ಮೇಯರ್ ಸ್ಥಾನ ಗೆದ್ದುಕೊಂಡಿದ್ದರೆ, ಆಮ್ ಆದ್ಮಿ ಪಕ್ಷ ಒಂದು ಮೇಯರ್ ಸ್ಥಾನ ಗೆದ್ದುಕೊಂಡಿದೆ. ಆದರೆ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ. ಈ ಮುಖಭಂಗ ಕಾಂಗ್ರೆಸ್ ನಾಯಕ ಹರಿನಾರಾಯಣ ಗುಪ್ತ ಸಾವಿಗೆ ಕಾರಣಾಗಿದೆ. ಮುನ್ಸಿಪಲ್ ಕೌನ್ಸಿಲ್ ಚುನಾವಣೆಯಲ್ಲಿ 9ನೇ ವಾರ್ಡ್‌ನಿಂದ ಕಣಕ್ಕಿಳಿದ ಕಾಂಗ್ರೆಸ್ ನಾಯಕ ಹರಿನಾರಾಯಣ ಗುಪ್ತ ಕೇವಲ 14 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಸೋಲು ಖಚಿತವಾಗುತ್ತಿದ್ದಂತೆ ಹರಿನಾರಾಯಣ ಗುಪ್ತ ಅವರಿಗೆ ಹೃದಯಾಘಾತವಾಗಿದೆ. ತಕ್ಷಣವೇ ಗುಪ್ತ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಪ್ರಯೋಜನವಾಗಿಲ್ಲ. ಹೃದಯಾಘಾತದಿಂದ ಹರಿನಾರಾಯಣ ಗುಪ್ತ ಸಾವನ್ನಪ್ಪಿದ್ದಾರೆ. ಹುಮಾನಾದ ಮಂಡಲ ಅಧ್ಯಕ್ಷರಾಗಿದ್ದ ಹರಿನಾರಾಯಣ ಗುಪ್ತ ನಿಧನ ಸುದ್ದಿ ಕುಟುಂಬಕ್ಕೆ ಆಘಾತ ತಂದಿದೆ

9ನೇ ವಾರ್ಡ್ ಫಲಿತಾಂಶ ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ಸ್ವತಂತ್ರ ಅಭ್ಯರ್ಥಿ ಅಖಿಲೇಶ್ ಗುಪ್ತ ಹಾಗೂ ಹರಿನಾರಾಯಣ ಗುಪ್ತ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಒಂದು ಬಾರಿ ಹರಿನಾರಾಯಣ ಗುಪ್ತ ಮೇಲುಗೈ ಸಾಧಿಸಿದರೆ, ಮತ್ತೊಂದು ಸುತ್ತಿನಲ್ಲಿ ಅಖಿಲೇಶ್ ಗುಪ್ತ ಮೇಲುಗೈ ಸಾಧಿಸಿದ್ದರು. ಕ್ಷಣಕ್ಷಣಕ್ಕೂ ಫಲಿತಾಂಶ ತಿರುವು ಪಡೆದುಕೊಂಡಿತ್ತು. ಆದರೆ ಅಂತಿಮ ಸುತ್ತಿನ ಮತ ಏಣಿಕೆಯ ಅಂತ್ಯದಲ್ಲಿ ಹರಿನಾರಾಯಣ ಗುಪ್ತ 14 ಮತಗಳ ಅಂತರದಿಂದ ಸೋಲು ಕಂಡರು.  ಆರೋಗ್ಯವಾಗಿದ್ದ ಹರಿನಾರಾಯಣ ಗುಪ್ತ ಸೋಲಿನ ಸುದ್ದಿ ಕೇಳುತ್ತಿದ್ದಂತೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ  ಹೃದಯಾಘಾತದಿಂದ ಕಾಂಗ್ರೆಸ್ ನಾಯಕ ನಿಧನರಾಗಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. 

Latest Videos

ಹಾರ್ಟ್ ಅಟ್ಯಾಕ್‌ ಸೂಚನೆ ಒಂದು ತಿಂಗಳ ಮೊದ್ಲೇ ಸಿಗುತ್ತೆ !

ಕಾಂಗ್ರೆಸ್‌ಗೆ ಮುಖಭಂಗ, ಆಪ್ ಎಂಟ್ರಿ
ಮಧ್ಯಪ್ರದೇಶ ಮುನ್ಸಿಪಲ್ ಕೌನ್ಸಿಲ್ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಸಿಂಗ್ರೌಲಿಯಲ್ಲಿ ಆಪ್ ಮೇಯರ್ ಅಭ್ಯರ್ಥಿ ರಾಣಿ ಅಗರ್ವಾಲ್ 9159 ಮತಗಳಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಮಧ್ಯಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಆಮ್ ಆದ್ಮಿ ಪಾರ್ಟಿ ಪ್ರವೇಶ ಪಡೆದಿದೆ. ಸ್ವತಃ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಿಂಗ್ರೌಲಿಯಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದರು. ಸಿಂಗ್ರೌಲಿಯಲ್ಲಿ ಭಾರಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದ್ದರು.  ಇತ್ತ ಕಾಂಗ್ರೆಸ್ ಬಹುತೇಕ ವಾರ್ಡ್‌ಗಳಲ್ಲಿ ಸೋಲು ಕಂಡಿದೆ.  ಈ ಬಾರಿಯ ಮಧ್ಯಪ್ರೇದಶ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಿರೀಕ್ಷೆ ಹುಸಿಯಾಗಿದೆ.  

ಹೃದಯ ವೈಫಲ್ಯಕ್ಕೆ ನಿದ್ರೆಯೂ ಒಂದು ಕಾರಣವಂತೆ!

ಮಧ್ಯಪ್ರದೇಶದ 414 ಮುನ್ಸಿಪಲ್ ಕಾರ್ಪೋರೇಶನ್‌ಗೆ ಚುನಾವಣೆ ನಡೆದಿತ್ತು. 16 ನಗರಪಾಲಿಕೆ ನಿಗಮ, 99 ನಗರ ಪಾಲಿಕೆ ಪರಿಷದ್ ಹಾಗೂ 298 ನಗರ ಪರಿಷದ್‌ಗೆ ಎರಡು ಹಂತದಲ್ಲಿ ಚುನಾವಣೆ ನಡೆದಿದೆ. ಜುಲೈ 6 ಹಾಗೂ ಜುಲೈ 13ರಂದು ಚುನಾವಣೆ ನಡೆದಿತ್ತು.  ಸದ್ಯದ ಫಲಿತಾಂಶದ ಪ್ರಕಾರ ಬುರ್ಹಾನಪುರ, ಸಾತ್ನಾ, ಖಾಂಡ್ವ ಹಾಗೂ ಸಾಗರ್ ಸ್ಥಾನ ಬಿಜೆಪಿ ಗೆದ್ದುಕೊಂಡಿದೆ. ಆಮ್ ಆದ್ಮಿ ಪಾರ್ಟಿ ಸಿಂಗ್ರೌಲಿಯಲ್ಲಿ ಖಾತೆ ತೆರೆದಿದೆ. 

click me!