ಭಾರತದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆ? ಕೇರಳ ಯುವಕ ಆಸ್ಪತ್ರೆ ದಾಖಲು!

Published : Jul 17, 2022, 03:48 PM IST
ಭಾರತದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆ? ಕೇರಳ ಯುವಕ ಆಸ್ಪತ್ರೆ ದಾಖಲು!

ಸಾರಾಂಶ

ಭಾರತದಲ್ಲಿ 2ನೇ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವ ಶಂಕೆ ಮಂಕಿಪಾಕ್ಸ್ ಗುಣಲಕ್ಷದ ಕೇರಳ ಯುವಕ ಆಸ್ಪತ್ರೆ ದಾಖಲು ಮಾದರಿ ಸಂಗ್ರಹಿಸಿ ಪರೀಕ್ಷೆಗೆ ರವಾನಿ, ಕೇರಳದಲ್ಲಿ 

ತಿರುವನಂತಪುರಂ(ಜು.17): ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿರುವ ನಡುವೆ ಮಂಕಿಪಾಕ್ಸ್ ಪ್ರಕರಣ ದೇಶದ ಆತಂಕ ಹೆಚ್ಚಿಸಿದೆ. ಭಾರತದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಇದೀಗ ಎರಡನೇ ಪ್ರಕರಣ ಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಮಂಕಿಪಾಕ್ಸ್ ರೋಗಲಕ್ಷಣ ಹೊಂದಿದೆ ಯುವಕ ಕೇರಳದ ಕಣ್ಣೂರಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದಾನೆ. ಮಂಕಿಪಾಕ್ಸ್ ರೋಗ ಲಕ್ಷಣಗಳು ಕಾಣಿಸಿಕೊಂಡಿರುವ ಕಾರಣ ಯುವಕನ ಮಾದರಿ ಸಂಗ್ರಹಿಸಿ ಪುಣೆಯಲ್ಲಿರುವ ವಿರೋಲಜಿ ಕೇಂದ್ರಕ್ಕೆ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಇತ್ತ ಯುವಕನ ಐಸೋಲೇಶನ್‌ಗೆ ಒಳಪಡಿಸಲಾಗಿದ್ದು, ಕಣ್ಣೂರು ಸೇರಿದಂತೆ 5ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಯುವಕನ ಆರೋಗ್ಯದ ಮೇಲೆ ಸಂಪೂರ್ಣ ನಿಗಾವಹಿಸಲಾಗಿದೆ. ಇತರರಿಂದ ಹರಡದಂತೆ ಎಚ್ಚರ ವಹಿಸಲಾಗಿದೆ. ಯುವಕನಲ್ಲಿ ಮಂಕಿಪಾಕ್ಸ್ ರೋಗಲಕ್ಷಣಗಳು ಕಾಣಿಸಿಕೊಂಡಿದೆ. ಆದರೆ ಮಂಕಿಪಾಕ್ಸ್ ವೈರಸ್ ತಗುಲಿದೆಯಾ ಅನ್ನೋದು ಪರೀಕ್ಷಾ ವರದಿಯಿಂದಲೇ ಗೊತ್ತಾಗಬೇಕಿದೆ ಎಂದು ಕಣ್ಣೂರು ಮೆಡಿಕಲ್ ಕಾಲೇಜು ಆಸ್ಪತ್ರೆ ನಿರ್ದೇಶಕರು ಹೇಳಿದ್ದಾರೆ.

ಮಧ್ಯಪ್ರಾಶ್ಚ್ಯದೇಶದಿಂದ(Middle east) ಕಣ್ಣೂರಿಗೆ ಆಗಮಿಸಿದ ಈ ಯುವಕನಲ್ಲಿ ಕಳೆದ ಒಂದು ವಾರದಿಂದ ಜ್ವರ ಕಾಣಿಸಿಕೊಂಡಿತ್ತು. ಬಳಿಕ ಮಂಕಿಪಾಕ್ಸ್ ರೋಗಲಕ್ಷಣಗಳಂತೆ ಕಜ್ಜಿ ಅಥವಾ ಗುಳ್ಳೆಗಳು ಕಾಣಿಸಿಕೊಳ್ಳಲು(monkeypox symptoms) ಆರಂಭಿಸಿದೆ. ದೇಹ ತುರಿಕೆ ಹೆಚ್ಚಾಗಿದೆ. ಹೀಗಾಗಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಆಸ್ಪತ್ರೆ ದಾಖಲಾಗಿದ್ದಾನೆ.  ವಿದೇಶದಿಂದ ನೇರವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯುವಕ, ದಾರಿ ಮಾರ್ಗದ ಮೂಲಕ ಕಣ್ಣೂರಿಗೆ(Kannur) ತೆರಳಿದ್ದಾನೆ. ಈತನ ಆಗಮಿಸಿದ ವಿಮಾನದಲ್ಲಿನ ಇತರ ಪ್ರಯಾಣಿಕರ ಮಾಹಿತಿಯನ್ನು ಕಣ್ಣೂರು ಜಿಲ್ಲಾಡಳಿತ ಕಲೆ ಹಾಕುತ್ತಿದೆ. ಇದರಲ್ಲಿ ಕೇರಳ ರಾಜ್ಯದ ಪ್ರಯಾಣಿಕರ ಮಾಹಿತಿಯನ್ನು ಪಡೆದು ಅವರನ್ನು ಐಸೋಲೇಶನ್‌ಗೆ ಸೂಚಿಸಲು ಮುಂದಾಗಿದೆ. ಇದೀಗ ಜಿಲ್ಲಾಡಳಿತ ಯುವಕನ ಪರೀಕ್ಷಾ ವರದಿಗಾಗಿ ಕಾಯುತ್ತಿದೆ.

 

ಮಕ್ಕಳಿಗೆ ಕೋವಿಡ್ ವೈರಸ್‌ಗಿಂತ ಮಂಕಿಪಾಕ್ಸ್ ಮಾರಕವಾಗಬಹುದು, ಏಮ್ಸ್ ಎಚ್ಚರಿಕೆ!

ಕೇರಳದಲ್ಲಿ ಈಗಾಗಲೇ ಮಂಕಿಪಾಕ್ಸ್ ಪ್ರಕರಣ(Kerala Monkeypox case) ಪತ್ತೆಯಾಗಿರುವ ಕಾರಣ 5 ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ನಿಗಾವಹಿಸಲಾಗಿದೆ. ಪ್ರಯಾಣಿಕರ ತಪಾಸಣೆ ನಡೆಸಲಾಗುತ್ತದೆ. ಪ್ರಯಾಣಿಕರ ಸಂಪೂರ್ಣ ಮಾಹಿತಿ  ಕಲೆ ಹಾಕಲಾಗುತ್ತಿದೆ. ಇದೀಗ ಕೇರಳದಲ್ಲಿ ಕೋವಿಡ್ ಜೊತೆಗೆ ಮಂಕಿಪಾಕ್ಸ್ ಪ್ರಕರಣ ಭೀತಿ ಹೆಚ್ಚಾಗಿದೆ. ಮಂಕಿಪಾಕ್ಸ್ ಪ್ರಕರಣ ಮಕ್ಕಳಿಗೆ ಮಾರಕವಾಗಬಹುದು ಅನ್ನೋ ಏಮ್ಸ್ ತಜ್ಞರ(Delhi AIIMS) ಎಚ್ಚರಿಕೆ ಬೆನ್ನಲ್ಲೇ ಇದೀಗ ಎರಡನೇ ಪ್ರಕರಣದ ಶಂಕೆ ಕಾಡುತ್ತಿದೆ.

ಕೇರಳದ ಕೊಲ್ಲಂ ಜಿಲ್ಲೆಯ 35 ವರ್ಷದ ವ್ಯಕ್ತಿಯಲ್ಲಿ ಭಾರತದ ಮೊದಲ ಮಂಕಿಪಾಕ್ಸ್ ಪ್ರಕಕರಣ ಪತ್ತೆಯಾಗಿತ್ತು. ಮಂಕಿಪಾಕ್ಸ್ ದೃಢಪಟ್ಟ ವ್ಯಕ್ತಿ ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಕೇರಳ ಆರೋಗ್ಯ ಸಚಿವ ವೀನಾ ಜಾರ್ಜ್ ಈಗಾಗಲೇ ತುರ್ತು ಸಭೆ ನಡೆಸಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ. ತಪಾಸನೆ ನಡೆಸುವಂತೆ ಸೂಚಿಸಿದ್ದಾರೆ. ವಿದೇಶದಿಂದ ಆಗಮಿಸುವವರ ಬಗ್ಗೆ ನಿಗಾ ಇಡಲು ಸೂಚಿಸಲಾಗಿದೆ.

 

ಮಂಕಿಪಾಕ್ಸ್ ಭೀತಿ: ಕರ್ನಾಟಕದಲ್ಲಿ ಮುನ್ನೆಚ್ಚರಿಕಾ ಕ್ರಮಗಳು ಜಾರಿ

2ನೇ ಮಂಕಿಪಾಕ್ಸ್ ಪ್ರಕರಣ ಯುವಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕಾರಣ ಇದೀಗ ಮಂಗಳೂರಿನಲ್ಲಿ ಮಂಕಿಪಾಕ್ಸ್ ಭೀತಿ ಆರಂಭಗೊಂಂಡಿದೆ. ಹೀಗಾಗಿ ಮಂಗಳೂರು ಹಾಗೂ ಕೇರಳ ಗಡಿಗಳಲ್ಲಿ ತಪಾಸಣೆ ಹೆಚ್ಚಿಸಲಾಗಿದೆ. ಕರ್ನಾಟಕ ಹಾಗೂ ಕೇರಳ ಗಡಿ ಪ್ರದೇಶಗಳಲ್ಲಿ ಮತ್ತೆ ಕಠಿಣ ರೂಲ್ಸ್ ಜಾರಿಗೊಂಡಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ
ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌