ಚೀತಾ ಸಾವಿಗೆ ಮಿಲನ ಸಮಯದಲ್ಲಿ ತಲೆಗಾದ ಗಾಯ ಕಾರಣ: ವೈದ್ಯರು

By Anusha KbFirst Published Jul 13, 2023, 11:55 AM IST
Highlights

ಇಲ್ಲಿನ ಕುನೋ ಅಭಯಾರಣ್ಯದಲ್ಲಿ ಮಂಗಳವಾರ ಸಾವನ್ನಪ್ಪಿದ ಚೀತಾ ‘ತೇಜಸ್‌’ ಮರಣಕ್ಕೆ, ಮಿಲನ ಸಮಯದಲ್ಲಿ ತಲೆಗೆ ಆದ ಗಾಯ ಕಾರಣವಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಭೋಪಾಲ್‌: ಇಲ್ಲಿನ ಕುನೋ ಅಭಯಾರಣ್ಯದಲ್ಲಿ ಮಂಗಳವಾರ ಸಾವನ್ನಪ್ಪಿದ ಚೀತಾ ‘ತೇಜಸ್‌’ ಮರಣಕ್ಕೆ, ಮಿಲನ ಸಮಯದಲ್ಲಿ ತಲೆಗೆ ಆದ ಗಾಯ ಕಾರಣವಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿದ ವೈದ್ಯರು,‘ಮಿಲನ ಸಮಯದಲ್ಲಿ ಹೆಣ್ಣು ಚೀತಾ ನಭಾ ಜೊತೆ ಆದ ಕಿತ್ತಾಟದಲ್ಲಿ ತೇಜಸ್‌ ತಲೆಗೆ ಗಾಯ ಆಗಿತ್ತು. ಈ ಗಾಯವೇ ಅದರ ಸಾವಿಗೆ ಕಾರಣವಾಗಿರಬಹುದು’ ಎಂದು ಹೇಳಿದರು. ತೇಜಸ್‌ ಕುನೋ ಅರಣ್ಯದ 6ನೇ ವಿಭಾಗದಲ್ಲಿ ಏಕಾಂಗಿಯಾಗಿತ್ತು. ಇದರ ಮಿಲನಕ್ಕೆಂದು ಸಿಬ್ಬಂದಿ 5ನೇ ವಿಭಾಗದ ಬಾಗಿಲು ತೆರೆದಿದ್ದರು. ಬೆಳಗ್ಗೆ 11 ಗಂಟೆ ಸುಮಾರಿಗೆ ನಭಾ ಚೀತಾದೊಂದಿಗೆ ಮಿಲನಕ್ಕೆಂದು ಆದ ಕಿತ್ತಾಟದಲ್ಲಿ ತೇಜಸ್‌ ಮೇಲ್ಕುತ್ತಿಗೆಗೆ ಗಾಯ ಆಗಿತ್ತು. ಇದನ್ನು ಕಂಡ ಸಿಬ್ಬಂದಿ ತಕ್ಷಣ ವೈದ್ಯಕೀಯ ಚಿಕಿತ್ಸೆ ಅಗತ್ಯ ಇದೆ ಎಂದು ವೈದ್ಯರನ್ನು ಕರೆದರು. ಆದರೆ ಮಧ್ಯಾಹ್ನ 2 ಗಂಟೆಗೆ ವೇಳೆಗೆ ನೋವಿನ ತೀವ್ರತೆಯಿಂದ ತೇಜಸ್‌ ಸಾವನ್ನಪ್ಪಿತು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದರು. ಆದರೆ ವೈದ್ಯರು ಮರಣೋತ್ತರ ಪರೀಕ್ಷೆಯ ಅಂತಿಮ ವರದಿಯನ್ನು ವೈದ್ಯರು ಇನ್ನು ಸಲ್ಲಿಸುವುದು ಬಾಕಿ ಇದೆ.

ದೇಶದಲ್ಲಿ ಚೀತಾಗಳ ಸಂತತಿಯನ್ನು ಪುನಃ ಸ್ಥಾಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಬೆನ್ನುಬೆನ್ನಿಗೆ ಎನ್ನುವಂತೆ ಹಿನ್ನಡೆಗಳು ಆಗುತ್ತಿವೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಪಾರ್ಕ್‌ನಲ್ಲಿ ಚೀತಾಗಳ ಸಾವಿನ ಸರಣಿ ಮುಂದುವರಿದಿದ್ದು, ಮಂಗಳವಾರ (ಜುಲೈ 11) ಗಂಡು ಚೀತಾ ತೇಜಸ್‌ ಸಾವು ಕಂಡಿತ್ತು. ಇತ್ತೀಚಿನ ದಿನಗಳಲ್ಲಿ ಚೀತಾಗಳು ನಿರಂತರವಾಗಿ ಸಾವು ಕಂಡಿದ್ದ ಹಿನ್ನಲೆಯಲ್ಲಿ ಎಲ್ಲಾ ಚೀತಾಗಳನ್ನು ಬಂಧಿತ ಪ್ರದೇಶದಲ್ಲಿ ಬಿಡಲಾಗಿತ್ತು. ಈ ವೇಳೆ ಮಂಗಳವಾರ ಬೆಳಗ್ಗೆ ತೇಜಸ್‌ ಚೀತಾದ ಕುತ್ತಿಗೆಯ ಬಳಿ ತೀವ್ರ ಗಾಯವಾದ ಗುರುತು ಸಿಕ್ಕಿತ್ತು. ಆದರೆ, ಗಾಯ ಹೇಗೆ ಆಯಿತು ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಇದೇ ಕಾರಣದಿಂದಾಗಿ ಚೀತಾ ಸಾವು ಕಂಡಿದೆ. ಈ ಬಗ್ಗೆ ಕುನೋ ಡಿಎಫ್‌ಒ ಪಿ.ಕೆ ವರ್ಮಾ ಮಾತನಾಡಿದ್ದು,  ಬಂಧಿತ ಆವರಣದಲ್ಲಿ ಬೇರೆ ಯಾವ ಚೀತಾಗಳು ಇದ್ದಿರಲಿಲ್ಲ. ಎಲ್ಲಾ ಐದೂ ಚೀತಾಗಳನ್ನು ಭಿನ್ನ ಆವರಣದಲ್ಲಿ ಇಡಲಾಗಿದೆ ಎಂದು ತಿಳಿಸಿದ್ದರು. ಈಗ ಈ ಗಾಯಕ್ಕೆ ವೈದ್ಯರು ಕಾರಣ ತಿಳಿಸಿದ್ದಾರೆ. 

6 ಸಾವಿನ ಬೆನ್ನಲ್ಲೇ ಕುನೋ ಅರಣ್ಯಕ್ಕೆ ನಮೀಬಿಯಾದಿಂದ ಬರುತ್ತಿದೆ ಮತ್ತೆ 7 ಚೀತಾ!

ನಾಲ್ಕು ಚೀತಾ, ಮೂರು ಮರಿಗಳ ಸಾವು: ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ತಂದ ಒಟ್ಟು 20 ಚಿರತೆಗಳ ಪೈಕಿ ಇದುವರೆಗಿನ ನಾಲ್ಕು ಚೀತಾಗಳು ಸಾವು ಕಂಡಿದೆ.  ಅದರೊಂದಿಗೆ ಇಲ್ಲಿ ಜನಿಸಿದ ನಾಲ್ಕು ಮರಿಗಳ ಪೈಕಿ ಮೂರು ಮರಿಗಳೂ ಸಾವನ್ನಪ್ಪಿವೆ. ಸದ್ಯ 12 ಚಿರತೆಗಳು ತೆರೆದ ಅರಣ್ಯದಲ್ಲಿವೆ.

ಕುನೋದಲ್ಲಿ ಆಗಿರುವ ಚೀತಾ ಸಾವುಗಳು

1. ಮಾರ್ಚ್ 27 ರಂದು, 4 ವರ್ಷದ ಹೆಣ್ಣು ಚಿರತೆ ಸಾಶಾ ಮೂತ್ರಪಿಂಡದ ಸೋಂಕಿನಿಂದ ಸಾವು ಕಂಡಿತು

2. ಏಪ್ರಿಲ್ 23 ರಂದು ಉದಯ್ ಚೀತಾ ಹೃದಯಾಘಾತದಿಂದ ನಿಧನವಾಯಿತು. ಅರಣ್ಯದಲ್ಲಿ ಏಕಾಏಖಿಯಾಗಿ ಚೀತಾ ಮೂರ್ಛೆ ತಪ್ಪಿ ಬಿದ್ದು ಸಾವು ಕಂಡಿತ್ತು.

3. ಮೇ 9 ರಂದು, ದಕ್ಷ ಚೀತಾ ಆವರಣದಲ್ಲಿ ಎರಡು ಗಂಡು ಚೀತಾಗಳಾದ ಅಗ್ನಿ ಮತ್ತು ವಾಯು ಜೊತೆ ಸಂಭೋಗದ ಸಮಯದಲ್ಲಿ ಸಾವು ಕಂಡಿತ್ತು.

4. ಮೇ 23 ರಂದು ಚೀತಾ ಮರಿ ಸಾವನ್ನಪ್ಪಿತ್ತು. ಇದು ಜ್ವಾಲಾ ಚೀತಾದ ಮೊದಲ ಮರಿಯಾಗಿತ್ತು.

5. ಮೇ 25ರಂದು ಜ್ವಾಲಾಳ ಇನ್ನೆರಡು ಮರಿಗಳು ಸಾವನ್ನಪ್ಪಿದ್ದವು.

ಕುನೋದಿಂದ ಮತ್ತೊಂದು ಕೆಟ್ಟ ಸುದ್ದಿ, ಎರಡು ತಿಂಗಳ ಹೆಣ್ಣು ಚೀತಾ ಸಾವು!

click me!