ಆಭರಣ ಖರೀದಿ ವೇಳೆ ಎಚ್ಚರ, ವಿದೇಶಿ ಮಹಿಳೆಗೆ 300 ರೂ ಸರವನ್ನು 6 ಕೋಟಿಗೆ ಮಾರಾಟ!

By Chethan Kumar  |  First Published Jun 11, 2024, 4:29 PM IST

ಆಭರಣದ ಬೆಲೆ 300 ರೂಪಾಯಿ. ನಕಲಿ ಆಭರಣವನ್ನು ಜೈಪುರ ಜ್ಯೂವೆಲ್ಲರಿ ಶಾಪ್ ಮಾಲೀಕ ಬರೋಬ್ಬರಿ 6 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾನೆ. ಈ ದುಡ್ಡಲ್ಲಿ 3 ಕೋಟಿ ರೂ ಮನೆ ಖರೀದಿಸಿದ್ದರೆ, ಇನ್ನುಳಿದ 3 ಕೋಟಿ ಎಲ್ಲಿ ಎಂದು ಕೇಳಲು ಮಾಲೀಕ ನಾಪತ್ತೆಯಾಗಿದ್ದಾನೆ. 
 


ಜೈಪುರ(ಜೂ.11) ಆಭರಣ ಖರೀದಿಸುವಾಗ ಅತೀವ ಎಚ್ಚರಿಕೆ ವಹಿಸಬೇಕು. ಸ್ವಲ್ಪ ಯಾಮಾರಿದರೂ ಮೋಸ ಹೋಗುವುದು ಖಚಿತ. ಇದೀಗ ಜೈಪುರದ ಜ್ಯೂವೆಲ್ಲರಿ ಶಾಪ್‌ನಲ್ಲಿ ಆಭರಣ ಖರೀದಿಸಿದ ಅಮೆರಿಕ ಮಹಿಳೆಗೆ ಭಾರಿ ಮೋಸವಾಗಿದೆ. 300 ರೂಪಾಯಿ ಆಭರಣಗಳಿಗೆ ವಿದೇಶಿ ಮಹಿಲೆ ಬರೋಬ್ಬರಿ 6 ಕೋಟಿ ರೂಪಾಯಿ ನೀಡಿ ಮೋಸ ಹೋಗಿದ್ದಾಳೆ. ಇದೀಗ ಅಮೆರಿಕ ರಾಯಭಾರಿ ಸಹಾಯದೊಂದಿಗೆ ಜ್ಯೂವೆಲ್ಲಿ ಶಾಪ್ ಮಾಲೀಕನ ವಿರುದ್ದ ದೂರು ದಾಖಲಿಸಿದ್ದಾಳೆ.

ಅಮೆರಿಕ ಮಹಿಳೆ ಚೆರಿಶ್ ಭಾರತಕ್ಕೆ ಹಲವು ಭಾರಿ ಭೇಟಿ ನೀಡಿದ್ದಾಳೆ. ಕಳೆದ ಕೆಲ ವರ್ಷಗಳಿಂದ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಜೈಪುರಜಜ ಜೋಹ್ರಿ ಬಜಾರ್‌ನ ಜ್ಯೂವೆಲ್ಲಿರಿ ಮಾಲೀಕನ ಬಳಿಯಿಂದ ಕೆಲ ಆಭರಣಗಳನ್ನು ಖರೀದಿಸಿದ್ದಾಳೆ. ಕೊನೆಯದಾಗಿ 300 ರೂಪಾಯಿ ನಕಲಿ ಆಭರಣವನ್ನು ಖರೀದಿಸಿದ್ದಾಳೆ.

Latest Videos

undefined

ನಿವೃತ್ತಿ ಹಣ ಬರುತ್ತಿದ್ದಂತೆ ನಿಮಗೂ ಬರಬಹುದು ಈ ಕಾಲ್; ಹುಷಾರ್!

ಜ್ಯೂವೆಲ್ಲರಿ ಶಾಪ್ ಮಾಲೀಕ ಬೆಳ್ಳಿಯ ಆಭರಣಗಳಿಗೆ ಚಿನ್ನದ ಕೋಟಿಂಗ್, ಕೆಲ ನಕಲಿ ಮುತ್ತುಗಳ ಆಭರಣಗಳನ್ನೂ ಈತ ಅಮೆರಿಕ ಮಹಿಳೆಗೆ ಮಾರಾಟ ಮಾಡಿದ್ದಾನೆ. ಒಟ್ಟು 6 ಕೋಟಿ ರೂಪಾಯಿ ಮೌಲ್ಯದ ಆಭರಣಗಳನ್ನು ವಿದೇಶಿ ಮಹಿಳೆ ಖರೀದಿಸಿದ್ದಾಳೆ. ಆದರೆ ಎಲ್ಲವೂ ನಕಲಿ ಆಭರಣವಾಗಿದೆ. ವಿದೇಶಿ ಮಹಿಳೆಗೆ ತಾನು ಖರೀದಿಸಿರುವುದು ನಕಲಿ ಆಭರಣ ಅನ್ನೋದು ಪ್ರದರ್ಶನವೊಂದರಲ್ಲಿ ಅರಿವಾಗಿದೆ.

ಅಮೆರಿಕದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆದ ಆಭರಣಗಳ ವಸ್ತು ಪ್ರದರ್ಶನದಲ್ಲಿ ಚೆರಿಶ್ ಮಹಿಳೆ ತಾನು ಖರೀದಿಸಿದ ವಿಶೇಷ ಆಭರಣಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಆದರೆ ಪ್ರದರ್ಶನಕ್ಕಿಟ್ಟಿದ್ದ ಆಭರಣಗಳು ನಕಲಿ ಆರಭರಣ ಅನ್ನೋದು ಸಾಬೀತಾಗಿದೆ. ಇದರಿಂದ ಮಹಿಳೆ ತೀವ್ರ ಮುಜುಗರಕ್ಕೀಡಾಗಿದ್ದಾಳೆ. ಇತ್ತ ಆಕ್ರೋಶಗೊಂಡ ಮಹಿಳೆ ಮತ್ತೆ ಭಾರತಕ್ಕೆ ಮರಳಿ ಜ್ಯೂವೆಲ್ಲರಿಗೆ ತೆರಳಿ ನಕಲಿ ಆಭರಣ ಕುರಿತು ಪ್ರಶ್ನಿಸಿದ್ದಾಳೆ.

ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಆದರೆ ಪೊಲೀಸರು ತನಿಖೆ ನಡೆಸಲು , ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಇತ್ತ ಜ್ಯೂವೆಲ್ಲಿ ಮಾಲೀಕ ಕೂಡ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ದ ದೂರು ಸಲ್ಲಿಸಿದ್ದಾನೆ. ಮಹಿಳೆ ಸುಳ್ಳು ಹೇಳಿ ವ್ಯಾಪರಕ್ಕೆ ಧಕ್ಕೆ ತರುತ್ತಿದ್ದಾಳೆ ಎಂದು ದೂರು ದಾಖಲಿಸಿದ್ದಾನೆ.

ದಿಕ್ಕು ತೋಚದ ಮಹಿಳೆ ಭಾರತದಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದ್ದಾಳೆ. ತಕ್ಷಣ ಸ್ಪಂದಿಸಿದ ರಾಯಭಾರ ಕಚೇರಿ ತ್ವರಿತ ಕ್ರಮಕ್ಕೆ ಆಗ್ರಹಿಸಿದೆ. ಇದರ ಬೆನ್ನಲ್ಲೇ ಪೊಲೀಸರು ದೂರು ದಾಖಲಿಸಿದ್ದಾರೆ. ಆಭರಣಗಳ ಖರೀದಿ ಮಾಹಿತಿ ಕಲೆ ಹಾಕಿದ್ದಾರೆ. ಆಭರಣಗಳನ್ನು ವಶಕ್ಕೆ ಪಡೆದು ತಪಾಸನೆ ನಡೆಸಿದ್ದಾರೆ. ಈ ವೇಳೆ ನಕಲಿ ಆಭರಣಗಳು ಅನ್ನೋದು ಸಾಬೀತಾಗಿದೆ. ಪ್ರಕರಣ ತೀವ್ರಗೊಳ್ಳುತ್ತಿದ್ದಂತೆ ಜ್ಯೂವೆಲ್ಲರಿ ಶಾಪ್ ಮಾಲೀಕ ನಾಪತ್ತೆಯಾಗಿದ್ದಾನೆ. 6 ಕೋಟಿ ರೂಪಾಯಿ ವಂಚಿಸಿರುವ ಮಾಲೀಕ, 3 ಕೋಟಿ ರೂಪಾಯಿ ಮೌಲ್ಯದ ಮನೆ ಖರೀದಿಸಿದ್ದಾನೆ ಅನ್ನೋ ಮಾಹಿತಿ ಬಯಲಾಗಿದೆ.

ರಾಮನಗರ: ಬೆಳ್ಳುಳ್ಳಿ ವ್ಯಾಪಾರ ಮಾಡ ಹೊರಟವನಿಗೆ 2.25 ಲಕ್ಷ ವಂಚನೆ

click me!