ಮಹಿಳೆಯ ತೌಬಾ ತೌಬಾ ಡ್ಯಾನ್ಸ್‌ಗೆ ದಂಗಾದ ಬಾಲಿವುಡ್, ಖುದ್ದು ವಿಕ್ಕಿ ಹೇಳಿದ್ರು ವಾವ್!

By Chethan Kumar  |  First Published Jul 23, 2024, 7:02 PM IST

ವಿಕ್ಕಿ ಕೌಶಾಲ್ ಹಾಗೂ ತೃಪ್ತಿ ದಿಮ್ರಿ ಅಭಿನಯದ ಬ್ಯಾಡ್ ನ್ಯೂಝ್ ಚಿತ್ರ ಭಾರಿ ಸದ್ದು ಮಾಡುತ್ತಿದೆ. ಈ ಚಿತ್ರದ ತೌಬಾ ತೌಬಾ ಡ್ಯಾನ್ಸ್ ಎಲ್ಲೆಡೆ ಸದ್ದು ಮಾಡುತ್ತಿದೆ. ಇದೀಗ ಹಳ್ಳಿಯ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ತೌಬಾ ತೌಬಾ ಸಿಗ್ನೇಚರ್ ಸ್ಟೆಪ್ಸ್ ಹಾಕಿದ್ದಾರೆ. ಈಕೆಯ ಅದ್ಭುತ ಡ್ಯಾನ್ಸ್‌ಗೆ ವಿಕ್ಕಿ ಕೌಶಾಲ್ ವಾವ್ ಹೇಳಿದ್ದಾರೆ.


ಮುಂಬೈ(ಜು.23) ಬಾಲಿವುಡ್‌ನ ಬ್ಯಾಡ್ ನ್ಯೂಝ್ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ವಿಕ್ಕಿ ಕೌಶಾಲ್ ಹಾಗೂ ತೃಪ್ತಿ ದಿಮ್ರಿ ಅಭಿನಯದ ಈ ಚಿತ್ರದ ಹಾಡುಗಳೂ ಭಾರಿ ವೈರಲ್ ಆಗಿದೆ. ಮುಖ್ಯವಾಗಿ ತೌಬಾ ತೌಬಾ ಡ್ಯಾನ್ಸ್ ಹಾಗೂ ಸಿಗ್ನೇಚರ್ ಸ್ಟೆಪ್ಸ್ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಹಲವರುು ಸಿಗ್ನೇಚರ್ ಸ್ಟೆಪ್ಸ್ ಹಾಕಿ ಮಿಂಚಿದ್ದಾರೆ. ಇದೀಗ ಹಳ್ಳಿಯ ಮಹಿಳೆಯೊಬ್ಬರು ಇಬ್ಬರು ಮಕ್ಕಳೊಂದಿಗೆ ತೌಬಾ ತೌಬಾ ಹಾಡಿಗೆ ಹೆಜ್ಜೆ ಹಾಕಿದ್ದರೆ. ಈ ಮಹಿಳೆಯ ಡ್ಯಾನ್ಸ್ ಪ್ರತಿಭೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅದ್ಭುತವಾಗಿ ತೌಬಾ ತೌಬಾ ಹಾಡಿಗೆ ಡ್ಯಾನ್ಸ್ ಮಾಡಿರುವ ಮಹಿಳೆ ವಿಡಿಯೋಗೆ ಬಾಲಿವುಡ್ ನಟ ವಿಕ್ಕಿ ಕೌಶಾಲ್ ವಾವ್ ಎಂದು ಕಮೆಂಟ್ ಮಾಡಿದ್ದಾರೆ. 

ತೌಬಾ ತೌಬಾ ಹಾಡಿಗೆ ಮಕ್ಕಳಿಂದ ಹಿಡಿದು ವಯಸ್ಕರು, ಹಿರಿಯರು ಹೆಜ್ಜೆ ಹಾಕುತ್ತಿದ್ದಾರೆ. ತಮ್ಮ ಡ್ಯಾನ್ಸ್ ಸ್ಕಿಲ್ ಪ್ರದರ್ಶಿಸಿದ್ದಾರೆ. ಇದೀಗ ವಿಡಿಯೋ ಕ್ರಿಯೆಟರ್ ರೂಪಾಲಿ ಸಿಂಗ್ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಸೀರೆಯಲ್ಲೇ ಈ ಮಹಿಳೆ ತೌಬಾ ತೌಬಾ ಡ್ಯಾನ್ಸ್ ಮಾಡಿದ್ದಾರೆ. 

Tap to resize

Latest Videos

ವಿಕ್ಕಿ ಕೌಶಾಲ್ ತೌಬಾ ತೌಬಾ ಹಾಡಿಗೆ ಕರ್ನಾಟಕದ ವೃದ್ಧಾಶ್ರಮದ ತಾಯಂದಿರ ಸ್ಟೆಪ್ಸ್ ವೈರಲ್!

ಹಳ್ಳಿಯ ಪುಟ್ಟ ಮನೆ, ಈ ಮನೆಯ ಮುಂದಿನ ಅಂಗಳದಲ್ಲಿ ತನ್ನಿಬ್ಬರು ಮಕ್ಕಳ ಜೊತೆ ಈ ಡ್ಯಾನ್ಸ್ ಮಾಡಲಾಗಿದೆ. ವಿಕ್ಕಿ ಕೌಶಾಲ್ ಸ್ಟೆಪ್ಸ್ ರೀತಿಯಲ್ಲೇ ಅಷ್ಟೇ ಅದ್ಭುತವಾಗಿ ಹೆಜ್ಜೆ ಹಾಕಿದ್ದಾಳೆ. ಡ್ಯಾನ್ಸ್ ಮಧ್ಯದಲ್ಲಿ ಹಿಂಭಾಗದಲ್ಲಿ ಮಹಿಳೆಯ ಪತಿ ಸೈಕಲ್ ಮೂಲಕ ಆಗಮಿಸಿದ್ದಾರೆ. ಪತಿ ಕೂಡ ಪತ್ನಿ ಡ್ಯಾನ್ಸ್ ಪ್ರತಿಭಗೆ ಪ್ರೋತ್ಸಾಹ ನೀಡಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Rupali Sing (@sad_rupaa)

 

ಮಹಿಳೆಯ ತೌಬಾ ತೌಬಾ ಡ್ಯಾನ್ಸ್‌ಗೆ ವಿಕ್ಕಿ ಕೌಶಾಲ್ ಮಾತ್ರವಲ್ಲ, ತೌಬಾ ತೌಬಾ ಡ್ಯಾನ್ಸ್ ಕೊರಿಯೋಗ್ರಾಫರ್ ಬಾಸ್ಕೋ ಮಾರ್ಟಿಸ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಅದ್ಭುತ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಮುಂಬೈನ ಡ್ಯಾನ್ಸಿಂಗ್ ಕಾಪ್ ಎಂದೇ ಜನಪ್ರಿಯವಾಗಿರುವ ಅಮೋಲ್ ಕಾಂಬ್ಲೆ ಕೂಡ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದರ ಜೊತೆಗೆ ಹಲವರು ಅದ್ಭುತ ಡ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.

ತೌಬಾ ತೌಬಾ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೆಂಡ್ ಆಗುತ್ತಿದೆ. ಹಲವರು ತೌಬಾ ತೌಬಾ ಡ್ಯಾನ್ಸ್ ಸ್ಟೆಪ್ಸ್ ಮರುಸೃಷ್ಟಿ ಮಾಡಿದ್ದಾರೆ. ಇತ್ತೀಚೆಗೆ ಬೆಳಗಾವಿಯ ವೃದ್ಧಾಶ್ರಮದ ತಾಯಂದಿರು ತಮ್ಮದೇ ರೀತಿಯಲ್ಲಿ ತೌಬಾ ತೌಬಾ ಡ್ಯಾನ್ಸ್ ರೀ ಕ್ರಿಯೆಟ್ ಮಾಡಿದ್ದರು. ಇದಕ್ಕಾಗಿ ವಿಶೇಷ ಸೀರೆಯಲ್ಲಿ ಕಾಣಿಸಿಕೊಂಡ ತಾಯಂದಿರುವ ಅದ್ಭುತವಾಗಿ ಡ್ಯಾನ್ಸ್ ಮಾಡಿ ಆನಂದಿಸಿದ್ದರು. 

ತೃಪ್ತಿ ದಿಮ್ರಿ ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ಬ್ಯಾಡ್ ನ್ಯೂಝ್ ಸಿನಿಮಾ ಹಾಡು ರಿಲೀಸ್!
 

click me!