
ಸಾತ್ನಾ: ರಷ್ಯಾದಲ್ಲಿ ವೈದ್ಯಕೀಯ ವ್ಯಾಸಂಗಕ್ಕಾಗಿ ತೆರಳಿದ್ದ 22 ವರ್ಷದ ಮೆಡಿಕಲ್ ವಿದ್ಯಾರ್ಥಿನಿಯೊಬ್ಬಳು ಅಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದ ಘಟನೆ ನಡೆದಿದೆ. ಮಧ್ಯಪ್ರದೇಶದ ಮೈಹಾರ್‌ನ 22 ವರ್ಷದ ವಿದ್ಯಾರ್ಥಿನಿ ಸೃಷ್ಟಿ ಶರ್ಮಾ ಎಂಬಾಕೆ ವೈದ್ಯಕೀಯ ಶಿಕ್ಷಣಕ್ಕಾಗಿ ರಷ್ಯಾಗೆ ತೆರಳಿದ್ದರು. ಆದರೆ ಅಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಫದಲು ಹೋದ ಪುತ್ರಿ ರಷ್ಯಾದಲ್ಲಿ ಹಠಾತ್ ನಿಧನವಾದ ಹಿನ್ನೆಲೆಯಲ್ಲಿ ಆಕೆಯ ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ತರಿಸಿಕೊಡಬೇಕು ಎಂದು ವಿದ್ಯಾರ್ಥಿನಿ ಸೃಷ್ಟಿ ಕುಟುಂಬಸ್ಥರು ಮೋಹನ್ ಯಾದವ್ ನೇತೃತ್ವದ ಮಧ್ಯಪ್ರದೇಶ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ರಷ್ಯಾದ ಮಾಧ್ಯಮಗಳ ಪ್ರಕಾರ ಶುಕ್ರವಾರ ಮಧ್ಯಾಹ್ನದ ನಂತರ ಈ ಅಪಘಾತ ಸಂಭವಿಸಿದೆ. ಘಟನೆ ನಡೆಯುವ ವೇಳೆ ಸೃಷ್ಟಿ ಶರ್ಮಾ ಅವರು ತನ್ನ ಆರು ಜನ ಸ್ನೇಹಿತರ ಜೊತೆ ಪ್ರವಾಸ ಹೋಗುತ್ತಿದ್ದರು. ಇವರು ಪ್ರಯಾಣಿಸುತ್ತಿದ್ದ ಕಾರಿನ ಟಯರ್ ಹಠಾತ್ ಆಗಿ ಕಳಚಿಕೊಂಡ ಪರಿಣಾಮ ಕಾರಿನ ಡೋರ್ ಸಡನ್ ಆಗಿ ತೆರೆದುಕೊಂಡಿದೆ. ಪರಿಣಾಮ ಸೃಷ್ಟಿ ಅವರು ಕೆಳಗೆ ಬಿದ್ದಿದ್ದಾರೆ. ಪರಿಣಾಮ ಸೃಷ್ಟಿ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
4 ವರ್ಷದ ಬಳಿಕ ಆಸ್ಟ್ರೇಲಿಯಾದಿಂದ ತಾಯ್ನಾಡಿಗೆ ಆಗಮಿಸುತ್ತಿದ್ದ 24ರ ಯುವತಿ ವಿಮಾನದಲ್ಲೇ ಸಾವು
ಘಟನೆ ನಡೆಯುವ ವೇಳೆ ಸೃಷ್ಟಿ ಸೀಟ್ ಬೆಲ್ಸ್ ಧರಿಸಿರಲಿಲ್ಲ ಎನ್ನಲಾಗಿದ್ದು, ಕಾರಿನಲ್ಲಿದ್ದ ಚಾಲಕ ಹಾಗೂ ಇತರ ವಿದ್ಯಾರ್ಥಿಗಳು ಸುರಕ್ಷಿತವಾಗಿ ಪಾರಾಗಿದ್ದಾರೆ. ಸೃಷ್ಟಿ ಅವರ ತಂದೆ ರಾಮ್‌ಕುಮಾರ್ ಶರ್ಮಾ ಅವರು ಕೂಡ ವೈದ್ಯರಾಗಿದ್ದು, ಸೃಷ್ಟಿ ಅವರ ಜೂನಿಯರ್ ಜೋಯಾ ಎಂಬಾಕೆ ಈ ದುರಂತದ ವಿಚಾರವನ್ನು ತಮಗೆ ತಿಳಿಸಿದ್ದಾಗಿ ಹೇಳಿದ್ದಾರೆ. ಸೃಷ್ಟಿಯವರು ರಷ್ಯಾದ ಉಫಾದಲ್ಲಿರುವ ಬಶ್ಕಿರ್ ವಿವಿಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದರು.
ವರದಿಗಳ ಪ್ರಕಾರ ಸೃಷ್ಟಿ ರಾಮ್‌ಕುಮಾರ್ ಶರ್ಮಾ ಅವರ ಏಕೈಕ ಪುತ್ರಿಯಾಗಿದ್ದರು. ರಾಮ್‌ಕುಮಾರ್ ಅವರು ಮೈಹಾರ್ ಜನರಿಗೆ ಚಿರಪರಿಚಿತರಾಗಿದ್ದು, ಇಲ್ಲಿ ಕ್ಲಿನಿಕ್ ಹೊಂದಿರುವ ಅವರು ಹಲವು ವರ್ಷಗಳಿಂದ ಇಲ್ಲಿನ ಜನರಿಗೆ ಆರೋಗ್ಯ ಸೇವೆ ನೀಡುತ್ತಿದ್ದಾರೆ. ಸೃಷ್ಟಿಗೂ ವೈದ್ಯೆಯಾಗುವ ಕನಸಿದ್ದ ಕಾರಣ ಆಕೆಯನ್ನು ಎಂಬಿಬಿಎಸ್ ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳುಹಿಸಲಾಗಿತ್ತು. ಶಿಕ್ಷಣ ಮುಗಿಸಿ ಬಂದ ಮೇಲೆ ಆಕೆ ಇಲ್ಲಿ ತಂದೆಯಂತೆಯೇ ಸೇವೆ ಸಲ್ಲಿಸುವ ಅಭಿಲಾಷೆ ಹೊಂದಿದ್ದರು. ಈ ವರ್ಷದ ಕೊನೆಯಲ್ಲಿ ಅವರ ವೈದ್ಯಕೀಯ ಕೋರ್ಸ್ ಮುಗಿಯುವುದರಲ್ಲಿತ್ತು. ಆದರೆ ವಿಧಿ ಇವರ ಬಾಳಲ್ಲಿ ಆಟವಾಡಿದ್ದು, ಎಳೆ ವಯಸ್ಸಿಗೆ ಸೃಷ್ಟಿ ಬಾರದ ಲೋಕಕ್ಕೆ ತೆರಳಿದ್ದಾಳೆ. ಇತ್ತ ತಮ್ಮ ಏಕೈಕ ಮಗಳನ್ನು ಕಳೆದುಕೊಂಡಿರುವ ರಾಮ್‌ಕುಮಾರ್ ಶರ್ಮಾ ಅವರ ದುಃಖ ಹೇಳತೀರದಾಗಿದೆ.
ರಷ್ಯಾ ನದಿಯಲ್ಲಿ ಮುಳುಗಿ 4 ಭಾರತೀಯ ವಿದ್ಯಾರ್ಥಿಗಳು ಸಾವು, ಪೋಷಕರ ಜತೆ ವಿಡಿಯೋ ಕಾಲ್‌ನಲ್ಲಿರುವಾಗಲೇ ಘಟನೆ!
ಮಗಳ ಮೃತದೇಹವನ್ನು ಹುಟ್ಟೂರಿಗೆ ವಾಪಸ್ ಕರೆತರಲು ಅವರು ರಾಜ್ಯದ ಸಿಎಂಗೆ ಮನವಿ ಮಾಡಿದ್ದು, ಸಿಎಂ ಮೋಹನ್ ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ರಷ್ಯಾದಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ ಸೃಷ್ಟಿ ಶರ್ಮಾ ಅವರ ಮೃತದೇಹವನ್ನು ಭಾರತಕ್ಕೆ ತರಲು ವಿದೇಶಾಂಗ ವ್ಯವಹಾರಗಳ ಇಲಾಖೆ ಹಾಗೂ ಭಾರತ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಹಾಗೆಯೇ ರಾಜ್ಯ ಸರ್ಕಾರವೂ ಕೂಡ ಅಗತ್ಯವಿರುವ ಎಲ್ಲಾ ಸಹಾಯವನ್ನು ಸೃಷ್ಟಿ ಅವರ ಕುಟುಂಬಕ್ಕೆ ನೀಡಲು ಬದ್ಧವಾಗಿದೆ ಎಂದು ಸರ್ಕಾರ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ