ಮೈಸೂರು-ದರ್ಭಾಂಗ ಎಕ್ಸ್‌ಪ್ರೆಸ್ ರೈಲು ದುರಂತ: ಒಂದಲ್ಲ ಎರಡಲ್ಲ 13 ಬೋಗಿಗಳು ಹಳಿ ತಪ್ಪಿ ಬೆಂಕಿ, 14 ಮಂದಿ ಗಂಭೀರ!

By Gowthami K  |  First Published Oct 12, 2024, 1:03 AM IST

ತಿರುವಳ್ಳುವರ್‌ನಲ್ಲಿ ಮೈಸೂರು-ದರ್ಭಾಂಗ ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 13 ಬೋಗಿಗಳು ಹಳಿ ತಪ್ಪಿ ಬೆಂಕಿ ಹೊತ್ತಿಕೊಂಡಿದೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಚೆನ್ನೈ ಮತ್ತು ಪಾಂಡಿಚೇರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.


ತಮಿಳುನಾಡಿನ ತಿರುವಳ್ಳುವರ್‌ ಗುಮ್ಮುಡಿಪೂಂಡಿಯಲ್ಲಿ ಶುಕ್ರವಾರ ರಾತ್ರಿ 8.30ರ ಸಮಯದಲ್ಲಿ ನಡೆದ ಗೂಡ್ಸ್ ರೈಲಿಗೆ ಗುದ್ದಿದ ಮೈಸೂರು ದರ್ಭಾಂಗ ಬಾಗ್‌ಮತಿ ಎಕ್ಸ್‌ಪ್ರೆಸ್‌ ರೈಲಿನ ದುರಂತದಲ್ಲಿ 13 ರೈಲು ಬೋಗಿಗಳು ಹಳಿ ತಪ್ಪಿ ಬೆಂಕಿ ಹೊತ್ತಿಕೊಂಡಿದೆ. ಕವರಪೆಟ್ಟೈ ಎಂಬ ಸ್ಥಳದಲ್ಲಿ ಈ ದುರ್ಘಟನೆ ನಡೆದಿದ್ದು, ಅಪಘಾತಕ್ಕೀಡಾಗುವ ವೇಳೆ ರೈಲು ಗಂಟೆಗೆ 75 ಕಿ ಮಿ ವೇಗದಲ್ಲಿ ಚಲಿಸುತ್ತಿತ್ತು ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

ಮೈಸೂರು-ದರ್ಭಾಂಗ ಎಕ್ಸ್‌ಪ್ರೆಸ್ ರೈಲು ಬೆಂಕಿ ಅವಘಡ, ಸಂಕಷ್ಟದಲ್ಲಿ ಸಿಲುಕಿದ ಕನ್ನಡಿಗರಿಗೆ ಸಹಾಯವಾಣಿ

Latest Videos

undefined

ಡಿಕ್ಕಿ ಹೊಡೆದ ಪರಿಣಾಮ 3 ಬೋಗಿಗಳು ಬೆಂಕಿಗೆ ಸುಟ್ಟು ಭಸ್ಮವಾಗಿದೆ. ತಮಿಳುನಾಡು ಸರ್ಕಾರದ ಮಾಹಿತಿ 20ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು,  ಇದರಲ್ಲಿ14 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನೆಲ್ಲ ಚೆನ್ನೈನ ಸ್ಟಾನ್ಲಿ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ. ಸಣ್ಣ ಪುಟ್ಟ ಗಾಯವಾದವರನ್ನು ಪೊನ್ನೇರಿ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ, ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಸ್ಥಳಿಯರು ಕೂಡ ಸಹಾಯಹಸ್ತ ಚಾಚಿದ್ದು, ನೀರು, ಆಹಾರ ಪೂರೈಕೆ ಮಾಡುತ್ತಿದ್ದಾರೆ. ಉಳಿದುಕೊಳ್ಳಲು ಸಹಾಯ ಮಾಡುತ್ತಿದ್ದಾರೆ. ಸುಮಾರು 45ಕ್ಕೂ ಹೆಚ್ಚು ಮಂದಿ ಕನ್ನಡಿಗರು ಈ ಘಟನೆಯಲ್ಲಿ ಸಿಲುಕಿದ್ದಾರೆಂದು ವರದಿ ತಿಳಿಸಿದೆ.

ದೆಹಲಿಯ ರೈಲ್ವೆ ವಾರ್ ರೂಂನಿಂದ ತಮಿಳುನಾಡು ರೈಲು ಅಪಘಾತದ ನಂತರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಕಳೆದೊಯ್ಯವಂತೆ  ಸಂಬಂಧಿಸಿದವರಿಗೆ ಮಾಹಿತಿ ನೀಡಿದ್ದಾರೆ. 

ರೈಲು ದುರಂತದ ಪರಿಣಾಮ ತಿರುಚಿರಾಪಳ್ಳಿ-ಹೌರಾ ಎಕ್ಸ್‌ಪ್ರೆಸ್, ಎರ್ನಾಕುಲಂ-ಟಾಟಾನಗರ ಎಕ್ಸ್‌ಪ್ರೆಸ್, ಮತ್ತು ಕಾಕಿನಾಡ-ಧನ್‌ಬಾದ್ ವಿಶೇಷ ಎಕ್ಸ್‌ಪ್ರೆಸ್ ಎಂಬ ಮೂರು ರೈಲು ಸಂಚಾರಕ್ಕೆ ಅಡ್ಡಿಯಾಗಿದ್ದು, ಈ ರೈಲುಗಳ ಮಾರ್ಗಗಳ ಬದಲಾವಣೆಯಾಗುವ ಸಾಧ್ಯತೆ ಇದೆ.

ಬೋನಿ ಕಪೂರ್‌ಗೂ ಮುನ್ನ ವಿವಾಹಿತ ನಟನೊಂದಿಗೆ ಶ್ರೀದೇವಿ ಸೀಕ್ರೆಟ್ ಮದುವೆ, ವಿಷ್ಯ ತಿಳಿದು ನಟನ ಪತ್ನಿ ಸಾಯಲು ಯತ್ನ!

10.30 ಮೈಸೂರಿನಿಂದ ಬಿಹಾರದ ದರ್ಭಾಂಗ 8 ರಾಜ್ಯಗಳನ್ನು ಹಾದು ಹೋಗುವ ರೈಲು ಇದಾಗಿದೆ.  ಸುಮಾರು 1360 ಪ್ರಯಾಣಿಕರು ಇದರಲ್ಲಿ ಪ್ರಯಾಣಿಸುತ್ತಿದ್ದರು ಎಂದು 
ತಿರುವಳ್ಳೂರು ಜಿಲ್ಲಾಧಿಕಾರಿ ಡಾ.ಟಿ.ಪ್ರಭುಶಂಕರ್ ಮಾಹಿತಿ ನೀಡಿದ್ದಾರೆ. ಸಿಗ್ನಲ್ ಸಮಸ್ಯೆಯೇ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ. 

ಮೈಸೂರಿನಿಂದ ಬೆಳಗ್ಗೆ 10.30ರ ಸಮಯದಲ್ಲಿ ಈ ರೈಲು ಹೊರಟಿತ್ತು. ಕರ್ನಾಟಕ,  ತಮಿಳುನಾಡು,ಆಂದ್ರಪ್ರದೇಶ, ತೆಲಂಗಾಣ ,ಮಹಾರಾಷ್ಟ್ರ,  ಮಧ್ಯಪ್ರದೇಶ, ಉತ್ತರ ಪ್ರದೇಶ ಮೂಲಕ ಬಿಹಾರ ತಲುಪಲಿದೆ.  ಈ ರೈಲು   3035 ಕಿಮೀ ಪ್ರಯಾಣ ಮಾಡಲಿದೆ.  ಲೂಪ್‌ ಲೈನ್‌ನಲ್ಲಿ ಟ್ರೈನ್ದ ಹೋಗಿದ್ದೆ ಈ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

click me!