ಕೋಲ್ಕತ್ತಾದಲ್ಲಿ ಭಕ್ತಿ ಹಾಗೂ ಶ್ರದ್ಧೆಯಿಂದ ಕೂಡಿದ ದುರ್ಗಾ ಪೂಜಾ ಸ್ಥಳಕ್ಕೂ ಕೆಲ ಮಾಡೆಲ್‌ಗಳು ಅರೆಬರೆ ಬಟ್ಟೆ ತೊಟ್ಟು ಬಂದಿದ್ದು, ಇದು ಸಾರ್ವಜನಿಕರನ್ನು ಸಿಟ್ಟಿಗೇಳುವಂತೆ ಮಾಡಿದೆ.
ಕೋಲ್ಕತ್ತಾ: ಭಾರತದ ಪಶ್ಚಿಮ ಬಂಗಾಳ ಹಾಗೂ ಕೋಲ್ಕತ್ತಾದಾದ್ಯಂತ ದುರ್ಗಾಪೂಜೆಯನ್ನು ದೇಶದಲ್ಲೇ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಬಹುತೇಕರು ಅಲ್ಲಿ ಮನೆ ಮನೆಗಳಲ್ಲಿ ದುರ್ಗೆಯನ್ನು ಕೂರಿಸುತ್ತಾರೆ ಹಾಗೂ ಸಾರ್ವಜನಿಕವಾಗಿಯೂ ಸಾಕಷ್ಟು ಕಡೆ ದುರ್ಗಾ ಪೆಂಡಾಲ್‌ಗಳನ್ನು ಸ್ಥಾಪಿಸಲಾಗಿರುತ್ತದೆ. ಆದರೆ ಭಕ್ತಿ ಹಾಗೂ ಶ್ರದ್ಧೆಯಿಂದ ಕೂಡಿದ ಈ ದುರ್ಗಾ ಪೂಜಾ ಸ್ಥಳಕ್ಕೂ ಕೆಲ ಮಾಡೆಲ್‌ಗಳು ಅರೆಬರೆ ಬಟ್ಟೆ ತೊಟ್ಟು ಬಂದಿದ್ದು, ಇದು ಸಾರ್ವಜನಿಕರನ್ನು ಸಿಟ್ಟಿಗೇಳುವಂತೆ ಮಾಡಿದೆ. ಅದೂ ಮಿಸ್ ಕೋಲ್ಕತ್ತಾ 2016 ರ ಪ್ರಶಸ್ತಿ ವಿಜೇತೆ ಎಂದು ಹೇಳಿಕೊಳ್ಳುವ ಹೇಮೋಶ್ರೀ ಭದ್ರ ಹಾಗೂ 2017ರ ಮಿಸ್ ಕೋಲ್ಕತ್ತಾ ಎಂದು ಹೇಳಿಕೊಳ್ಳುವ ಸನ್ನತಿ ಮಿಶ್ರಾ ಎಂಬಬಿಬ್ಬರು ಮಾಡೆಲ್‌ಗಳು ಹೀಗೆ ಎದೆ, ತೊಡೆ ತೋರಿಸಿಕೊಂಡು ದುರ್ಗಾ ಪೆಂಡಾಲ್‌ಗೆ ಬಂದಿದ್ದು, ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಧಾರ್ಮಿಕ ಆಚರಣೆಯಾದ ದುರ್ಗಾಪೂಜೆಯ ಸ್ಥಳಕ್ಕೂ ಈ ರೀತಿಯ ಡ್ರೆಸ್ ಧರಿಸಿ ಬರುವುದು ಅಗತ್ಯವೇ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
ಸನ್ನತಿ ಈ ಫೋಟೋವನ್ನು ಸಾಮಾಜಿಕ ಜಾಲತಾಣ ಇನ್ಸ್ಸಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬರೀ ಬಟ್ಟೆ ಮಾತ್ರವಲ್ಲ, ದುರ್ಗಾ ಪೆಂಡಾಲ್ ಮುಂದೆ ಈ ಮಾಡೆಲ್‌ಗಳು ಚಪ್ಪಲಿಯನ್ನು ಕೂಡ ಪಕ್ಕಕ್ಕೆ ಬಿಡದೇ ಹೈ ಹೀಲ್ಸ್ ಧರಿಸಿ ದೇವಿಯ ಮುಂದೆ ಫೋಟೋ ತೆಗೆಸಿಕೊಂಡಿದ್ದಾರೆ. ಒಬ್ಬಾಕೆ ಸೈಡ್ ಒಪನ್ ಇರುವ ಲಾಂಗ್ ಗವನ್ ಧರಿಸಿ ತೋಡೆ ತೋರಿಸಿದ್ದರೆ ಮತ್ತೊಬ್ಬಳು ಕಪ್ಪು ಪ್ಯಾಂಟ್ ಹಾಗೂ ಎದೆಯನ್ನು ಮಾತ್ರ ಅರೆಬರೆ ಕವರ್ ಮಾಡುವ ಕೆಂಪು ಬಣ್ಣದ ಬಟ್ಟೆ ಧರಿಸಿದ್ದಾಳೆ. ಹಾಗೆಯೇ ಮತ್ತೊಬ್ಬಾಕೆ ಕೇಸರಿ ಬಣ್ಣದ ಮಿನಿ ಸ್ಕರ್ಟ್ ಹಾಗೂ ಅದೇ ಬಣ್ಣದ ಅರೆಬರೆ ಮೇಲುಡುಗೆ ಧರಿಸಿದ್ದಾಳೆ.ಈ ಫೋಟೋಗಳನ್ನು ಇವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
undefined
ದುರ್ಗಾ ಪೂಜಾ ಸ್ಥಳಕ್ಕೆ ಶೂ ಧಿರಿಸಿ ಬಂದವರಿಗೆ ನಟಿ ಕಾಜೋಲ್ ಕ್ಲಾಸ್ : ವೀಡಿಯೋ ವೈರಲ್
ಬರೀ ಇಷ್ಟೇ ಅಲ್ಲ, 'ಇದು ತುಂಬಾ ಬಂಡಾಯವಾಗಿತ್ತು, ಇದು ಸಾಧ್ಯ ಎಂದು ನಾವು ಎಂದಿಗೂ ಯೋಚಿಸಲಿಲ್ಲ, ಹುಡುಗಿಯಾಗಿ ನಾವು ಯಾವಾಗಲೂ ನಮ್ಮ ದೇಹವು 'ಕೆಟ್ಟದು' ಎಂದು ತಿಳಿದಿದ್ದೇವೆ ಆದರೆ ಜೀವನವು ಹಾಗೆ ಅದು ಹೊಸ ಉದಾಹರಣೆಗಳನ್ನು ಮತ್ತು ಅನುಭವಗಳನ್ನು ನೀಡುತ್ತದೆ' ಎಂದು ಬರೆದುಕೊಂಡಿದ್ದಾಳೆ. ಈ ಫೋಟೋ ತಕ್ಷಣವೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇವರು ಮಾಡೆಲ್‌ಗಳಲ್ಲ, ಆಡಲ್ಟ್ ಸ್ಟಾರ್‌ಗಳು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ನಾನೊಬ್ಬ ಮುಸ್ಲಿಂ ಆದರೂ ನನಗೆ ಇವರು ಈ ರೀತಿಯ ಬಟ್ಟೆ ಧರಿಸಿ ತಾಯಿಯ ಬಳಿ ನಿಂತಿರುವುದನ್ನು ನೋಡುವುಕ್ಕೆ ಶೇಮ್ ಎನಿಸುತ್ತಿದೆ ಅಶ್ರಾಅಹ್ಮದ್ ಎಂಬುವವರು ಕಾಮೆಂಟ್ ಮಾಡಿದ್ದಾರೆ. ಪವಿತ್ರ ಸ್ಥಳದಲ್ಲಿ ಇವರು ಹೀಗೆ ಬಟ್ಟೆ ಧರಿಸಿ ನಿಂತರುವುದನ್ನು ನೋಡುವುದಕ್ಕೆ ಮುಸ್ಲಿಂ ಆಗಿರುವ ನನಗೆಯೇ ಅಸಹ್ಯವಾಗುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ಈ ರೀತಿ ಬಟ್ಟೆ ಧರಿಸುವ ಮೂಲಕ ನಿಮ್ಮ ದೇಹವನ್ನು ತೋರಿಸುತ್ತಿರುವುದಲ್ಲ, ಬೆತ್ತಲಾದ ನಿಮ್ಮ ಆತ್ಮವನ್ನು ತೋರಿಸುತ್ತಿದ್ದೀರಿ, ಇದು ಮಹಿಳಾ ಸಬಲೀಕರಣ ಅಲ್ಲ, ಇದು ಧರ್ಮವನ್ನು ಅವಮಾನಿಸುವ ರೀತಿ ಪೆಂಡಾಲ್ ಬಳಿ ಶೂ ಚಪ್ಪಲಿ ಧರಿಸುವ ಮೂಲಕ ನೀವು ಮಿತಿ ಮೀರಿದ್ದೀರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಧರ್ಮಾತೀತವಾಗಿ ಈ ಮಾಡೆಲ್‌ಗಳ ಅವತಾರಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಜಾನ್ ನಮಾಜ್ ವೇಳೆ ದುರ್ಗಾಪೂಜೆ ನಿಲ್ಲಿಸುವಂತೆ ಸೂಚಿಸಿದ ಬಾಂಗ್ಲಾದೇಶ ಸರ್ಕಾರ