UPಗಿಂತ ಕಠಿಣ ಮತಾಂತರ ಮಸೂದೆ ಪಾಸ್ ಮಾಡಿದ ಮಧ್ಯಪ್ರದೇಶ ಕ್ಯಾಬಿನೆಟ್!

By Suvarna NewsFirst Published Dec 26, 2020, 8:54 PM IST
Highlights

ಉತ್ತರ ಪ್ರದೇಶದಲ್ಲಿ ಜಾರಿಗೆ ತಂದಿರುವ ಲವ್ ಜಿಹಾದ್ ಸೇರಿದಂತೆ ಮತಾಂತರ ವಿರುದ್ಧ ಕಾನೂನು ಜಾರಿಗೆ ತಂದಿದೆ. ಇದೀಗ ಮಧ್ಯ ಪ್ರದೇಶ ಸಂಪುಟ ಮತ್ತಷ್ಟು ಕಠಿಣ ಮತಾಂತರ ಮಸೂದೆಗೆ ಒಪ್ಪಿಗೆ ನೀಡಿದೆ. ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ಉಲ್ಲೇಖಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ
 

ಭೋಪಾಲ್(ಡಿ.26): ಮಧ್ಯ ಪ್ರದೇಶ ಸಂಪುಟ ಧ್ವನಿ ಮತದ ಮೂಲಕ ಮಂತಾತರ ವಿರುದ್ಧ ಪ್ರಬಲ ಮಸೂದೆಗೆ ಒಪ್ಪಿಗೆ ಸೂಚಿಸಿದೆ. ಈ ಮೂಲಕ ಉತ್ತರ ಪ್ರದೇಶ ಸರ್ಕಾರದ ಬೆನ್ನಲ್ಲೇ, ಇದೀಗ ಮಧ್ಯಪ್ರದೇಶ ಸರ್ಕಾರ ಮತಾಂತರ ಕಾನೂನು ಜಾರಿಗೆ ತರಲು ಹೆಜ್ಜೆ ಇಟ್ಟಿದೆ.

ಪೋಷಕರ ಒಪ್ಪಿಗೆ ಮೇರೆಗೆ ನಡೆಯುತ್ತಿದ್ದ ಹಿಂದೂ-ಮುಸ್ಲಿಂ ಮದುವೆ ನಿಲ್ಲಿಸಿದ ಪೊಲೀಸ್!.

ಮಧ್ಯ ಪ್ರದೇಶದ ಸರ್ಕಾರದ ಮತಾಂತರ ಮಸೂದೆಯಲ್ಲಿ ತಪ್ಪಿತಸ್ಥರಿಗೆ 10 ವರ್ಷ ಜೈಲು ಹಾಗೂ 1 ಲಕ್ಷ ರೂಪಾಯಿವರೆಗೆ ದಂಡ ಹಾಕುವುದಾಗಿ ಹೇಳಿದೆ. ಮುಂದಿನ ತಿಂಗಳು ನಡೆಯಲಿರುವ ವಿಧಾನ ಸಭಾ ಅಧಿವೇಶನಕ್ಕೂ ಮುನ್ನ ಧರ್ಮ ಸ್ವಾತಂತ್ರ ಬಿಲ್ 2020 ಮಸೂದೆಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ನೇತೃತ್ವದ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. 

ಹೊಸ ಮಸೂದೆ ಪ್ರಕಾರ, ಯಾರನ್ನೂ ಮತಾಂತರಕ್ಕೆ ಒತ್ತಾಯಿಸಿದರೆ 1 ರಿಂದ 5 ವರ್ಷಗಳ ಜೈಲು ಶಿಕ್ಷೆ ಹಾಗೂ ಕನಿಷ್ಠ 25.000 ರೂಪಾಯಿ ದಂಡ ಹಾಕಲಾಗುತ್ತಿದೆ. ಇನ್ನು ಪರಿಶಿಷ್ಠ ಜಾತಿ, ಪರಿಷ್ಠಿತ ಪಂಗಡ ಸೇರಿದವರನ್ನು ಮತಾಂತರ ಮಾಡಿದರೆ 2 ರಿಂದ 10 ವರ್ಷಗಳ ವರೆಗೆ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ವರೆಗೆ ದಂಡ ಹಾಕಲಾಗುವುದು ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

ಲವ್‌ಜಿಹಾದ್ ಕಾನೂನಿನಡಿ ಉತ್ತರ ಪ್ರದೇಶದಲ್ಲಿ ಮೊದಲ ಬಂಧನ..

ಯಾರಾದರೂ ಧರ್ಮ ಬದಲಿಸಲು ಇಚ್ಚಿಸಿದರೆ 2 ತಿಂಗಳ ಮುಂಚೆ ಸೂಚಿಸಬೇಕು. ಆದರೆ ಧರ್ಮ ಬದಲಾವಣೆ ಕಾರ್ಯ ವಿಫಲಗೊಂಡರೆ ಮದುವೆಯನ್ನು ಅನೂರ್ಜಿತ ಎಂದು ಪರಿಗಣಿಸಲಾಗುತ್ತದೆ. ಮಧ್ಯ ಪ್ರದೇಶ ಸರ್ಕಾರ ತಂದಿರುವ ಮತಾಂತರ ಮಸೂದೆ ಯುಪಿಗಿಂತ ಕಠಿಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

click me!