ಕೊರೋನಾ ಔಷಧ ಫ್ಯಾವಿಪಿರಾವಿರ್ ಭಾರತದಲ್ಲಿ ಬಿಡುಗಡೆ; ಪ್ರತಿ ಮಾತ್ರೆಗೆ 49 ರೂ!

Published : Aug 06, 2020, 03:25 PM IST
ಕೊರೋನಾ ಔಷಧ ಫ್ಯಾವಿಪಿರಾವಿರ್ ಭಾರತದಲ್ಲಿ ಬಿಡುಗಡೆ; ಪ್ರತಿ ಮಾತ್ರೆಗೆ 49 ರೂ!

ಸಾರಾಂಶ

ವಿಶ್ವವನ್ನೇ ನಲುಗಿಸಿರುವ ಕೊರೋನಾ ವೈರಸ್ ಮಹಾಮಾರಿಗೆ ನಿಯಂತ್ರಣಕ್ಕೆ ಲಭ್ಯವಿರುವ ಫ್ಯಾವಿಪಿರಾವಿರ್ ಮಾತ್ರೆ ಇದೀಗ ಭಾರತದಲ್ಲಿ ಬಿಡುಗಡೆಯಾಗಿದೆ. ಭಾರತದ ಡ್ರಗ್ ಕಂಟ್ರೋಲ್ ಜನರಲ್ ಫ್ಯಾವಿಪಿರಾವಿರ್‌ಗೆ ಮಾನ್ಯತೆ ನೀಡಲಾಗಿದ್ದು, ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಿದೆ.

ನವದೆಹಲಿ(ಆ.06): ಡ್ರಗ್ ಫಾರ್ಮಾ ಲುಪಿನ್ ಕಂಪನಿ ಇದೀಗ ಭಾರತದಲ್ಲಿ ಕೊರೋನಾ ನಿಯಂತ್ರಣ ಔಷಧ ಫ್ಯಾವಿಪಿರಾವಿರ್ ಬಿಡುಗಡೆ ಮಾಡಿದೆ. ಭಾರತದಲ್ಲಿ ಕೋವಿಹಾಲ್ಟ್ ಅನ್ನೋ ಹೆಸರಿನಲ್ಲಿ ಈ ಔಷಧ ಬಿಡುಗಡೆಯಾಗುತ್ತಿದೆ. ಫ್ಯಾವಿಪಿರಾವಿರ್ ಮಾತ್ರೆ ಕೊರೋನಾ ವೈರಸ್ ತುಗುಲಿದ ಆರಂಭಿಕ ಹಂತದಲ್ಲಿ ಪರಿಣಾಮಕಾರಿಯಾಗಿದೆ ಎಂದು ಪ್ರಯೋಗದಲ್ಲಿ ದೃಢಪಟ್ಟಿದೆ. ವಿಶೇಷ ಅಂದರೆ ಪ್ರತಿ ಮಾತ್ರೆ ಬೆಲೆ 49 ರೂಪಾಯಿ ಮಾತ್ರ.

ಕೊರೋನಾ ಲಸಿಕೆಯಲ್ಲಿ ಝೈಡಸ್ ಕ್ಯಾಡಿಲಾಗೆ ಭರ್ಜರಿ ಯಶಸ್ಸು, ಮೊದಲ ಪ್ರಯೋಗ ಯಶಸ್ವಿ!.

ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(DCGI) ಫ್ಯಾವಿಪಿರಾವಿರ್ ಕೊರೋನಾ ನಿಯಂತ್ರಣ ಮಾತ್ರೆಗೆ ಅನುಮತಿ ನೀಡಿದೆ. ಪ್ರತಿ ಶೀಟ್‌ನಲ್ಲಿ 200mgಯ 10 ಮಾತ್ರೆಗಳಿದ್ದು, ಪ್ರತಿ ಮಾತ್ರೆ ಬೆಲೆ 49 ರೂಪಾಯಿ. ಇದು ಮೈಲ್ಡ್ ಡೋಸೇಜ್ ಆಗಿದ್ದು, ಕೊರೋನಾ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಅಧಿಕೃತ ಮಾನ್ಯತೆ ಕೂಡ ಸಿಕ್ಕಿದೆ ಎಂದು ಲುಪಿನ್ ಡ್ರಗ್ ಫಾರ್ಮ್ ಭಾರತದ ನಿರ್ದೇಶಕ ರಾಜೀವ್ ಸಿಬಲ್ ಹೇಳಿದ್ದಾರೆ.

ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದೆ. ಸದ್ಯ 19,64,536 ಪ್ರಕರಣಗಳು ವರದಿಯಾಗಿದೆ. 5,95,501 ಪ್ರಕರಣಗಳು ಸಕ್ರಿಯವಾಗಿದೆ. ಇನ್ನು 13 ಲಕ್ಷ ಮಂದಿ ಕೊರೋನಾ ವೈರಸ್‌ನಿಂದ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 40,699ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,51,449ಕ್ಕೇರಿಕೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!