ಥ್ರಿಲ್‌ಗೆ ಸ್ನೇಹಿತನಿಂದ ಡ್ರಗ್ ಇಂಜೆಕ್ಷನ್ ಪಡೆದ 18ರ ಯುವತಿ, ಓವರ್‌ಡೋಸ್ ಆಗಿ ಸತ್ತೇ ಹೋದ್ಲು!

By Anusha KbFirst Published Apr 10, 2024, 2:03 PM IST
Highlights

ಮೋಜು ಅಥವಾ ಥ್ರಿಲ್‌ಗಾಗಿ ತನ್ನ ಸ್ನೇಹಿತನಿಂದ ಡ್ರಗ್ ಇಂಜೆಕ್ಷನ್ ಪಡೆದ ಯುವತಿ ಓವರ್‌ಡೋಸ್‌ ಆಗಿ ಸಾವಿಗೀಡಾದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. 

ನವದೆಹಲಿ: ಮೋಜು ಅಥವಾ ಥ್ರಿಲ್‌ಗಾಗಿ ತನ್ನ ಸ್ನೇಹಿತನಿಂದ ಡ್ರಗ್ ಇಂಜೆಕ್ಷನ್ ಪಡೆದ ಯುವತಿ ಓವರ್‌ಡೋಸ್‌ ಆಗಿ ಸಾವಿಗೀಡಾದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಥ್ರಿಲ್ ನೀಡುವ ರೋಮಾಂಚನಕಾರಿ ಅನುಭವ ಸಿಗುವುದು ಎಂದು ಹೇಳಿ ಯುವತಿಯನ್ನು ನಂಬಿಸಿದ 28 ವರ್ಷದ ಸ್ನೇಹಿತ ಆಕೆಗೆ ಇಂಜೆಕ್ಷನ್ ಮೂಲಕ ಡ್ರಗ್ ನೀಡಿದ್ದಾನೆ. ಆದರೆ ಅದು ಓವರ್‌ಡೋಸ್ ಆಗಿ ಆಕೆ ಸಾವನ್ನಪ್ಪಿದ್ದಾಳೆ. 

ಮೃತ ಯುವತಿ ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಏಪ್ರಿಲ್ 3 ರಂದು ಲಕ್ನೋಗೆ ಬಂದಿದ್ದಳು. ಈ ವೇಳೆ ಆಕೆಯ 28 ವರ್ಷದ ಸ್ನೇಹಿತ ಆಕೆಗೆ ಡ್ರಗ್‌ ಇಂಜೆಕ್ಟ್ ಮಾಡುವುದರಿಂದ ಥ್ರಿಲ್ಲಿಂಗ್ ಅನುಭವವಾಗುವುದು ಎಂದು ಹೇಳಿದ್ದು, ಇದರ ಅನುಭವ ಪಡೆಯುವುದಕ್ಕೆ ಆಕೆ ಮುಂದಾಗಿದ್ದಾಳೆ. ಅದರಂತೆ ಯುವಕ ವಿವೇಕ್ ಮಯೂರ್ ಎಂಬಾತ ಆಕೆಯನ್ನು  ಲಕ್ನೋದ ತಿವಾರಿಗಂಜ್‌ನಲ್ಲಿರುವ ಖಾಲಿ ಫ್ಲಾಟೊಂದಕ್ಕೆ ಕರೆದೊಯ್ದಿದ್ದಾನೆ. ಹಾಗೂ ಅಲ್ಲಿ ಆಕೆಗೆ ಅಮಲೇರಿಸುವ ಡ್ರಗ್ ಹಾಗೂ ಕೆಲ ಕಿಕ್ ನೀಡುವ ಔಷಧಿಯ ಮಿಶ್ರಣವನ್ನು ಇಂಜೆಕ್ಟ್ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.  ಮೃತ ಯುವತಿ ಏಪ್ರಿಲ್ 7 ರಂದು ಬೆಂಗಳೂರಿಗೆ ತೆರಳುವುದಕ್ಕಾಗಿ ರೈಲು ಏರಬೇಕಿತ್ತು. ಆದರೆ ಅದೇ ದಿನ ಈ ದುರಂತ ಸಂಭವಿಸಿದೆ. ಏಪ್ರಿಲ್ 7 ರಂದು ಮಹಾನಗರದ ತನ್ನ ಮನೆಯಿಂದ ಬಂದ ಆಕೆ ಸ್ನೇಹಿತನ ಈ ಥ್ರಿಲ್ ಏರಿಸುವ ಆಮಿಷಕ್ಕೆ ಬಲಿಯಾಗಿದ್ದಾಳೆ. 

ಡ್ರಗ್ ಪ್ರಕರಣದಲ್ಲಿ ಆರೋಪಿಯ ರಕ್ಷಿಸಿದ ಇಲಿ: ಪೊಲೀಸ್ ಠಾಣೆಯಲ್ಲೇ ಸಾಕ್ಷ್ಯ ನಾಶಪಡಿಸಿದ ಮೂಷಿಕ

ಘಟನೆಗೆ ಸಂಬಂಧಿಸಿದಂತೆ ಆರೋಪಿ ವಿವೇಕ್ ಮಯೂರ್‌ನನ್ನು ಬರಬಂಕಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಈತ ಮಹಾನಗರದಲ್ಲಿ ವಾಸವಾಗಿದ್ದು, ಮೃತ ಯುವತಿಗೆ ಸ್ನೇಹಿತನಾಗಿದ್ದ ಎಂಎದು ವಿಭೂತಿಖಂಡ್‌ನ ಎಸಿಪಿ ಅನಿಂಧ್ಯಾ ವಿಕ್ರಂ ಸಿಂಗ್ ಹೇಳಿದ್ದಾರೆ.  ಬಿಬಿಡಿ  ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಅಡಿ ಕೊಲೆ ಪ್ರಕರಣ ದಾಖಲಿಸಿದ್ದರು. ಆದರೆ ನಂತರದಲ್ಲಿ ಸೆಕ್ಷನ್ 304 ಗೆ (ಕೊಲೆಯ ಉದ್ದೇಶವಿಲ್ಲದ ಪ್ರಕರಣ) ಅದನ್ನು ಬದಲಿಸಿದ್ದಾರೆ.

ಕಾಕ್‌ಟೈಲ್ ಓವರ್‌ಡೋಸ್‌ ಆದ ಬಳಿಕ ಯುವತಿಯ ಸ್ಥಿತಿ ಗಂಭೀರವಾಗಿತ್ತು, ಇತ್ತ ಯುವಕನ್ನು ಪೂರ್ತಿಯಾಗಿ ಅಮಲೇರಿಸಿಕೊಂಡಿದ್ದ. ಬಳಿಕ ಪರಿಸ್ಥಿತಿ ವಿಷಮಕ್ಕೆ ಹೋಗುವುದನ್ನು ತಿಳಿದು ಆತನೇ UP 112 ಗೆ ಕರೆ ಮಾಡಿ ಸಹಾಯ ಕೇಳಿದ್ದಾನೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ  ಇಸಿಜಿ ಮಾಡುತ್ತಿದ್ದಂತೆ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.

ಹೂತ ಹೆಣಗಳ ಬಗೆಯುತ್ತಿರುವ ಯುವಕರು; ಈ ದೇಶದಲ್ಲಿ ಸ್ಮಶಾನಕ್ಕೂ ಪೋಲೀಸರ ಕಣ್ಗಾವಲು

ಘಟನೆಗೆ ಸಂಬಂಧಿಸಿದಂತೆ ಯುವತಿ ಪೋಷಕರು ದೂರು ನೀಡಿದ್ದು, ಆಕೆಯನ್ನು ಹತ್ಯೆ ಮಾಡುವ ಉದ್ದೇಶದಿಂದಲೇ ಆತ ಡ್ರಗ್ ಓವರ್‌ಡೋಸ್ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ಆದರೆ ಪೊಲೀಸರ ವಿಚಾರಣೆ ವೇಳೆ ಆರೋಪಿ ರೋಮಾಂಚನಕಾರಿ ಅನುಭವ ಪಡೆಯಲು ಹೋಗಿ ಈ ಅನಾಹುತವಾಗಿದೆ ಎಂದು ಹೇಳಿಕೊಂಡಿದ್ದಾನೆ. ಮನೆಯಿಂದ ಹೊರಟು ಬೆಂಗಳೂರು ರೈಲೇರುವ ಮೊದಲು ಯುವತಿ ತನಗೆ ವ್ಯಸನಕಾರಿ ಮಾದಕ ದ್ರವ್ಯ ಸೇವಿಸಬೇಕೆಂದೆನಿಸುತ್ತಿದೆ ಎಂದು ಹೇಳಿದ್ದಳು ಎಂದು ಆತ ಪೊಲೀಸರ ಮುಂದೆ ಹೇಳಿದ್ದಾನೆ. ಹೀಗಾಗಿ ತಿವಾರಿಗಂಜ್‌ನಲ್ಲಿದ್ದ ಖಾಲಿಯಿದ್ದ ಸ್ನೇಹಿತನ ಪ್ಲಾಟ್‌ಗೆ ಆಕೆಯನ್ನು ಕರೆದೊಯ್ದೆ ಅಲ್ಲಿ ಡ್ರಗ್ ಮಿಕ್ಸ್ ಮಾಡಿ ಮೊದಲು ನಾನು ಇಂಜೆಕ್ಟ್ ಮಾಡಿಕೊಂಡು ನಂತರ ಆಕೆಗೆ ನೀಡಿದೆ ಎಂದು ಹೇಳಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ಯುವತಿಯ ತಾಯಿ ನೀಡಿದ ದೂರಿನ ಮೇರೆಗೆ ಯುವಕನನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಎಫ್‌ಐಆರ್ ದಾಖಲಿಸಿದ್ದು, ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ತನಿಖೆಯ ವೇಳೆ, ಈ ಹುಡುಗಿ ಈ ಹಿಂದೆ ಲಕ್ನೋದ ನ್ಯೂ ಹೈದರಾಬಾದ್ ಪ್ರದೇಶದಲ್ಲಿರುವ ವಿವೇಕ್ ಅವರಿಗೆ ಸೇರಿದ ಮನೆಯಲ್ಲಿ ತನ್ನ ಕುಟುಂಬ ಸದಸ್ಯರೊಂದಿಗೆ ಬಾಡಿಗೆಗಿದ್ದಳು ಎಂದು ಪೊಲೀಸರಿಗೆ ತಿಳಿದುಬಂದಿದೆ. ವಿವೇಕ್ ಮಾದಕ ವ್ಯಸನಿಯಾಗಿದ್ದು, ಆಕೆಯನ್ನು ಕೂಡ ಮಾದಕ ವಸ್ತು ಸೇವಿಸುವಂತೆ ಮಾಡಿದ್ದಾರೆ ಎಂದು ಯುವತಿ ಕುಟುಂಬದವರು ಹೇಳಿದ್ದಾರೆ. ಹುಡುಗಿಯ ಸಾವಿನ ವಿಷಯ ತಿಳಿದ ತಕ್ಷಣ ಆರೋಪಿ ಹೆದರಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಆದರೆ ಅದಕ್ಕೂ ಮೊದಲು ಹುಡುಗಿ ಮನೆಯವರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾನೆ. ಆದರೆ ಪೊಲೀಸರು ಇಂದಿರಾ ಕಾಲುವೆ ಬಳಿ ವಿವೇಕ್‌ನನ್ನು ಬಂಧಿಸಿದ್ದರು.

click me!